ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸಂಸದ ರಾಜೀವ್ ಚಂದ್ರಶೇಖರ್ಗೆ ಗಣ್ಯ ಹಳೆ ವಿದ್ಯಾರ್ಥಿ ಪ್ರಶಸ್ತಿ ಪ್ರದಾನ

Vishwanath S
Updated On : 22 Dec 2013, 12:59 pm

ಮಣಿಪಾಲ: ದೇಶದ ಅತ್ಯುತ್ತಮ ಖಾಸಗಿ ವಿವಿಗಳಲ್ಲೊಂದಾದ ಮಣಿಪಾಲ ವಿವಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ತನ್ನ ಹಳೆ ವಿದ್ಯಾರ್ಥಿಗಳಿಗಾಗಿಯೇ ಸ್ಥಾಪಿಸಿರುವ 'ಗಣ್ಯ ಹಳೆವಿದ್ಯಾರ್ಥಿ' ಪ್ರಶಸ್ತಿಯನ್ನು ಸಂಸದ, ಉದ್ಯಮಿ ರಾಜೀವ್ ಚಂದ್ರಶೇಖರ್ ಮತ್ತು ವಿಶ್ವ ಶಾಂತಿ ನೋಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮೆಡಿಸಿನ್ಸ್ ಸಾನ್ಸ್ಫ್ರಾಂಟಿಯರ್ ಸಂಸ್ಥೆಯ ಅಧ್ಯಕ್ಷ ಡಾ.ಉನ್ನಿ ಕರುಣಾಕರ್ಗೆ ಶನಿವಾರ ಮಣಿಪಾಲ ವಿ.ವಿ.ಯ ಹಳೆವಿದ್ಯಾರ್ಥಿಗಳ ಸಮಾವೇಶದಲ್ಲಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಸಂಸದ ರಾಜೀವ ಚಂದ್ರಶೇಖರ್ ಮಾತನಾಡಿ, ಜೀವನದಲ್ಲಿ ಎಲ್ಲ ಅವಕಾಶಗಳು ಅನಿರೀಕ್ಷಿತವಾಗಿಯೇ ಬರುತ್ತವೆ. ಈ ಎಲ್ಲಾ ಅವಕಾಶಗಳನ್ನು ಸವಾಲಾಗಿ ಸ್ವೀಕರಿಸಬೇಕು. ಸಫಲತೆ ಮತ್ತು ವಿಫಲತೆಗಳು ಸಂದರ್ಭ ಅನುಸರಿಸಿಕೊಂಡಿರುತ್ತವೆ. ಆದರೆ ಸವಾಲು ಎದುರಿಸಲು ಸಿದ್ಧನಿಲ್ಲದವರು ಎಂದಿಗೂ ಯಶಸ್ಸು ಸಾಧಿಸಲಾರರು ಎಂದು ತಮ್ಮ ಜೀವನದ ಅನೇಕ ಉದಾಹರಣೆಗಳೊಂದಿಗೆ ವಿವರಿಸಿದರು.
ಅವಕಾಶಗಳಿರುವ ದೇಶ: ಇಂದು ಭಾರತ ಹಿಂದೆಂದಿಗಿಂತಲೂ ಅತಿ ಹೆಚ್ಚು ಅವಕಾಶಗಳಿರುವ ದೇಶವಾಗಿದೆ. ಆದ್ದರಿಂದ ಯುವಜನತೆ ಅವಕಾಶಗಳಿಗಾಗಿ ಹುಡುಕಾಡುವ ಅಗತ್ಯವೇ ಇಲ್ಲ. ಆದರೆ ಒಳ್ಳೆಯ ಅವಕಾಶಗಳು ಯಾವುದೆಂದು ಗುರುತಿಸುವ ಅಗತ್ಯ ಇದೆ ಎಂದರು.
ತಮ್ಮ ಜೀವನದಲ್ಲಿ ಸತತ 4 ವರ್ಷಗಳ ಕಾಲ ಒಂದೇ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದದ್ದು ಮಣಿಪಾಲದಲ್ಲಿ ಮಾತ್ರ, ಮಣಿಪಾಲ ತನ್ನ ಜೀವನದ ದಿಕ್ಕನ್ನೇ ಬದಲಾಯಿಸಿತು ಎಂದ ಅವರು ಇಲ್ಲಿನ ಎಂ.ಐ.ಟಿ.ಯಲ್ಲಿ ತಮ್ಮ ಶೈಕ್ಷಣಿಕ ಜೀವನ ಮೆಲುಕು ಹಾಕಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement