ದಿಗ್ಗಜರ ವಾಕ್ಸಮರ
ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಪ್ರಚಾರದ ಅಬ್ಬರ ತೀವ್ರ ಸ್ವರೂಪ ಪಡೆದುಕೊಂಡಿದೆ. ತಮ್ಮ ಅಭ್ಯರ್ಥಿಗಳ ಪರವಾಗಿ...
ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಪ್ರಚಾರದ ಅಬ್ಬರ ತೀವ್ರ ಸ್ವರೂಪ ಪಡೆದುಕೊಂಡಿದೆ. ತಮ್ಮ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರ ನಡೆಸುತ್ತಿರುವ ನಾಯಕರು, ಸಮಯ ಸಿಕ್ಕಾಗ ಪರಸ್ಪರ ವಾಕ್ಸಮರಕ್ಕೆ ಮುಂದಾಗುತ್ತಿದ್ದಾರೆ.
ಈ ದೇವೇಗೌಡ - ಕುಮಾರಸ್ವಾಮಿಯನ್ನು ರಾಜಕೀಯವಾಗಿ ಬೆತ್ತಲೆಗೊಳಿಸಿ, ರಾಜಕಾರಣವನ್ನು ಅಂತ್ಯ ಮಾಡಲು ಎಸ್.ಎಂ. ಕೃಷ್ಣ ಬಯಸಿದ್ದಾರೆ. ಜನ ಬೆಂಬಲ ಮತ್ತು ದೇವರ ಆಶೀರ್ವಾದ ಇರುವ ತನಕ ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ.
ಟಿ ಎಚ್.ಡಿ.ದೇವೇಗೌಡ, ಜೆಡಿಎಸ್ ವರಿಷ್ಠ
ಮಾಜಿ ಪ್ರಧಾನಿ ದೇವೇಗೌಡರ ಪೌರೋಹಿತ್ಯದಲ್ಲೇ ಜೆಡಿಎಸ್ ಮತ್ತು ಬಿಜೆಪಿ ಹಾರ ಬದಲಾಯಿಸಿಕೊಂಡು ಸೈದ್ಧಾಂತಿಕ ನಿಲುವಿಗೆ ಎಳ್ಳು-ನೀರು ಬಿಟ್ಟಿವೆ. ಆ ನಿಲುವು ಇದ್ದಿದ್ದರೆ ಕೋಮುವಾದಿ ಬಿಜೆಪಿ ಜತೆ ಹೋಗುತ್ತಿರಲಿಲ್ಲ.
-ಎಸ್.ಎಂ.ಕೃಷ್ಣ,
ಮಾಜಿ ವಿದೇಶಾಂಗ ಸಚಿವ
ಯಡಿಯೂರಪ್ಪ ಮತ್ತು ನಾನು ಹಾರ ಹಾಕಿಸಿಕೊಂಡಿದ್ದನ್ನು ದೊಡ್ಡದಾಗಿ ಬಿಂಬಿಸಿದರು. ಅಪವಿತ್ರ ಮೈತ್ರಿ ಎಂದರು. ಮೊನ್ನೆ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ರಾಜ್ಯಪಾಲರ ಚಹಾಕೂಟದಲ್ಲಿ ಇದೇ ಸಿಎಂ ಸಿದ್ದರಾಮಯ್ಯ ಅವರು ಯಡಿಯೂರಪ್ಪ ಕಿವಿಯಲ್ಲಿ ಗುಸುಗುಸು ಅಂತಿದ್ರಲ್ಲಾ, ಅದಕ್ಕೇಕೆ ಪ್ರಾಮುಖ್ಯ ನೀಡುತ್ತಿಲ್ಲ?.
- ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಜೆಡಿಎಸ್ ಮತ್ತು ಬಿಜೆಪಿ ಲಿವಿಂಗ್ ಟುಗೆದರ್ ರೀತಿ ಸಂಸಾರ ಮಾಡುವ ಬದಲು ಮ್ಯಾರೇಜ್ ಆಗುವುದೇ ಒಳ್ಳೆಯದು. ಜೆಡಿಎಸ್ ನಾಯಕರು ಅವಕಾಶವಾದಿಗಳು.
- ಎಸ್.ಆರ್.ಪಾಟೀಲ್,
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ದಲಿತ ಸಮುದಾಯದ ಮೇಲೆ ಕಾಳಜಿ, ನನ್ನ ಬಗ್ಗೆ ಅನುಕಂಪ ಇದ್ದಿದ್ದರೆ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ವಿರುದ್ಧ ಅಭ್ಯರ್ಥಿ ನಿಲ್ಲಿಸದೇ ಮುಖ್ಯಮಂತ್ರಿ ಹುದ್ದೆಗೆ ದಾರಿ ಸುಗಮಗೊಳಿಸಬಹುದಿತ್ತು.
- ಡಾ.ಜಿ.ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ
ತಮ್ಮನ್ನು ನಂಬಿದ ಒಕ್ಕಲಿಗ ನಾಯಕರಿಗೆ ದೇವೇಗೌಡರು ಯಾವುದೇ ಅನುಕೂಲ ಮಾಡಿ ಕೊಟ್ಟಿಲ್ಲ. ಸಿ.ಎಸ್.ಪುಟ್ಟೇಗೌಡ, ವಿಶ್ವನಾಥ್, ಮಾಜಿ ಸ್ಪೀಕರ್ ಕೃಷ್ಣ, ಮಾಜಿ ಸಚಿವ ಬಿ.ಎಲ್.ಶಂಕರ್ ಸೇರಿ ಅನೇಕರಿಗೆ ಅವರು ಮೋಸ ಮಾಡಿದ್ದಾರೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ