ದೊಡ್ಡ ತೆಲಂಗಾಣ
ನವದೆಹಲಿ: ಪ್ರಸ್ತಾಪಿತ ತೆಲಂಗಾಣ ರಾಜ್ಯದ ಗಡಿಯನ್ನು ಕೇಂದ್ರ ಸರ್ಕಾರ ಪುನರ್ ರಚಿಸಲು ನಿರ್ಧರಿಸಿದೆ. ನೂತನ ರಾಜ್ಯಕ್ಕೆ ಇನ್ನೆರಡು ಜಿಲ್ಲೆಗಳನ್ನು ಸೇರ್ಪಡೆಗೊಳಿಸಲು ಮುಂದಾಗಿದೆ. ಈ ನಿರ್ಧಾರಕ್ಕೆ ಪ್ರಧಾನಿ ಮನಮೋಹನ ಸಿಂಗ್ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ತೆಲಂಗಾಣಕ್ಕೆ ಅನಂತಪುರ ಮತ್ತು ಕರ್ನೂಲ್ ಸೇರ್ಪಡೆಯಾಗುವ ಸಾಧ್ಯತೆ ಇದೆ.