ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕಳಚಿಬಿದ್ದ ನಿರ್ಮಲ ಗರಿ, ಶೌಚಕ್ಕಿಲ್ಲಿ ಬಯಲೇ ಗತಿ

2011ರಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯಿತಿಗೊಂದು ಗರಿ ಲಭಿಸಿತ್ತು, ಹೆಮ್ಮೆ ಮೂಡಿಸಿತ್ತು. ಕೇಂದ್ರ ಸರ್ಕಾರದಿಂದ ನಿರ್ಮಲ ಗ್ರಾಮ ಪುರಸ್ಕಾರದಲ್ಲಿ ದ್ವಿತೀಯ...

Vishwanath S
Updated On : 16 Dec 2013, 11:54 am

ಪುರಸ್ಕಾರಕ್ಕಾಗಿ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ದೊಡ್ಡ ನಾಟಕವನ್ನೇ ಮಾಡಿದ್ದಾರೆ. ಜಿಲ್ಲೆಯಲ್ಲಿ ಶೌಚಕ್ಕಾಗಿ ಬಯಲನ್ನು ಆಶ್ರಯಿಸುವವರ  ಸಂಖ್ಯೆ ಕಡಿಮೆ ಎಂದು ಕೇಂದ್ರವನ್ನು ವಂಚಿಸಿ 'ನಿರ್ಮಲ ಗ್ರಾಮ' ಪುರಸ್ಕಾರ ಪಡೆದುಕೊಂಡಿದ್ದಾರೆ. 20 ಸಾವಿರಕ್ಕಿಂತಲೂ ಹೆಚ್ಚು ಮಂದಿ ಶೌಚಾಲಯವನ್ನೇ ಹೊಂದಿಲ್ಲ ....

ಕ.ಪ್ರ.ವಾರ್ತೆ,  ಶಿವಮೊಗ್ಗ, ಡಿ.15
-
2011ರಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯಿತಿಗೊಂದು ಗರಿ ಲಭಿಸಿತ್ತು, ಹೆಮ್ಮೆ ಮೂಡಿಸಿತ್ತು. ಕೇಂದ್ರ ಸರ್ಕಾರದಿಂದ ನಿರ್ಮಲ ಗ್ರಾಮ ಪುರಸ್ಕಾರದಲ್ಲಿ ದ್ವಿತೀಯ ಸ್ಥಾನದ ಜೊತೆಗೆ 20 ಲಕ್ಷ ನಗದು ಪುರಸ್ಕಾರ. ಆದರೆ, ಇದೀಗ ಬಣ್ಣ ಬಯಲಾಗಿದೆ. ಜಿಲ್ಲೆಯಲ್ಲಿ ಇನ್ನೂ 80 ಸಾವಿರಕ್ಕೂ ಅಧಿಕ ಕುಟುಂಬಗಳು ಬಯಲು ಶೌಚಾಲಯವನ್ನೇ ಅವಲಂಬಿಸಿವೆ!
ಸರ್ಕಾರದ ಕಡೆಯಿಂದ ನಿರ್ಮಲ ಗ್ರಾಮಗಳನ್ನಾಗಿ ಮಾಡುವ ಪ್ರಯತ್ನ ನಡೆದಿರುವಾಗಲೂ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಪ್ರಸ್ತುತದಲ್ಲಿ ಸಾವಿರಾರು ಕುಟುಂಬಗಳು ಸ್ವಂತ ಶೌಚಾಲಯವನ್ನೇ ಹೊಂದಿಲ್ಲ. ಮಾಹಿತಿಯ ಪ್ರಕಾರ ಜಿಲ್ಲೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಮಾತ್ರವಲ್ಲದೆ 20 ಸಾವಿರಕ್ಕಿಂತಲೂ ಅಧಿಕ ಎಪಿಎಲ್ ಕುಟುಂಬಗಳು ಕೂಡ ಶೌಚಾಲಯ ಹೊಂದಿಲ್ಲ.                 
ಮಾಹಿತಿಯ ಪ್ರಕಾರ ಜಿಲ್ಲೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಮಾತ್ರವಲ್ಲದೆ 20 ಸಾವಿರಕ್ಕಿಂತಲೂ ಅಧಿಕ ಎಪಿಎಲ್ ಕುಟುಂಗಳು ಕೂಡ ಶೌಚಾಲಯ ಹೊಂದಿಲ್ಲ. ಅಚ್ಚರಿ ಎಂದರೆ ಇಷ್ಟು ಕೊರತೆ ಇಟ್ಟುಕೊಂಡೇ, 2011ರಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯಿತಿಗೆ ಕೇಂದ್ರ ಸರ್ಕಾರದಿಂದ ನಿರ್ಮಲ ಗ್ರಾಮ ಪುರಸ್ಕಾರದಲ್ಲಿ ದ್ವಿತೀಯ ಸ್ಥಾನ ಲಭಿಸಿತು!
ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಹೋಲಿಸಿದರೆ ಈ ಜಿಲ್ಲೆಯ ಪರಿಸ್ಥಿತಿ ತಕ್ಕಮಟ್ಟಿಗೆ ಉತ್ತಮವಾಗಿದೆ ಎಂಬುದಷ್ಟೇ ಸಮಾಧಾನದ ಸಂಗತಿ ಹೊರತಾಗಿ ಸಂಪೂರ್ಣ ಬಯಲು ಶೌಚಾಲಯ ಮುಕ್ತ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಜಿಲ್ಲಾ ಪಂಚಾಯಿತಿಯ ಮಾಹಿತಿಯನ್ನೇ ತೆಗೆದುಕೊಂಡರೆ, ಜಿಲ್ಲೆಯ ವ್ಯಾಪ್ತಿಯಲ್ಲಿ 2,69,430 ಕುಟುಂಬಗಳು ನೆಲೆಸಿವೆ. ಇದರಲ್ಲಿ 81,411 ಕುಟುಂಬಗಳು ಶೌಚಾಲಯ ಹೊಂದಿಲ್ಲ.
59,111 ಕುಟುಂಬಗಳು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಎಂದು ಗುರುತಿಸಲಾಗಿದೆ. 22,300 ಎಪಿಎಲ್ ಕುಟುಂಬಗಳೂ ಸೇರಿವೆ.
ಈ ಪೈಕಿ ಸೊರಬ ತಾಲೂಕು ಮುಂದಿದ್ದು, ನಂತರದ ಸ್ಥಾನ ಭದ್ರಾವತಿಗೆ ಸಲ್ಲುತ್ತದೆ.
ಇದ್ದುದರಲ್ಲಿ ಹೊಸ ತಾಲೂಕಿನಲ್ಲಿ ಕಡಿಮೆ ಸಂಖ್ಯೆಯ ಕುಟುಂಬಗಳು ಬಯಲು ಶೌಚಾಲಯ ಅವಲಂಬಿಸಿದ್ದಾರೆ. ಸೊರಬ ತಾಲೂಕಿನ ಬೆನ್ನೂರು ಗ್ರಾಪಂ ಒಂದರಲ್ಲೇ 584 ಕುಟುಂಬಗಳು ಶೌಚಾಲಯಗಳನ್ನು ಹೊಂದಿಲ್ಲ.

ಉದ್ಭವಿಸಿರುವ ಪ್ರಶ್ನೆಗಳು
80 ಸಾವಿರಕ್ಕಿಂತ ಹೆಚ್ಚು ಕುಟುಂಬಗಳು ಶೌಚಕ್ಕೆ ಬಯಲನ್ನೇ ಅವಲಂಬಿಸಿದ್ದರೂ ಪ್ರಶಸ್ತಿ ಬಂದಿದ್ದು ಹೇಗೆ ಎಂಬ ಗಂಭೀರ ಪ್ರಶ್ನೆಯೀಗ ಉದ್ಭವವಾಗಿದೆ. ಇಷ್ಟು ಕುಟುಂಬಗಳು ಈಗ ಬಂದು ಜಿಲ್ಲೆಯನ್ನು ಹೊಕ್ಕವೇ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು. 3 ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ಸಾರ್ವಜನಿಕರಿಗೆ ಅನುದಾನವನ್ನು ನೀಡಲಾಗುತ್ತಿತ್ತು. ಅದೇ ಸಂದರ್ಭದಲ್ಲಿ ಸಾಕಷ್ಟು ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿತ್ತು. ಆದರೆ, ಅದನ್ನು ಪರಿಪೂರ್ಣವಾಗಿ ಜಿಲ್ಲಾಡಳಿತ ಅನುಷ್ಠಾನ ಮಾಡುವಲ್ಲಿ ವಿಫಲವಾಗಿದೆ ಎಂಬ ಗುರುತರ ಆರೋಪವಿದೆ.

ಬಯಲು ಅವಲಂಬಿತ

ಕುಟುಂಬಗಳು (ತಾಲೂಕುವಾರು)
ಸೊರಬ    15922
ಭದ್ರಾವತಿ    14686
ಸಾಗರ    13750
ಶಿಕಾರಿಪುರ    12332
ಶಿವಮೊಗ್ಗ    10449
ತೀರ್ಥಹಳ್ಳಿ    8006
ಹೊಸನಗರ    6446

ಮುಂದೇನು?
ಮುಂಬರುವ ಸಾಲಿನಲ್ಲಿ ಒಟ್ಟು 30 ಸಾವಿರ ಕುಟುಂಬಗಳಿಗೆ ಶೌಚಾಲಯವನ್ನು ನಿರ್ಮಲ ಭಾರತ್ ಅಭಿಯಾನ ಕಾರ್ಯಕ್ರಮದಡಿ ನಿರ್ಮಿಸಿಕೊಡಲು ಉದ್ದೇಶಿಸಲಾಗಿದೆ. ಈವರೆಗೆ 7,310 ಕುಟುಂಬಗಳಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ಸಹಾಯಧನ ನೀಡಲಾಗಿದೆ. ಶೌಚಾಲಯ ನಿರ್ಮಿಸಿಕೊಳ್ಳುವವರಿಗೆ ಈ ಬಾರಿ ಒಟ್ಟಾರೆ 10000 ಸಹಾಯಧನ ನೀಡಲಾಗುತ್ತಿದೆ. ಅದರಲ್ಲಿ 4,700 ಉದ್ಯೋಗ ಖಾತ್ರಿ ಯೋಜನೆಯಲ್ಲಿ ನೀಡಲಾಗುತ್ತದೆ. ಫಲಾನುಭವಿಯು ಉದ್ಯೋಗ ಖಾತ್ರಿ ಜಾಬ್‌ಕಾರ್ಡ್ ಹೊಂದಿರಬೇಕು. ಅಥವಾ ಸಣ್ಣ ಮತ್ತು ಅತಿಸಣ್ಣ ರೈತರು (ಎರಡೂವರೆ ಎಕರೆ ಒಳಗಿನ ಜಮೀನುದಾರರು), ಎಸ್ಸಿ-ಎಸ್ಟಿ ಫಲಾನುಭವಿಗಳಿಗೆ ಸಹಾಯಧನ ದೊರೆಯಲಿದೆ.

- ಶ್ರೀಕಾಂತ್ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement