ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ರಾಜ್ಯ ವಿಭಜನೆ ಆಗುವುದಾದರೆ ನನ್ನ ಮೃತದೇಹದ ಮೇಲಾಗಲಿ

ನನ್ನ ಕೊನೆಯ ಉಸಿರಿರುವವರೆಗೂ ಕರ್ನಾಟಕ ಏಕೀಕರಣ, ಕನ್ನಡದ ಬಗ್ಗೆ ಪ್ರತಿಪಾದನೆ ...

Rashmi Kasaragodu
Updated On : 18 Aug 2013, 1:38 am

ನನ್ನ ಕೊನೆಯ ಉಸಿರಿರುವವರೆಗೂ ಕರ್ನಾಟಕ ಏಕೀಕರಣ, ಕನ್ನಡದ ಬಗ್ಗೆ ಪ್ರತಿಪಾದನೆ ಮಾಡುತ್ತೇನೆ. ತೆಲಂಗಾಣದ ಬೆನ್ನಲ್ಲೆ ಕರ್ನಾಟಕದ ಅಲ್ಲಲ್ಲಿ ಪ್ರತ್ಯೇಕ ರಾಜ್ಯ ರಚನೆಯ ಅಪಸ್ವರ ಕೇಳಿ ಬರುತ್ತಿರುವುದು ಸರಿಯಲ್ಲ. ಅಸಲಿಗೆ ಇದು ಪ್ರತ್ಯೇಕತೆಯ ಕೂಗಲ್ಲ, ಬದಲಿಗೆ ಅಸಮಾಧಾನವಷ್ಟೇ. ಮಲಗಿರುವ ಸರ್ಕಾರ ಇನ್ನಾದರೂ ಎಚ್ಚರಗೊಂಡು ಸಮರೋಪಾದಿಯಲ್ಲಿ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಮುಂದಾಗಬೇಕು. ಇಲ್ಲದೇ ಹೋದಲ್ಲಿ ತೆಲಂಗಾಣದ ಆಪತ್ತು ರಾಜ್ಯಕ್ಕೂ ಅಪ್ಪಳಿಬಹುದು. ಕರ್ನಾಟಕ ಹರಿದು ಹಂಚಿ ಹೋಗುವುದನ್ನು ಕನಸಲ್ಲಿಯೂ ಊಹಿಸಲು ಸಾಧ್ಯವಿಲ್ಲ. ಸರ್ಕಾರ ಇದಕ್ಕೆ ಆಸ್ಪದ ಕೊಡದಿರಲಿ.  ಹೀಗೆ ಕನ್ನಡ, ಕರ್ನಾಟಕದ ಕಳಕಳಿ ವ್ಯಕ್ತ ಪಡಿಸಿರುವ ಕನ್ನಡದ ಕಟ್ಟಾಳು, ನಾಡೋಜ ಡಾ. ಪಾಟೀಲ ಪುಟ್ಟಪ್ಪ, ಪ್ರತ್ಯೇಕತೆಯ ಕೂಗು ಗಟ್ಟಿಗೊಳ್ಳುವ ಮುನ್ನವೇ ಚಿವುಟಿ ಹಾಕಬೇಕೆಂದರು. ಹಾಗೊಂದು ವೇಳೆ ರಾಜ್ಯ ವಿಭಜನೆಯಾಗುವುದಾದರೆ ಅದು ನನ್ನ ಮೃತದೇಹದ ಮೇಲಾಗಲಿ ಎಂದು ಕಠೋರವಾಗಿ ನುಡಿದರು.

Advertisement

Advertisement

-  ಪ್ರಕಾಶ ಎಸ್. ಶೇಟ್, ಕನ್ನಡಪ್ರಭ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement