ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬದಲಾವಣೆ ಖುಷಿಯ ನಿಯಮ...

ಇಂದಿನ ಸಂಚಿಕೆ ಜತೆಗೆ 32 ಪುಟಗಳ ಖುಷಿ ಇದೆ. ಕನ್ನಡದ ಯಾವ ಪತ್ರಿಕೆಯೂ ಇದುವರೆಗೆ ಮಾಡಿರದ ರೂಪ...

ಬಿಡುಗಡೆಯ ಕ್ಷಣ...ಖುಷಿಯ ಮೊದಲ ಪ್ರತಿ ಅನಾವರಣಗೊಳಿಸಿದ ಇನ್ಫೋಸಿಸ್ ಸ್ಥಾಪಕ ಅಧ್ಯಕ್ಷ ಎನ್.ಆರ್.ನಾರಾಯಣಮೂರ್ತಿ ಅವರ ಜತೆಗೆ ಕೆಪಿಪಿಎಲ್ ಸಿಇಒ ಸಿ.ಶ್ಯಾಮಸುಂದರ್, ಪ್ರಧಾನ ಸಂಪಾದಕ
Mainashree
Updated On : 8 Dec 2013, 1:04 am

-ಇಂದಿನ ಸಂಚಿಕೆ ಜತೆಗೆ 32 ಪುಟಗಳ ಖುಷಿ ಇದೆ

ಕನ್ನಡದ ಯಾವ ಪತ್ರಿಕೆಯೂ ಇದುವರೆಗೆ ಮಾಡಿರದ ರೂಪ ಬದಲಾವಣೆಯ ಸಾಹಸವಿದು. ಎಲ್ಲ ಬಗೆಯ ಸಿದ್ಧಸೂತ್ರಗಳನ್ನು ಮೀರುವ ಪ್ರಯತ್ನ.  ಭಾನುವಾರದ ಪುರವಣಿ ಅಂದರೆ ಸಾಹಿತ್ಯ ಪುಟಗಳು ಎನ್ನುವ ವ್ಯಾಖ್ಯೆಯ ಮೀರುವಿಕೆ. ಸಾಪ್ತಾಹಿಕದ ಸಾಹಿತ್ಯ, ಆರೋಗ್ಯ ಪುಟಗಳ ಸೌಖ್ಯಸಂಬಂಧಿ ಬರಹಗಳು, ಯುವ ಮನಸ್ಸಿನವರಿಗೆ ಪ್ರಿಯವಾಗುವ ಫ್ಯಾಶನ್, ಲೈಫ್‌ಸ್ಟೈಲ್, ಮನರಂಜನೆಗಾಗಿ ಸಿನಿಮಾ ಸೇರಿದಂತೆ ಕನ್ನಡ ಜನಜೀವನದ ಸಂಸ್ಕೃತಿಯ ಸರ್ವಾಂಗಗಳ ಶೋಧ ಸಮುಚ್ಚಯವಿದು.

ಪ್ರಕಟವಾಗುವ ಮೊದಲ ದಿನದಿಂದಲೇ ಕನ್ನಡದ ಅತ್ಯಧಿಕ ಪ್ರಸಾರದ ನಿಯತಕಾಲಿಕೆ ಎಂಬ ಹೆಗ್ಗಳಿಕೆ. ಕನ್ನಡಪ್ರಭ ಹೋದಲ್ಲೆಲ್ಲ ಖುಷಿಯೂ ತಲುಪುತ್ತದೆ. ಹೀಗಾಗಿ ಇದು ನಂಬರ್ ವನ್ ವಾರಪತ್ರಿಕೆ

ಇತರ ಎಲ್ಲ ಸಾಪ್ತಾಹಿಕಗಳಿಗಿಂತ ಹೆಚ್ಚು ಪುಟಗಳು, ಹೆಚ್ಚು ವೈವಿಧ್ಯ, ಅಧಿಕ ಮಾಹಿತಿ, ವಿಶಿಷ್ಟ ರಂಜನೆ. ವಾರವಿಡೀ ಓದಲು ಅನುಕೂಲ ಮಾದರಿ. ಅಡುಗೆಮನೆಗೂ, ಪ್ರಯಾಣಿಸುವಾಗಲೂ, ಎಲ್ಲೆಡೆ ನಿಮ್ಮ ಸಂಗಾತಿ

ಸಂಗ್ರಹಿಸಿಡಲು ಸೂಕ್ತವಾದ ಗಾತ್ರ, ಸ್ವರೂಪ. ಅಂದೇ ಓದಿದರೆ ಸಾಪ್ತಾಹಿಕ, ವಾರವಿಡೀ ಓದಿದರೆ ವಾರಪತ್ರಿಕೆ, ಎತ್ತಿಟ್ಟುಕೊಂಡರೆ ಡೈಜೆಸ್ಟ್! ನಿಮ್ಮ ಲೈಬ್ರರಿಗೊಂದುಅಪರೂಪದ ಸದಸ್ಯ

ರು. 4ಕ್ಕೆ ಈಗ ಒಂದು ಕಾಫಿ ಕೂಡ ಸಿಗೊಲ್ಲ. ಅಂಥದರಲ್ಲಿ ಒಂದು ದಿನಪತ್ರಿಕೆ, ಜತೆಗೆ 32 ಪುಟಗಳ ಒಂದು ಮ್ಯಾಗಜಿನ್ ಯಾರು ಕೊಡ್ತಾರೆ? ನಾವು ಕೊಡ್ತೀವಿ ಬನ್ನಿ! ಅಂದರೆ, ದಿನಪತ್ರಿಕೆ ಜತೆಗೆ ಮ್ಯಾಗಜಿನ್ ಉಚಿತ!



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement