ಬಯೋವುಟ್ರಿಕ್ ಯಂತ್ರಗಳಿಗೆ ಹೇಳಿಯಾಗಿದೆ ಬೈ..ಬೈ...
ಕ.ಪ್ರ.ವಾರ್ತೆ ಬೆಂಗಳೂರು ಡಿ. 8
ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ಗಳಲ್ಲಿ ಸಿಬ್ಬಂದಿ ಆಡಿದ್ದೇ ಆಟ. ಮಾಡಿದ್ದೇ ಊಟ, ತೋರಿದ್ದೇ ಲೆಕ್ಕ!
ಯಾವ ಹಾಸ್ಟೆಲ್ನಲ್ಲಿ ಎಷ್ಟು ವಿದ್ಯಾರ್ಥಿಗಳಿದ್ದಾರೆ, ಎಷ್ಟು ಮಕ್ಕಳು ಊಟ, ವಾಸ್ತವ್ಯ ಮಾಡುತ್ತಿದ್ದಾರೆ ಎಂದು ಇಲಾಖೆಗೇ ಗೊತ್ತಾಗುತ್ತಿಲ್ಲ. ಅಷ್ಟೇ ಏಕೆ? ಹಾಸ್ಟೆಲ್ಗಳಲ್ಲಿರುವ ಸಿಬ್ಬಂದಿ ಎಷ್ಟು, ಎಷ್ಟು ಕರ್ತವ್ಯನಿರತರು ಎಂಬ ಮಾಹಿತಿಯೇ ಸಿಗುತ್ತಿಲ್ಲ. ಏಕೆಂದರೆ, ಇದೆಲ್ಲವನ್ನೂ ತಿಳಿಸುತ್ತಿದ್ದ ಹಾಸ್ಟೆಲ್ಗಳ ಬಯೋವುಟ್ರಿಕ್ ಯಂತ್ರಗಳು ಇಲಾಖೆಗೆ 'ಬಾಯ್' ಹೇಳಿ ಆರು ತಿಂಗಳಾಗುತ್ತಿದೆ.
ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ತೋರಿಸಿ ಅಧಿಕ ಆಹಾರ ಪದಾರ್ಥ ಲೆಕ್ಕ ತೋರಿಸುವುದು, ಕರ್ತವ್ಯಕ್ಕೇ ಗೈರಾಗಿ ವೇತನ ಪಡೆಯುವುದನ್ನು ತಡೆಯಲು ಹಿಂದಿನ ಬಿಜೆಪಿ ಸರ್ಕಾರ ಹಾಸ್ಟೆಲ್ಗಳಿಗೆ ಬಯೋವುಟ್ರಿಕ್ ವ್ಯವಸ್ಥೆ ಜಾರಿಗೊಳಿಸಿತ್ತು. ಆದರೆ, ನಂತರ ಬಂದ ಕಾಂಗ್ರೆಸ್ ಸರ್ಕಾರ ಈ ಯೋಜನೆಗೆ ಹಣವನ್ನೂ ನೀಡದೆ, ಬಯೋವುಟ್ರಿಕ್ ನಿರ್ವಹಣೆಗೂ ಆಸಕ್ತಿಯನ್ನೂ ತೋರಿಸದ ಕಾರಣ ಹಾಸ್ಟೆಲ್ಗಳಲ್ಲಿ ಸಿಬ್ಬಂದಿ ಆಡಿದ್ದೇ ಆಟ. ಅವರು ಮಕ್ಕಳಿಗೆ ಹಾಕಿದ್ದೇ ಊಟ ಎನ್ನುವಂತಾಗಿದೆ. ಸಮಾಜ ಕಲ್ಯಾಣ ಇಲಾಖೆ ಕೋಟಿ ಕೋಟಿ ರುಪಾಯಿ ವೆಚ್ಚ ಮಾಡಿದ ಈಗ ಕೇವಲ ಸಾವಿರಗಳಿಗೆ ಹೆದರಿ ಹಾಸ್ಟೆಲ್ಗಳಲ್ಲಿ ಬಯೋವುಟ್ರಿಕ್ ಸೌಲಭ್ಯ ಇಲ್ಲದಂತೆ ಮಾಡಿದೆ. ಹೀಗಾಗಿ ಹಾಸ್ಟೆಲ್ಗಳಲ್ಲಿ ಎಷ್ಟು ವಿದ್ಯಾರ್ಥಿಗಳಿದ್ದಾರೆ, ಎಷ್ಟು ಪ್ರಮಾಣದಲ್ಲಿ ಆಹಾರ ಪದಾರ್ಥ ಖರ್ಜಾಗುತ್ತಿದೆ. ಸಿಬ್ಬಂದಿ ಹಾಜರಿ ಹೇಗಿದೆ ಎನ್ನುವುದೇ ತಿಳಿಯುತ್ತಿಲ್ಲ. ಹಾಸ್ಟೆಲ್ಗಳಿಗೆ ಇಲಾಖೆ ನೀಡುತ್ತಿರುವ ಅನುದಾನ ಹೇಗೆ ಬಳಕೆಯಾಗುತ್ತಿದೆ ಎಂಬ ಮಾಹಿತಿ ಇಲ್ಲ ಎಂದು ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಇದು ಹಾಸ್ಟೆಲ್ ಅಕ್ರಮ ಪತ್ತೆದಾರಿ: ಸಾಮಾನ್ಯ ಶನಿವಾರ ಮತ್ತು ಭಾನುವಾರ ಹಾಸ್ಟೆಲ್ಗಳಲ್ಲಿ ಮಕ್ಕಳು ಊರಿಗೆ ಹೋಗುತ್ತಾರೆ. ಆದರೂ ನಿತ್ಯ ಇರುವಷ್ಟೇ ಮಕ್ಕಳಿದ್ದಾರೆಂದು ಹಾಸ್ಟೆಲ್ ಸಿಬ್ಬಂದಿ ಮಾಹಿತಿ ನೀಡಿ ಇಲಾಖೆಯಿಂದ ಹೆಚ್ಚಿನ ಹಣ ಮತ್ತು ಆಹಾರ ಪದಾರ್ಥಗಳನ್ನು ಪಡೆದು ದುರ್ಬಳಕೆ ಮಾಡಿಕೊಳ್ಳುತ್ತಿದ್ದರು. ಅಲ್ಲದೆ, ಹಾಸ್ಟೆಲ್ ಸಿಬ್ಬಂದಿ ಹೆಸರಿನಲ್ಲಿ ಬೇನಾಮಿ ವ್ಯಕ್ತಿ ಹಾಸ್ಟೆಲ್ ನಿರ್ವಹಿಸುತ್ತಿದ್ದರು. ನಂತರ ಮೂಲ ಸಿಬ್ಬಂದಿ ಹಾಜರಿ ತೋರಿಸಿ ವೇತನ ಪಡೆಯುತ್ತಿದ್ದರು. ಇದರಿಂದ ಇಲಾಖೆ ಅನುದಾನ ದುರ್ಬಳಕೆಯಾಗಿ ವರ್ಷಕ್ಕೆ 20ಕೋಟಿಗೂ ಅಧಿಕ ವೆಚ್ಚದ ಹೊರೆ ಇತ್ತು. ಇದನ್ನು ತಪ್ಪಿಸಲು ಹಿಂದಿನ ಸಮಾಜ ಕಲ್ಯಾಣ ಸಚಿವ ಎ.ನಾರಾಯಣಸ್ವಾಮಿ, ಹಾಸ್ಟೆಲ್ಗಳಿಗೆ ಬಯೋವುಟ್ರಿಕ್ ವ್ಯವಸ್ಥೆ ಜಾರಿಗೊಳಿಸಿದರು.
ಒಂದು ಬಯೋವುಟ್ರಿಕ್ ಯಂತ್ರಕ್ಕೆ 19,000ದಂತೆ ಹಿಂದುಳಿದ ವರ್ಗಗಳ 275 ಹಾಸ್ಟೆಲ್ಗಳಿಗೆ ಹಾಗೂ ಪರಿಶಿಷ್ಟಜಾತಿಗಳ 225 ಹಾಸ್ಟೆಲ್ಗಳಲ್ಲಿ ಬಯೋವುಟ್ರಿಕ್ ಯಂತ್ರಗಳನ್ನು ಅಳವಡಿಸಲು ಹಿಂದುಳಿದ ವರ್ಗಗಳ ಇಲಾಖೆ ಟೆಂಡರ್ ಆಹ್ವಾನಿಸಿತ್ತು.
4ಕೋಟಿ ಬಿಲ್ ಇನ್ನೂ ಪಾವತಿಸಿಲ್ಲ: ಇದರಲ್ಲಿ ಯಶಸ್ವಿಯಾದ ಮಂತ್ರಾ ಸಾಫ್ಟ್ಟೆಕ್, ಝನಿತ್ ಹಾಗೂ ಇಎಸ್ಎಚ್ಎಲ್ ಎಂಬ ಕಂಪನಿಗಳು ಸುಮಾರು 4ಕೋಟಿ ಅಂದಾಜು ವೆಚ್ಚದಲ್ಲಿ ಹಾಸ್ಟೆಲ್ಗಳಿಗೆ ಬಯೋವುಟ್ರಿಕ್ ಯಂತ್ರಗಳನ್ನು ಅಳವಡಿಸಿದವು. ಆರಂಭಿಕವಾಗಿ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಉಡುಪಿ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಅಳವಡಿಸಲಾಯಿತು.
ಈ ಮೂರು ಕಂಪನಿಗಳು ಹಾಸ್ಟೆಲ್ಗಳಲ್ಲಿ ಬಯೋವುಟ್ರಿಕ್ ಯಂತ್ರ, ಅದರಲ್ಲಿ ಹಾಜರಿ ಮಾಹಿತಿ ದಾಖಲಾಗಲು ಮೆಮೊರಿ ಚಿಪ್ ಹಾಗೂ ಇದೆಲ್ಲವೂ ಕೇಂದ್ರೀಕೃತವಾಗಿ ಕಾರ್ಯನಿರ್ವಹಿಸಲು ಸೂಕ್ತ ತಂತ್ರಾಂಶವನ್ನು ಅಭಿವೃದ್ಧಿಗೊಳಿಸಿದವು. ಆ ವೇಳೆಗೆ ಸರ್ಕಾರ ಬದಲಾಯಿತು. ಹಿಂದಿನ ಸರ್ಕಾರದ ಯೋಜನೆ ಎಂಬ ಕಾರಣಕ್ಕೆ ಹೊಸ ಸರ್ಕಾರ ಒತ್ತು ನೀಡಲಿಲ್ಲ. ಇದೆಲ್ಲವನ್ನು ಅನುಷ್ಠಾನ ಮಾಡಿದ ಹಿಂದುಳಿದ ವರ್ಗಗಳ ಇಲಾಖೆ ಆಯುಕ್ತ ಶಾಂತರಾಜು ಅವರೇ ಮುಂದುವರಿದರು ಕೂಡ ಬಯೋವುಟ್ರಿಕ್ ಅಳವಡಿಸಿದ ಕಂಪನಿಗಳಿಗೆ ಬಿಲ್ ಪಾವತಿಸಿಲ್ಲ.
ಶಿವಕುಮಾರ್ ಬೆಳ್ಳಿತಟ್ಟೆ