'ಮಹಾ' ವಾದ ವಜಾಕ್ಕೆ ಸುಪ್ರೀಂಗೆ ಮನವಿ
ಬೆಳಗಾವಿ: ಡಿ.10 ರಂದು ಸುಪ್ರೀಂ ಕೋರ್ಟ್ ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ಗಡಿ ವಿವಾದದ ವಿಚಾರಣೆ ಕೈಗೆತ್ತಿಕೊಳ್ಳಲಿದೆ. ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಮಹಾರಾಷ್ಟ್ರ ಸರ್ಕಾರದ ವಾದಪತ್ರ ಪುರಸ್ಕರಿಸಲು ನ್ಯಾಯಾಲಯಕ್ಕೆ ಅಧಿಕಾರವಿದೆಯೇ ಎಂಬ ನಿಲುವನ್ನು ಮಂಡಿಸಲಿದೆ ಎಂದು ಕರ್ನಾಟಕ-ಮಹಾರಾಷ್ಟ್ರ ಗಡಿ ಕಾನೂನು ಸಲಹಾ ಸಮಿತಿ ಸದಸ್ಯ ಕೆ.ಎನ್. ಬೆಂಗೇರಿ ತಿಳಿಸಿದರು. ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂವಿಧಾನದ 131ನೇ ಅನುಚ್ಛೇದದ ಪ್ರಕಾರ ಸುಪ್ರೀಂ ಕೋರ್ಟ್‌ಗೆ ಗಡಿ ವಿವಾದ ಇತ್ಯರ್ಥ ಪಡಿಸುವ ಅಧಿಕಾರವಿಲ್ಲ. ಈ ಅಧಿಕಾರವನ್ನು ಭಾರತದ ಸಂವಿಧಾನದ 3ನೇ ಅನುಚ್ಛೇದದ ಪ್ರಕಾರ ಸಂಸತ್ತು ಹೊಂದಿದೆ ಎಂಬ ವಾದವನ್ನು ಕರ್ನಾಟಕದ ಪರವಾಗಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಮಹಾರಾಷ್ಟ ಸರ್ಕಾರದ ವಾದವನ್ನು ವಾಜಾಗೊಳಿಸಬೇಕೆಂದೂ ರಾಜ್ಯ ಕೋರ್ಟ್‌ಗೆ ಮನವಿ ಸಲ್ಲಿಸಲಿದೆ ಎಂದರು.