ನಾನು ಯಾರ ಅಧೀನದಲ್ಲೂ ಇಲ್ಲ
ಬೆಂಗಳೂರು: ನಾನು ಕಾಂಗ್ರೆಸ್ ಸರ್ಕಾರದ ಅಧೀನದಲ್ಲಿಲ್ಲ. ಅವರಿಗೆ ನಾನು ಬೇಕೋ ಬೇಡವೋ ಆ ವಿಚಾರ ಬೇಡ. ಜೂನ್‌ವರೆಗೂ ನಾನೇ ಮುಂದುವರಿಯುತ್ತೇನೆ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಸ್ಪಷ್ಟಪಡಿಸಿದ್ದಾರೆ. ಈ ಹಿಂದಿನ ಬಿಜೆಪಿ ಸರ್ಕಾರ ಸಹ ನನ್ನನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಸಾಕಷ್ಟು ಸಂಚು ರೂಪಿಸಿ ರಾಷ್ಟ್ರಪತಿ ಅವರಿಗೆ ಪತ್ರ ಬರೆದಿತ್ತು. ಆದರೆ, ಏನೂ ಆಗಿಲ್ಲ. ಈಗಲೂ ನನ್ನನ್ನು ತೆಗೆಯಲು ಪ್ರಯತ್ನ ಆಗುತ್ತಿದೆ. ಈಗಲೂ ಏನೂ ಆಗುವುದಿಲ್ಲ ಎಂದರು.