ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಢುಂಢಿ ಲೇಖಕ ಯೋಗೇಶ್ ಸೆರೆ

ಗಣೇಶ ವಿಘ್ನಗಳ ನಿವಾರಕನಲ್ಲ. ವಿಘ್ನಗಳ ನಾಯಕ, ಕ್ರೂರಿ ಎಂದೆಲ್ಲ ಬಿಂಬಿಸಿ, ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ 'ಢುಂಢಿ' ಎಂಬ ಕಾದಂಬರಿ ಹೊರತಂದಿರುವ ಯೋಗೇಶ್ ಮಾಸ್ಟರ್...

Vishwanath S
Updated On : 30 Aug 2013, 2:17 am

ಬೆಂಗಳೂರು: ಗಣೇಶ ವಿಘ್ನಗಳ ನಿವಾರಕನಲ್ಲ. ವಿಘ್ನಗಳ ನಾಯಕ, ಕ್ರೂರಿ ಎಂದೆಲ್ಲ ಬಿಂಬಿಸಿ, ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ 'ಢುಂಢಿ' ಎಂಬ ಕಾದಂಬರಿಯನ್ನು ಹೊರತಂದಿರುವ ಯೋಗೇಶ್ ಮಾಸ್ಟರ್ ಅವರನ್ನು ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಕುಂಬಳಗೋಡು ಸಮೀಪದ ಮರಿಯಪ್ಪನಪಾಳ್ಯ ನಿವಾಸಿ ಯೋಗೇಶ್ ಮಾಸ್ಟರ್ ಅವರನ್ನು ಗುರುವಾರ ಸಂಜೆ ಸುಮಾರು 6 ಗಂಟೆ ವೇಳೆಗೆ ಬಂಧಿಸಲಾಗಿದೆ. ಸುಮಾರು ನಾಲ್ಕು ಗಂಟೆಗಳ ಕಾಲ ಠಾಣೆಯಲ್ಲಿ ಇರಿಸಿಕೊಂಡು ವಿಚಾರಣೆ ನಡೆಸಿದ ಪೊಲೀಸರು ಕಾದಂಬರಿ  ಬರೆಯಲು ಕಾರಣವೇನು ಎಂಬಿತ್ಯಾದಿ ಬಗ್ಗೆ ಮಾಹಿತಿ ಕಲೆಹಾಕಿದರು ಎನ್ನಲಾಗಿದೆ.
ಯೋಗೇಶ್ ಮಾಸ್ಟರ್ ಅವರು ಬರೆದಿದ್ದ 'ಢುಂಢಿ' ಪುಸ್ತಕ ಭಾನುವಾರ ಬೆಂಗಳೂರಿನಲ್ಲಿ ಬಿಡುಗಡೆಯಾಗಿತ್ತು. ಬೆಂಗಳೂರಿನ ರಾಜಮಾರ್ಗ ಸಾಹಿತ್ಯ ಸಂಸ್ಕೃತಿಯವರು ಪುಸ್ತಕ ಪ್ರಕಟಿಸಿದ್ದರು. ಈ ಪುಸ್ತಕ ಬಿಡುಗಡೆಯಾದ ನಂತರದ ದಿನವೇ ಅಖಿಲ ಭಾರತ ಹಿಂದೂ ಮಹಾಸಭಾದ ಮುಖಂಡ ಪ್ರಣವಾನಂದ ರಾಮಸ್ವಾಮಿ ಅವರು ಯೋಗೇಶ್ ಮಾಸ್ಟರ್ ಸೇರಿದಂತೆ ನಾಲ್ವರ ವಿರುದ್ಧ ಕಲಾಸಿಪಾಳ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement