ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮಂಡೇಲಾ ಹೆಸರಿನ ವೈಶಿಷ್ಟ

Mainashree
Updated On : 7 Dec 2013, 11:57 am

ರೊಹಿಲ್ಹಾಹ: ಇದು ಮಂಡೇಲಾ ಅವರ ಮೂಲ ಹೆಸರು. ಈ ಶಬ್ದದ ಅರ್ಥವೆಂದರೆ 'ಮರದ ರೆಂಬೆಯನ್ನು ಎಳೆಯುವುದು'.

ಮಡಿಬಾ: ಇದು ಮಂಡೇಲಾ ಅವರ ಕುಟುಂಬದ ಹೆಸರು. ಮಡಿಬಾ ಎಂಬಾತ 18ನೇ ಶತಮಾನದಲ್ಲಿ ಟ್ರಾನ್ಸೆಕಿಯನ್ನು ಆಳುತ್ತಿದ್ದ. ಈತ ಥೆಂಬು ಜನಾಂಗದ ಮುಖ್ಯಸ್ಥನಾಗಿದ್ದ.  ಮುಖ್ಯಸ್ಥನ ಹೆಸರು ಹಿಡಿದು ಕರೆಯುವುದು ವಿಧೇಯತೆಯನ್ನು ಸೂಚಿಸುತ್ತದೆ.

ಟಾಟಾ:  'ಇಸಿಹೋಸಾ' (isiXhosa)  ಈ ಶಬ್ದದ ಅರ್ಥ 'ತಂದೆ'. ದಕ್ಷಿಣ ಆಫ್ರಿಕನ್ನರು ಮಂಡೇಲಾ ಅವರನ್ನು ಪ್ರೀತಿಯಿಂದ ಇದೇ ಹೆಸರಿನಿಂದ ಕರೆಯುತ್ತಿದ್ದರು. ಆಫ್ರಿಕದಾದ್ಯಂತ ವಯಸ್ಸಿನ ಭೇದವಿಲ್ಲದೆ ಅವರನ್ನು ಈ ಹೆಸರಿಂದ ಕರೆಯುತ್ತಾರೆ.

ಖುಲು: ಕೆಲ ಬಾರಿ ಮಂಡೇಲಾರನ್ನು 'ಖುಲು' ಎಂದು ಸಂಭೋದಿಸಲಾಗುತ್ತದೆ. ಖುಲು ಅಂದ್ರೆ 'ಭಾರಿ' 'ದೊಡ್ಡ' 'ಸರ್ವಶ್ರೇಷ್ಠ' 'ಅದ್ಧೂರಿ' ಎಂದರ್ಥ. ಪ್ರಭಾವಶಾಲಿ ಭಾಷಣಕಾರರಾಗಿದ್ದ ಮಂಡೇಲಾ ಅವರನ್ನು 'ಗ್ರೇಟ್ ಒನ್‌' ಎಂದು ಪರಿಗಣಿಸಲಾಗಿತ್ತು. ಮಾತ್ರವಲ್ಲದೆ ಚಿಕ್ಕದಾಗಿ ಅವರನ್ನು ಅಜ್ಜ ಎಂದು ಕರೆಯುತ್ತಾರೆ ಪ್ರೀತಿ ಪಾತ್ರರು.

ದಲಿಭುಂಗ: ಮಂಡೇಲಾ 16ನೇ ವರ್ಷದಲ್ಲಿ ದೀಕ್ಷೆಗೆ ಒಳಗಾಗಿದ್ದಾಗ ಈ ಹೆಸರನ್ನು ನೀಡಲಾಗಿತ್ತು. ಬಾಲ್ಯಾವಸ್ಥೆಯಿಂದ ಪುರುಷನಾಗುವ ಸಂದರ್ಭದಲ್ಲಿ ಸಾಮಾನ್ಯವಾಗಿ ಆಫ್ರಿಕಾದಲ್ಲಿ ಈ ದೀಕ್ಷೆ ಕ್ರಿಯೆ ನಡೆಸಲಾಗುತ್ತದೆ. ದಲಿಭುಂಗ ಅಂದ್ರೆ 'ಮಂಡಳಿಯ ಸೃಷ್ಟಿಕರ್ತ ಅಥವಾ ಸ್ಥಾಪಕ'.

ಹೋರಾಟಗಾರನ ಬದುಕು ಬದಲಿಸಿದ ಜೈಲು
ವರ್ಣಭೇದ ನೀತಿಯ ಫಲವಾಗಿ 1950ರಲ್ಲಿ ಹಾಗೂ 1960ರ ದಶಕದ ಆರಂಭದಲ್ಲಿ ಮಂಡೇಲಾ ಅವರು ಅನೇಕ ಬಾರಿ ಜೈಲು, ಕೋರ್ಟ್‌ಗೆ ಸುತ್ತಾಡಬೇಕಾಯಿತು. 1960ರಲ್ಲಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಅನ್ನು ನಿಷೇಧಿಸಿದ ಬಳಿಕ ಮರುವರ್ಷ ಮಂಡೇಲಾ ಭೂಗತರಾಗಬೇಕಾಯಿತು. ನಂತರ ಅವರು ನ್ಯಾಷನಲ್ ಕಾಂಗ್ರೆಸ್‌ನ ಸಶಸ್ತ್ರ ಸಂಘಟನೆ ್ಖಝ್ಞ್ಟಟಿಡ್ಟಿ ಢಿಜ ಡಜಣಢಿಜ ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. 1963ರಲ್ಲಿ ದೇಶದ್ರೋಹದ ಆರೋಪದ ಮೇರೆಗೆ ಮಂಡೇಲಾರನ್ನು ಜೀವಾವಧಿ ಶಿಕ್ಷೆ ವಿಧಿಸಿ ರೊಬ್ಬನ್ ಐಲ್ಯಾಂಡ್‌ನ ಜೈಲಿಗೆ ತಳ್ಳಲಾಯಿತು.
ತಮ್ಮ ಜೀವಿತಾವಧಿಯ 27 ವರ್ಷಗಳ ಜೈಲು ಶಿಕ್ಷೆಯಲ್ಲಿ ರೊಬ್ಬನ್ ಐಲ್ಯಾಂಡ್‌ನಲ್ಲಿ ಕಳೆದ 18 ವರ್ಷಗಳು ಮಂಡೇಲಾ ಬದುಕಿಗೆ ವಿಶೇಷ ತಿರುವು ನೀಡಿತು. ಇಲ್ಲಿ ಅವರನ್ನು ಕಿರಿದಾದ ಸೆಲ್‌ವೊಂದರಲ್ಲಿ ಕೂಡಿಹಾಕಲಾಗಿತ್ತು. ವರ್ಷವೊಂದಕ್ಕೆ ಕೇವಲ ಒಬ್ಬ ವ್ಯಕ್ತಿಯನ್ನಷ್ಟೇ ಭೇಟಿ ಮಾಡಬಹುದಿತ್ತು. ಆ ವ್ಯಕ್ತಿಯೊಂದಿಗೆ 30 ನಿಮಿಷವಷ್ಟೇ ಕಳೆಯಬಹುದಿತ್ತು. ಅಲ್ಲದೆ, ಪ್ರತಿ ಆರು ತಿಂಗಳಿಗೊಮ್ಮೆ ಒಂದು ಪತ್ರ ಬರೆಯಲು ಮತ್ತು ಒಂದು ಪತ್ರ ಸ್ವೀಕರಿಸಲಷ್ಟೇ ಅವಕಾಶವಿತ್ತು. ಪತ್ರಿಕೆಗಳನ್ನು ಓದುವ ಅವಕಾಶವನ್ನೂ ನಿರಾಕರಿಸಲಾಗಿತ್ತು. ಇಷ್ಟಾದರೂ ಮಂಡೇಲಾ ಅವರ ಹೋರಾಟದ ಕಿಚ್ಚನ್ನು ತಡೆಯಲು ಈ ನಾಲ್ಕುಗೋಡೆಗಳಿಗೆ ಸಾಧ್ಯವಾಗಲಿಲ್ಲ. ಜೈಲಿನೊಳಗಿದ್ದುಕೊಂಡೇ ಅವರು ತಮ್ಮ ಚಿಂತನೆಗಳಿಗೆ ಸಾಣೆ ಹಿಡಿದರು. ಆಫ್ರಿಕಾದ ನಾಯಕನಾಗಿ ಬೆಳೆದರು.

ನೆಲ್ಸನ್ ಮಂಡೇಲಾ
ಜನ ದ್ವೇಷಿಸುವುದನ್ನು ಕಲಿತರೆ ಅವರಿಗೆ ಪ್ರೀತಿಸುವುದನ್ನು ಕಲಿಸುವುದೂ ಸಾಧ್ಯವಿದೆ. ಮನುಷ್ಯನ ಹೃದಯದಲ್ಲಿ ದ್ವೇಷಕ್ಕಿಂತ ಪ್ರೀತಿ ಸಹಜವಾಗಿ ಹುಟ್ಟುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement