ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅಶ್ಲೀಲ ನೃತ್ಯ: ವರದಿಗೆ ಎಸ್‌ಪಿ ಸೂಚನೆ

Mainashree
Updated On : 2 Dec 2013, 10:20 am

ಚಿಕ್ಕಬಳ್ಳಾಪುರ: ಎರಡು ದಿನಗಳ ಹಿಂದೆ ನಗರದ ಹೃದಯಭಾಗದಲ್ಲಿ ಕನ್ನಡ ಸೇನೆ ಸಂಘಟನೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ವಾದ್ಯಗೋಷ್ಠಿಯಲ್ಲಿ ಅಶ್ಲೀಲ ನೃತ್ಯ ನಡೆದಿರುವುದರ ಬಗ್ಗೆ ತನಿಖೆ ನಡೆಸಲು ಪೊಲೀಸ್ ಇಲಾಖೆ ಮುಂದಾಗಿದೆ. ವಾದ್ಯಗೋಷ್ಠಿಯಲ್ಲಿ ಅಸಭ್ಯ ನೃತ್ಯ ನಡೆದಿರುವುದು ಗಮನಕ್ಕೆ ಬಂದಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಈಗಾಗಲೇ ಕೂಲಂಕುಷ ವರದಿ ನೀಡುವಂತೆ ಸಂಬಂಧಪಟ್ಟ ಆರಕ್ಷಕ ನಿರೀಕ್ಷಕರಿಗೆ ಸೂಚನೆ ನೀಡಲಾಗಿದೆ. ಅಲ್ಲದೇ ಕಾರ್ಯಕ್ರಮ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಬಗ್ಗೆಯೂ ಮಾಹಿತಿ ಕೇಳಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ.ಎನ್. ಶಿವಪ್ರಸಾದ್ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ. ಶನಿವಾರ ನಗರದ ನಗರಸಭಾ ಕಚೇರಿ ಆವರಣದಲ್ಲಿ ಕನ್ನಡ ಪರ ಸಂಘಟನೆ ರಾಜ್ಯೋತ್ಸವದ ಪ್ರಯುಕ್ತ ನಡೆದ ವಾದ್ಯಗೋಷ್ಠಿಯಲ್ಲಿ ಐಟಂ ಸಾಂಗ್ಸ್ ನೃತ್ಯಗಳು ನಡೆದಿದ್ದು ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು. ಇದರ ಬಗ್ಗೆ 'ಕನ್ನಡಪ್ರಭ'ದಲ್ಲಿ 'ಕನ್ನಡ ಹೆಸರಲ್ಲಿ ಅಶ್ಲೀಲ ನೃತ್ಯ' ವರದಿ ಪ್ರಕಟಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement