ಹಲ್ಲೆ ಪ್ರಕರಣ: ಸಂಸದರ ಪುತ್ರ ಸೇರಿ ಆರು ಬಂಧನ
ಬಳ್ಳಾರಿ: ವಾರ್ಡ್ಲಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಶ್ರೀಲಕ್ಷ್ಮಿ ಮೇಲೆ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರು ಸಂಸದ ಸಣ್ಣ ಫಕ್ಕೀರಪ್ಪ ಅವರ ಪುತ್ರ ಮುತ್ತು ಸೇರಿದಂತೆ 6 ಜನರನ್ನು ಬಂಧಿಸಲಾಗಿದೆ.
ಅಲ್ಲದೆ, ಪ್ರಕರಣದ ವಿಚಾರಣೆಗೆ ಹಾಜರಾಗುತವಂತೆ ಸಣ್ಣ ಫಕ್ಕೀರಪ್ಪ ಅವರ ಪುತ್ರಿಯರಿಗೂ ನೋಟಿಸ್ ನೀಡಲಾಗಿದೆ. ಸಂಸದರ ಪುತ್ರ ಮುತ್ತು, ಭವಾನಿ, ಕಿರಣ, ಬಿ.ಶೇಖರ್, ಸುಂದರ್, ಮುಕ್ಕಣ್ಣ ಬಂಧಿತ ಆರೋಪಿಗಳಾಗಿದ್ದು, ಇನ್ನುಳಿದವರ ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ.
ಹಳೆ ಸೇಡು ತೀರಿಸಿಕೊಳ್ಳಲು ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಆರೋಪಿಸಿ ಯುವತಿ ಮತ್ತು ಆಕೆಯ ಸ್ನೇಹಿತನ ಮೇಲೆ ಬುಧವಾರ ಹಲ್ಲೆ ನಡೆಸಲಾಗಿತ್ತು. ಈ ಸಂಬಂಧ ಕೌಲ್ ಬಜಾರ್ನಲ್ಲಿ ಪ್ರಕರಣ ದಾಖಲಾಗಿತ್ತು.