ಭಾರತೀಯ ಮಹಿಳೆಗೆ ಸೋತಿದ್ದರು!
ಪಕ್ಕಾ ಲೇಡಿಸ್ ಮ್ಯಾನ್ ಆಗಿದ್ದ ನೆಲ್ಸನ್ ಮಂಡೇಲಾ ಅವರು ಒಮ್ಮೆ ಭಾರತೀಯ ಮೂಲದ ಮಹಿಳಾ ಹೋರಾಟಗಾರ್ತಿಯೊಬ್ಬರಿಗೆ ಮನಸೋತಿದ್ದರಂತೆ. ಆ ಮಹಿಳೆ ಹೆಸರು ಅಮೀನಾ ಕಚಾಲಿಯಾ. ವಿನಿ ಅವರ ಕೈ ಹಿಡಿಯುವ ಮೊದಲು ಅಮಿನಾ ಮುಂದೆ ಮಂಡೇಲಾ ಪ್ರೇಮನಿವೇದನೆ ಮಾಡಿಕೊಂಡಿದ್ದರಂತೆ. ಆದರೆ, ಅಮೀನಾ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದರಂತೆ. ಅಮಿನಾ ತಮ್ಮ ಆತ್ಮಚರಿತ್ರೆ 'ವೆನ್ ಹೋಪ್ ಆ್ಯಂಡ್ ಹಿಸ್ಟರಿ ರೈಮ್'ನಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಅಮೀನಾ ಅವರು ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ನ ಯೂಸುಫ್ ಕಚಾಲಿಯಾ ಪತ್ನಿ. ಮಂಡೇಲಾ ಅವರು ಕಚಾಲಿಯಾ ಕುಟುಂಬದ ಸ್ನೇಹಿತರಾಗಿದ್ದವರು. ಯೂಸುಫ್ ನಿಧನದ ಬಳಿಕ ಒಂಟಿಯಾಗಿದ್ದ ಅಮೀನಾ ಮತ್ತು ಮಂಡೇಲಾ ನಡುವೆ ಆತ್ಮೀಯ ಸಂಬಂಧ ಇತ್ತು. ಒಂದು ದಿನ ಸಂಜೆ ದಿಢೀರ್ ಅಮೀನಾ ಮನೆಗೆ ಬಂದ ಮಂಡೇಲಾ ಮದುವೆಯ ಪ್ರಸ್ತಾಪ ಇಟ್ಟರಂತೆ. ಆಗ ಅಮೀನಾ ವಿಧವೆಯಾಗಿದ್ದರೂ ಮಂಡೇಲಾ ಮಾತ್ರ ಗ್ರಾಕಾ ಮಚೆಲ್ ಅವರನ್ನು ಕೈಹಿಡಿದಿದ್ದರು. ಹಾಗಾಗಿ ಈ ಪ್ರಸ್ತಾಪ ಒಪ್ಪಿಕೊಳ್ಳಲಿಲ್ಲ ಎಂದು ಅಮೀನಾ ತಮ್ಮ ಆತ್ಮಚರಿತ್ರೆಯಲ್ಲಿ ಹೇಳಿಕೊಂಡಿದ್ದಾರೆ. ಪ್ರಮುಖ ಮಹಿಳಾಪರ ಹೋರಾಟಗಾರ್ತಿಯಾಗಿದ್ದ ಅಮೀನಾ ತಂದೆ ಇಬ್ರಾಹಿಂ ಅಸ್ವತ್ ಗಾಂಧೀಜಿಗೆ ಆತ್ಮೀಯರಾಗಿದ್ದವರು. ಆಫ್ರಿಕಾಗೆ ಗಾಂಧೀಜಿ ಬಂದಾಗ ಇಬ್ರಾಹಿಂ ಜತೆಗಿರುತ್ತಿದ್ದರು.