ರಶೀದ್ ಮಲಬಾರಿಗೆ 5 ವರ್ಷ ಜೈಲು
ಮಂಗಳೂರು: ದಾವೂದ್ ಬಂಟ ರಶೀದ್ ಮಲಬಾರಿಗೆ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 5 ವರ್ಷಗಳ ಕಠಿಣ ಸಜೆ ವಿಧಿಸಿ ಜಿಲ್ಲಾ 2ನೇ ಹೆಚ್ಚುವರಿ ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ವರುಣ್ ಗಾಂಧಿ ಮತ್ತು ಪ್ರಮೋದ್ ಮುತಾಲಿಕ್ ಕೊಲೆಗೆ ಸಂಚು ರೂಪಿಸಿದ ಆರೋಪದಡಿ 2009ರಲ್ಲಿ ಬಂಧಿತನಾಗಿದ್ದ ಮಲಬಾರಿ ಈಗಾಗಲೇ ಜೈಲ್ನಲ್ಲಿ 4 ವರ್ಷ 5 ತಿಂಗಳು ಕಳೆದಿರುವುದರಿಂದ ಇನ್ನು 7 ತಿಂಗಳು ಜೈಲ್ನಲ್ಲಿರಬೇಕಾಗಿದೆ. ಕೋರ್ಟ್ 11.5 ಸಾವಿರ ದಂಡ ವಿಧಿಸಿದೆ.