ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕೈ ಬಿಡದ ಮಿಜೋರಾಂ

Vishwanath S
Updated On : 10 Dec 2013, 12:14 pm

ಐಜ್ವಾಲ್: ನಾಲ್ಕು ರಾಜ್ಯಗಳಲ್ಲಿ  ಸೋಲು ಕಂಡಿರುವ ಕಾಂಗ್ರೆಸ್‌ಗೆ ಮಿಜೋರಾಂ ಫಲಿತಾಂಶ ಸ್ವಲ್ಪಮಟ್ಟಿಗಿನ ನಿರಾಳತೆ ಒದಗಿಸಿದೆ. ಅಲ್ಲಿ  ಕಾಂಗ್ರೆಸ್ ನಿಚ್ಚಳ ಬಹುಮತ ಪಡೆದಿದ್ದು ಸತತ 2ನೇ ಅವಧಿಗೆ ಅಧಿಕಾರದ ಗದ್ದುಗೆಗೇರುವ ಸಿದ್ಧತೆಯಲ್ಲಿದೆ. 40 ವಿಧಾನಸಭೆ ಸೀಟುಗಳಿಗೆ ನಡೆದ ಚುನಾವಣೆಯ ಫಲಿತಾಂಶ ಸೋಮವಾರ ಘೋಷಣೆಯಾಗಿದೆ. ಕಾಂಗ್ರೆಸ್ ಮೂರನೇ ಎರಡರಷ್ಟು ಬಹುಮತ ಸಾಧಿಸಿದ್ದು, 33 ಸೀಟುಗಳನ್ನು ತನ್ನ ತೆಕ್ಕೆಗೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಪ್ರತಿಪಕ್ಷಗಳ ಮೈತ್ರಿಕೂಟವಾದ ಮಿಜೋರಾಂ ಡೆಮಾಕ್ರಟಿಕ್ ಅಲಯನ್ಸ್ (ಎಂಡಿಎ) ಕೇವಲ 7 ಸ್ಥಾನಗಳಿಗಷ್ಟೇ ತೃಪ್ತಿಪಟ್ಟುಕೊಂಡಿದೆ.
ಇದೇ ವೇಳೆ, ಎಂಡಿಎ ಮೈತ್ರಿಕೂಟದ ಅಂಗಪಕ್ಷಗಳಾದ ಎಂಪಿಸಿ ಮತ್ತು ಮಾರಾಲ್ಯಾಂಡ್ ಡೆಮಾಕ್ರಟಿಕ್ ಫ್ರಂಟ್ ಖಾತೆ ತೆರೆಯುವಲ್ಲಿ ವಿಫಲವಾಗಿವೆ. 4 ಅವಧಿಗೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿರುವ ಲಾಲ್ ಥನ್‌ಹವ್ಲಾ ಅವರು ಮತ್ತೊಮ್ಮೆ ಮಿಜೋರಾಂ ಸಿಎಂ ಆಗಿ ಅಧಿಕಾರ ವಹಿಸಲಿದ್ದಾರೆ. ಥನ್‌ಹವ್ಲಾ  ಕಣಕ್ಕಿಳಿದಿದ್ದ ಎರಡೂ ಕ್ಷೇತ್ರಗಳಲ್ಲಿ ಭರ್ಜರಿ ಜಯಗಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement