ಕರೆಂಟ್ ಉತ್ಪಾದಿಸಿದರೂ ಬೆಳಕು ಕಾಣಲಿಲ್ಲ
ಚಿಕ್ಕಬಳ್ಳಾಪುರ: ಕುಂಟುತ್ತಿದೆ ವ್ಯಾಪಾರ
ಚಿಕ್ಕಬಳ್ಳಾಪುರ: ಕಳೆದೊಂದು ವಾರದಿಂದ ಜಿಲ್ಲಾ ವ್ಯಾಪ್ತಿಯಲ್ಲಿ ವಿದ್ಯುತ್ ಕಣ , ಾಮುಚ್ಚಾಲೆ ಆಡುತ್ತಿದೆ. ಕರೆಂಟ್ ಇದ್ದಿದ್ದಕ್ಕಿಂತ ತೆಗೆಯುವುದೇ ಜಾಸ್ತಿಯಾಗಿದೆ. ಹೀಗಾಗಿ ರೈತರು, ಸಾರ್ವಜನಿಕರು, ಉದ್ಯಮಿಗಳು ಕಂಗಾಲಾಗಿದ್ದಾರೆ. ಯಲುವಹಳ್ಳಿ, ನಾಯನಹಳ್ಳಿ, ಜಾತವಾರ, ಮಂಡಿಕಲ್, ಪೆರೇಸಂದ್ರ ಸೇರಿದಂತೆ ಜಿಲ್ಲಾದ್ಯಂತ ಮೊದಲು ಬೆಳಗ್ಗೆ 5.30ಕ್ಕೆ ಕರೆಂಟ್ ಕಟ್, ಮತ್ತೆ 6 ಗಂಟೆಗೆ ಬರುತ್ತದೆಯಾದರೂ 6.30ಕ್ಕೆ ಇರುವುದಿಲ್ಲ. ನಂತರ 11 ಗಂಟೆಗೆ ಕರೆಂಟ್ ಬರುತ್ತದೆಯಾದರೂ ಕೇವಲ 15 ನಿಮಿಷದಲ್ಲಿ ಮಾಯವಾಗಿ ಬಿಡುತ್ತದೆ. ಮತ್ತೆ 4 ಗಂಟೆಗೆ ಬಂದು ಅರ್ಧ ಗಂಟೆ ಸಮಯ ಕಳೆಯುವಷ್ಟರಲ್ಲಿ ಹೋಗುತ್ತದೆ. ಆ ನಂತರ ಬರುವುದು 8 ಗಂಟೆ ಬಳಿಕ. ಇದರ ನಡುವೆ ಒಮ್ಮೆ ವಿದ್ಯುತ್ ಸರಬರಾಜು ಪ್ರಾರಂಭವಾಗುತ್ತಿದ್ದಂತೆ ಎಲ್ಲರೂ ಬಳಕೆಗೆ ಮುಂದಾಗುವುದರಿಂದ ಒತ್ತಡ ಹೆಚ್ಚಾಗಿ ಅನೇಕ ಬಾರಿ ಟ್ರಿಪ್ ಆಗುತ್ತಿದೆ.
ತೊಂದರೆಗಳೇನು?: ಸಂಜೆಯಾಗುತ್ತಿದ್ದಂತೆ ಕಗ್ಗತ್ತಲಿನ ಪ್ರದೇಶವಾಗಿ ಪರಿವರ್ತನೆಯಾಗುತ್ತಿದೆ. ಚಲನಚಿತ್ರ ಮಂದಿರ, ಜೆರಾಕ್ಸ್ ಅಂಗಡಿ, ಪಿಂಟರ್ಸ್ ಮತ್ತು ಸೈಬರ್ ಸೆಂಟರ್ಸ್ ಸೇರಿದಂತೆ ಅಂಗಡಿ ಮುಂಗಟ್ಟುಗಳಲ್ಲಿನ ವ್ಯಾಪಾರ ವಹಿವಾಟಿನ ಮೇಲೆ ವಿದ್ಯುತ್ ಸಮಸ್ಯೆ ದೊಡ್ಡ ಹೊಡೆತ ನೀಡುತ್ತಿದೆ. ಯುಪಿಎಸ್ಗಳು ಚಾರ್ಜಾಗುತ್ತಿಲ್ಲ. ಯಂತ್ರಗಳು ಕೆಲಸ ಮಾಡುತ್ತಿಲ್ಲ. ಜನರೇಟರ್ಗಳಿಗೆ ಹೆಚ್ಚಿಗೆ ಹಣವನ್ನು ಸುರಿಯಬೇಕಾಗಿದೆ. ಮತ್ತೊಂದೆಡೆ ಕರೆಂಟ್ ಸಮಸ್ಯೆಯ ದುಷ್ಪರಿಣಾಮಕ್ಕೆ ಗ್ರಾಹಕರು ಸೇವೆಗೆ ಹೆಚ್ಚಿನ ಬೆಲೆ ತೆರಬೇಕಾಗಿದೆ (ಜೆರಾಕ್ಸ್, ಸಿನಿಮಾ ಟಿಕೆಟ್, ಸೈಬರ್ ಸೆಂಟರ್, ಗಿರಣಿಗಳು ಸೇವೆ ದುಬಾರಿ). ಸರ್ಕಾರಿ ಕಚೇರಿಗಳಲ್ಲಿ ಕೆಲಸ ನಿರ್ವಹಣೆಗೆ ತೊಂದರೆಯಾಗುತ್ತಿದೆ. ತಾಲೂಕು ಕಚೇರಿ, ಸಬ್ ರಿಜಿಸ್ಟರ್(ನೋಂದಣಿ ಕಚೇರಿ) ಭೂಮಿ ನೋಂದಣಿಗೆ ಸಮಸ್ಯೆಯಾಗಿದೆ. ಮೊದಲೇ ನೀರಾವರಿ ಸೌಲಭ್ಯಗಳಿಂದ ತತ್ತರಿಸುತ್ತಿರುವ ಇಲ್ಲಿನ ರೈತರು ತಮ್ಮ ತೋಟಗಳಿಗೆ ಕೊಳವೆ ಬಾವಿಗಳಿಂದ ನೀರನ್ನು ಹರಿಸಲು ಸಾಧ್ಯವಾಗದೆ ಬೆಳೆ ನಷ್ಟದ ಭೀತಿ ಎದುರಿಸುತ್ತಿದ್ದಾರೆ. ತ್ರಿಫೇಸ್ ಇರಲಿ, ಸರಿಯಾಗಿ ಸಿಂಗಲ್ ಫೇಸ್ ಕರಂಟೂ ಸಿಗುತ್ತಿಲ್ಲ. ವಿದ್ಯುತ್ ಅನೇಕ ಬಾರಿ ಹೋಗಿ ಬರುವ ಸ್ಪರ್ಧೆಯ ತೀವ್ರ ಪೈಪೋಟಿಯಲ್ಲಿ ಟ್ರಾನ್ಸ್ಫಾರ್ಮ್ರ್, ಮೋಟಾರುಗಳು ಸುಟ್ಟು ಹೋಗಿ ರಿಪೇರಿಗೆ ಬೀಳುತ್ತಿವೆ.
ಬಳ್ಳಾರಿ: ತ್ರಿಕಾಲದಲ್ಲೂ ಕರೆಂಟ್ 'ಉರಿ'
ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ ವಿದ್ಯುತ್ ನಿಲುಗಡೆಗೆ ಬೇಸಿಗೆ, ಮಳೆಗಾಲ, ಚಳಿಗಾಲ ಎಂಬ ತಾರತಮ್ಯವೇ ಇಲ್ಲ. ಎಲ್ಲ ಕಾಲದಲ್ಲೂ ಇಲ್ಲಿ ಕರೆಂಟ್ ಕಟ್ ಬಿಸಿ ತಾಗುತ್ತಲೇ ಇರುತ್ತದೆ. ಪ್ರತಿದಿನ ಗ್ರಾಮಾಂತರ ಪ್ರದೇಶದಲ್ಲಿ 6 ತಾಸು, ಜಿಲ್ಲಾ ಕೇಂದ್ರದಲ್ಲಿ 2 ತಾಸು ಹಾಗೂ ತಾಲೂಕು ಕೇಂದ್ರದಲ್ಲಿ 3ರಿಂದ 4 ತಾಸುಗಳ ಲೋಡ್ಶೆಡ್ಡಿಂಗ್ ನಿರಂತರವಾಗಿದೆ. ಜಿಲ್ಲೆಯ ಕುಡಿತಿನಿಯಲ್ಲಿರುವ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಹಾಗೂ ರಾಯಚೂರಿನ ಆರ್ಟಿಪಿಎಸ್ ಸೇರಿದಂತೆ ಇತರ ಕಡೆಯಿಂದ ಜಿಲ್ಲೆಗೆ ವಿದ್ಯುತ್ ಪೂರೈಕೆಯಾಗುತ್ತದೆ. ಇವೆರಡರಲ್ಲೂ ವಿದ್ಯುತ್ ಉತ್ಪಾದನೆಯಲ್ಲಿ ವ್ಯತ್ಯಯವಾದರೆ ಲೋಡ್ಶೆಡ್ಡಿಂಗ್ ಸಮಯದಲ್ಲಿ ವ್ಯತ್ಯಾಸವಾಗುತ್ತದೆ. ಬಳ್ಳಾರಿ ಜಿಲ್ಲಾ ಕೇಂದ್ರದಲ್ಲಿ ಪ್ರಸ್ತುತವಾಗಿ ಬೆಳಗ್ಗೆ 1 ಗಂಟೆ ಹಾಗೂ ಸಂಜೆ 1 ಗಂಟೆ ಸೇರಿ ಎರಡು ಗಂಟೆ 'ಅಧಿಕೃತ' ಲೋಡ್ಶೆಡ್ಡಿಂಗ್ ಇದ್ದರೆ, ಎಸ್ಎಲ್ಡಿಸಿಯಿಂದ ಕೊರತೆ ಮಾಹಿತಿ ಬಂದರೆ ಇನ್ನೂ ಹೆಚ್ಚಿನ ಕಾಲ ಲೋಡ್ಸೆಡ್ಡಿಂಗ್ ಮಾಡಲಾಗುತ್ತದೆ. ತಾಲೂಕು ಮಟ್ಟದ ಪಟ್ಟಣ ಪ್ರದೇಶದಲ್ಲಿ ನಿತ್ಯವು 3 ರಿಂದ 4 ತಾಸುಗಳು ಕಾಲ ಲೋಡ್ಶೆಡ್ಡಿಂಗ್ ಮಾಡಲಾಗುತ್ತದೆ. ಇನ್ನು ಗ್ರಾಮಾಂತರ ಪ್ರದೇಶದಲ್ಲಿ 6 ತಾಸು ತ್ರಿಫೇಸ್, 12 ತಾಸು ಎರಡು ಫೇಸ್ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಇನ್ನುಳಿದ 6 ತಾಸುಗಳು ಲೋಡ್ಶೆಡ್ಡಿಂಗ್. ಇನ್ನು ಪೂರೈಕೆಯಾಗುವ 18 ತಾಸುಗಳಲ್ಲಿ ಆಗೊಮ್ಮೆ, ಈಗೊಮ್ಮೆ ವಿದ್ಯುತ್ ಪೂರೈಕೆ ಸಾಮಾನ್ಯವಾಗಿದೆ.
ನಷ್ಟ ತಗ್ಗಿಸಲು ಲೋಡ್ಶೆಡ್ಡಿಂಗ್
ಉಡುಪಿ: ಜಿಲ್ಲೆಯಲ್ಲಿ ಮತ್ತೆ ವಿದ್ಯುತ್ ಕಣ , ಾಮುಚ್ಚಾಲೆ ಆರಂಭವಾಗಿದೆ. ಕಳೆದೊಂದು ತಿಂಗಳಿಂದ ಯಾವುದೇ ಮುನ್ಸೂಚನೆ ಇಲ್ಲದೆ ಕೆಲವೊಮ್ಮೆ ದಿನದಲ್ಲಿ 2 ಅಥವಾ 3 ಬಾರಿಯೂ ವಿದ್ಯುತ್ ಕಡಿತ ಮಾಡಲಾಗುತ್ತಿದ್ದು, ಒಂದು ಬಾರಿ ಕಡಿತ ಮಾಡಿದರೆ ಕನಿಷ್ಠ 1 ಗಂಟೆ ಇರುವುದಿಲ್ಲ. ಪೂರ , ಪ್ರಮಾಣದಲ್ಲಿ ಬೇಸಿಗೆ ಆರಂಭವಾಗಿಲ್ಲ, ಈಗಲೇ ಹೀಗೆ, ಮುಂದೆ ಹೇಗೆ ಎನ್ನುವ ಆತಂಕದಲ್ಲಿ ಜಿಲ್ಲೆಯ ಜನರಿದ್ದಾರೆ. ನಾಲ್ಕೈದು ವರ್ಷಗಳ ಹಿಂದೆ ಜೋಗದಿಂದ ಜಲ ವಿದ್ಯುತ್ ಸರಬರಾಜು ಮಾಡಲಾಗುತ್ತಿತ್ತು, ಆಗಲೂ ವಿದ್ಯುತ್ ಉತ್ಪಾದನೆಗೆ ಶರಾವತಿ ನದಿಯಲ್ಲಿ ನೀರಿನ ಅಭಾವ ಅಥವಾ ತಾಂತ್ರಿಕ ಕಾರಣಗಳಿಗಾಗಿ ವಿದ್ಯುತ್ ಕಡಿತ ಉಂಟಾಗುತ್ತಿತ್ತು. ಈಗ ಜಿಲ್ಲೆಯಲ್ಲಿಯೇ ಉಷ , ವಿದ್ಯುತ್ (ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್) ಸ್ಥಾವರ ಸ್ಥಾಪನೆಯಾಗಿದೆ. ಇಲ್ಲಿ ದಿನವೊಂದಕ್ಕೆ 2030 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ಆದರೂ ದೀಪದ ಕೆಳಗೆ ಕತ್ತಲು ಎಂಬಂತೆ ಉಡುಪಿ ಜಿಲ್ಲೆಯಲ್ಲಿ ವಿದ್ಯುತ್ ಕಡಿತ ತಪ್ಪಿಲ್ಲ. ಈ ಸ್ಥಾವರಕ್ಕೆ ಆಮದು ಮಾಡಿದ ಕಲ್ಲಿದ್ದಲೇ ಬೇಕಾಗಿದ್ದು, ವಿದೇಶದಿಂದ ಆಮದು ಮಾಡಬೇಕಾದ ಕಲ್ಲಿದ್ದಲಿನ ಬೆಲೆ ಏಕಾಏಕಿ ಆಕಾಶಕ್ಕೇರಿದೆ. ಆದ್ದರಿಂದ ನಷ್ಟವನ್ನು ತಪ್ಪಿಸಲು ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್ ವಿದ್ಯುತ್ ಉತ್ಪಾದನೆಯನ್ನೇ ಕಡಿತಗೊಳಿಸಿದ್ದು, ವಿದ್ಯುತ್ ಕಡಿತಗೊಳಿಸಲಾಗುತ್ತಿದೆ.
ಚಿಕ್ಕಮಗಳೂರಿನಲ್ಲಿ ಕಡಿತಕ್ಕೆ ಮಿತಿಯಿಲ್ಲ
ಚಿಕ್ಕಮಗಳೂರು: ಜಿಲ್ಲೆಯ 7 ತಾಲೂಕುಗಳಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಲೋಡ್ ಶೆಡ್ಡಿಂಗ್ ಆಗುತ್ತಿದೆ. ಆದರೆ, ಕಳೆದ ಎರಡು ದಿನಗಳಿಂದ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಬೆಳಗ್ಗೆ 2 ಗಂಟೆ, ಸಂಜೆ 2 ಗಂಟೆ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಇದು, ಅಧಿಕೃತವಾಗಿ ಮಾಡಲಾಗುತ್ತಿರುವ ಲೋಡ್ ಶೆಡ್ಡಿಂಗ್ ಅಲ್ಲ. ಪ್ರತಿ ದಿನ 4 ಗಂಟೆಗಳ ಕಾಲ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದ್ದರೂ, ಇದರ ನಡುವೆ ದುರಸ್ತಿ ಕಾರ್ಯಕ್ಕೆಂದು ಕೆಲವು ದಿನಗಳಿಂದ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ಪವರ್ ಕಟ್. ಇನ್ನೂ ಕೆಲವು ಗ್ರಾಮಾಂತರ ಪ್ರದೇಶಗಳಲ್ಲಿ ಆಗಾಗ ವಿದ್ಯುತ್ ನಿಲುಗಡೆ ಆಗುತ್ತಲೇ ಇದೆ. ಚಿಕ್ಕಮಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಕ್ಕೆ ದಿನಕ್ಕೆ 16 ರಿಂದ 20 ಮೆವ್ಯಾ ವಿದ್ಯುತ್ ಬೇಕು. ಆದರೆ, ಕಳೆದ ನಾಲ್ಕೈದು ದಿನಗಳಿಂದ ಕೇವಲ 6 ಮೆವ್ಯಾ ಮಾತ್ರ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಕಡಿಮೆ ಪ್ರಮಾಣದಲ್ಲಿ ಸರಬರಾಜು ಆಗುತ್ತಿರುವ ಈ ವಿದ್ಯುತ್ ಅನ್ನು ಬೆಂಗಳೂರಿನಲ್ಲಿರುವ ಲೋಡ್ ಡಿಸ್ ಪ್ಯಾಚ್ ಸೆಂಟರ್ (ಎಲ್ಡಿಸಿ) ಸೂಚನೆ ಮೇರೆಗೆ ಬಡಾವಣೆವಾರು ಹಂಚಿಕೆ ಮಾಡಲಾಗುತ್ತಿದೆ. ಇದರ ಮೇಲೆ ಮಂಗಳೂರಿನಲ್ಲಿರುವ ಖಾಸಗಿ ಸಂಸ್ಥೆಯಾದ ಸ್ಕಾಡ್ ಆದ್ದರಿಂದ ಕೆಪಿಟಿಸಿಎಲ್ ಈ ಪವರ್ ಕಟ್ ನಿಯಮವನ್ನು ಪಾಲನೆ ಮಾಡುತ್ತಿದ್ದು, ಇದು, ಚಿಕ್ಕಮಗಳೂರು ಜಿಲ್ಲೆಯ ಗ್ರಾಹಕರಿಗೆ ಕಿರಿಕಿರಿಯಾಗುತ್ತಿದೆ.
ಶಿವಮೊಗ್ಗದಲ್ಲೂ ಕರೆಂಟ್ ಕಾಟ
ಶಿವಮೊಗ್ಗ: ಡಿ.18ರಿಂದ ಆರಂಭವಾಗಿರುವ ಅನಿಯಮಿತ ವಿದ್ಯುತ್ ಕಡಿತ ಶುಕ್ರವಾರವೂ ಮುಂದುವರಿದಿದೆ. ಯುಪಿಸಿಎಲ್, ಆರ್ಟಿಪಿಎಸ್ ಮತ್ತು ಪವನ ವಿದ್ಯುತ್ನಿಂದ ಕಡಿಮೆ ಪ್ರಮಾಣದಲ್ಲಿ ವಿದ್ಯುತ್ ಸರಬರಾಜಾಗುವ ಕಾರಣ ನಿಗದಿಯಾದಷ್ಟು ವಿದ್ಯುತ್ ಲಭ್ಯವಿಲ್ಲ. ಹೀಗಾಗಿ ವಿದ್ಯುತ್ ಕಡಿತ ಅನಿವಾರ್ಯ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಕೊಂಚ ಹೆಚ್ಚಿನ ಅವಧಿ ವಿದ್ಯುತ್ ತೆಗೆಯಲಾಗುತ್ತಿದೆ ಎಂದು ವಿವರಿಸಿದ್ದಾರೆ. ಸಾರ್ವಜನಿಕರ ಮಾಹಿತಿಯನುಸಾರ ಗ್ರಾಮೀಣ ಭಾಗದಲ್ಲಿ ಸುಮಾರು 4ರಿಂದ 6 ಗಂಟೆವರೆಗೂ ವಿದ್ಯುತ್ ಕಡಿತವಾಗುತ್ತಿದೆ. ನಗರ ಪ್ರದೇಶದಲ್ಲಿ 1ರಿಂದ 2 ಗಂಟೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಅಧಿಕಾರಿಗಳ ಮಾಹಿತಿ ಪ್ರಕಾರ ಮೆಸ್ಕಾಂಗೆ 60ರಿಂದ 80 ಮೆಗಾವ್ಯಾಟ್ ಕಡಿಮೆ ವಿದ್ಯುತ್ ಬರುತ್ತಿದೆ. ಹೀಗಾಗಿ ಲೋಡ್ ಶೆಡ್ಡಿಂಗ್ ಮೂಲಕ ಹಂಚಿಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕೊರತೆ ಸಾಧ್ಯತೆ ಬರಬಹುದು ಎಂದವರು ತಿಳಿಸಿದ್ದಾರೆ.
ಚಿತ್ರದುರ್ಗ: 2 ಗಂಟೆ ಮಾತ್ರ ಕರೆಂಟ್
ಚಿತ್ರದುರ್ಗ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ವಿದ್ಯುತ್ ಪೂರೈಕೆಯಲ್ಲಿ ಅತೀವ ವ್ಯತ್ಯಯ ಉಂಟಾಗಿದೆ. ಅನಿಯಮಿತವಾಗಿ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿನ ವಿದ್ಯುತ್ ಬೇಡಿಕೆ ಪ್ರಮಾಣ ಪ್ರತಿನಿತ್ಯ ಸುಮಾರು 3 ಸಾವಿರ ದಶಲಕ್ಷ ಯೂನಿಟ್. ಆದರೆ, ಅಗತ್ಯ ಪ್ರಮಾಣಕ್ಕಿಂತ ಶೇ.65ರಷ್ಟು ಕಡಿಮೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಇದರಿಂದಾಗಿ ನಗರ, ಪಟ್ಟಣ ಪ್ರದೇಶಗಳಲ್ಲಿ 6ರಿಂದ 8 ಗಂಟೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಿಗೆ ಕೇವಲ 2 ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಉಡುಪಿಯ ಯುಪಿಸಿಎಲ್ ಸಂಪೂರ , ಬಂದ್ ಆಗಿದೆ. ಆರ್ಟಿಪಿಎಸ್ನ 4 ಘಟಕಗಳು ಸ್ಥಗಿತಗೊಂಡಿವೆ. ಕಲ್ಲಿದ್ದಲು ಪೂರೈಕೆಯ ಸಮಸ್ಯೆ ಇರುವುದೇ ಇದಕ್ಕೆ ಕಾರಣ ಎನ್ನುತ್ತಾರೆ ಬೆಸ್ಕಾಂ ವೃತ್ತ ಕಚೇರಿ ಕಾರ್ಯ ನಿರ್ವಾಹಕ ಎಂಜಿನಿಯರ್ ದಾವಣಗೆರೆಯ ನಾಗಪ್ಪ. ವಿದ್ಯಾರ್ಥಿಗಳು, ವ್ಯಾಪಾರಸ್ಥರಿಗೆ ಕರೆಂಟ್ ಅನಿಯಮಿತವಾಗಿ ಕಟ್ ಮಾಡುತ್ತಿರುವುದರಿಂದ ತೀವ್ರ ಸಮಸ್ಯೆಯಾಗಿದೆ.
ಗದಗ: ಹಳ್ಳಿಯಲ್ಲಿ ಕರೆಂಟ್ ಕಾಟ ಗಂಭೀರ
ಗದಗ: ಜಿಲ್ಲೆಯ 106 ಗ್ರಾಪಂಗಳ ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಅತ್ಯಂತ ಗಂಭೀರವಾಗಿದೆ. ದಿನದಲ್ಲಿ ಕೇವಲ 12 ಗಂಟೆ ಮಾತ್ರ ವಿದ್ಯುತ್ ಸಂಪರ್ಕವಿರುತ್ತದೆ. 6 ತಾಸು ತ್ರಿಫೇಸ್ ಮತ್ತು 6 ತಾಸು ಸಿಂಗಲ್ ಫೇಸ್ ನೀಡಲಾಗುತ್ತಿದ್ದರೂ, ನಿರಂತರವಾಗಿ ನೀಡದೇ ಪ್ರತಿ 3 ಗಂಟೆಗೊಮ್ಮೆ ಸ್ಥಗಿತ ಮಾಡಲಾಗುತ್ತಿದೆ. ಜಿಲ್ಲೆಯ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ದಿನವಿಡೀ ವಿದ್ಯುತ್ ಪೂರೈಕೆ ಮಾಡಲಾಗುತ್ತಿದ್ದರೂ ಬೇಡಿಕೆ ಅನುಸಾರ ಸಂಜೆ ವೇಳೆ 1 ಗಂಟೆ ಲೋಡ್ಶೆಡ್ಡಿಂಗ್ ಜಾರಿ ಮಾಡಲಾಗುತ್ತಿದೆ. ಆದರೆ, ಜಿಲ್ಲೆಯ ನರಗುಂದ ತಾಲೂಕನ್ನು ಹೊರತುಪಡಿಸಿದಲ್ಲಿ ಇನ್ನುಳಿದ 4 ತಾಲೂಕುಗಳ 45 ಸಾವಿರಕ್ಕೂ ಹೆಚ್ಚಿನ ರೈತರು ನೀರಾವರಿಗಾಗಿ ಆಶ್ರಯಿಸಿರುವುದು ಕೊಳವೆಬಾವಿಗಳನ್ನು. ಹೀಗಾಗಿ ಸಮರ್ಪಕ ವಿದ್ಯುತ್ (ತ್ರಿಫೇಸ್) ಪೂರೈಕೆಯಾಗದೇ ಇರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ಶೇಂಗಾ, ಬಿಟಿ ಹತ್ತಿ, ಕಬ್ಬಿಗೆ ತೊಂದರೆಯಾಗುತ್ತಿದೆ. ಇನ್ನು ತೋಟಗಾರಿಕಾ ಬೆಳೆ ಬೆಳೆದ ರೈತರ ಪಾಡಂತೂ ಅಯೋವುಯ.
ಕಗ್ಗತ್ತಲಲ್ಲೇ ಬದುಕಿನ ಸಮರ
ಚಾಮರಾಜನಗರ: ಜಿಲ್ಲಾದ್ಯಂತ ಬೇಸಿಗೆ ಆರಂಭವಾಗುವ ಮುನ್ನವೇ ಸುಗ್ಗಿ ಕಾಲದಲ್ಲೇ ಕರೆಂಟ್ ಕೈ ಕೊಡಲು ಶುರುಮಾಡಿದೆ. ಗ್ರಾಮಾಂತರ ಪ್ರದೇಶ ಮಾತ್ರವಲ್ಲದೆ ಪಟ್ಟಣದಲ್ಲಿ ಅನಧಿಕೃತ ಲೋಡ್ ಶೆಡ್ಡಿಂಗ್ ಆರಂಭವಾಗಿದೆ. ಜಿಲ್ಲೆಯ ಹೆಚ್ಚಿನ ರೈತರು ಪಂಪ್ಸೆಟ್ ನಂಬಿದ್ದು, ಅನಿಯಮಿತ ಲೋಡ್ ಶೆಡ್ಡಿಂಗ್ನಿಂದ ಕಟಾವಿಗೆ ಬಂದಿರುವ ಬೆಳೆಯನ್ನು ಕಳೆದುಕೊಳ್ಳಬೇಕಾದ ಆತಂಕವನ್ನು ರೈತರು ಎದುರಿಸುತ್ತಿದ್ದಾರೆ. ರೈತರಲ್ಲದೆ ಗ್ರಾಹಕರು, ಸಣ , -ಪುಟ್ಟ ಕೈಗಾರಿಕೆ, ಜೆರಾಕ್ಸ್ ಅಂಗಡಿ ಮಾಲೀಕರು ವಿದ್ಯುತ್ ಗಂಟೆ ಬಿಟ್ಟು ಗಂಟೆ ಕಡಿತ ಆಗುತ್ತಿರುವುದರಿಂದ ಪರದಾಡುವಂತಾಗಿದೆ. ಚಾಮರಾಜನಗರ, ಗುಂಡ್ಲುಪೇಟೆ, ಹನೂರು ಮತ್ತು ಮಹದೇಶ್ವರ ಬೆಟ್ಟಕ್ಕೆ ನೀರು ಪೂರೈಕೆಯಲ್ಲೂ ವ್ಯತ್ಯಯವಾಗಿದೆ.
ರೈತರು, ವ್ಯಾಪಾರಸ್ಥರಿಗೆ ವಿದ್ಯುತ್ ಶಾಕ್!
ತುಮಕೂರು: ಕಲ್ಪತರು ಜಿಲ್ಲೆಯಾದ ತುಮಕೂರಿನ ಜನತೆಗೆ ಅಕ್ಷರಶಃ ವಿದ್ಯುತ್ ಇರೋದೇ ಮರೆತಿದೆ. 10 ತಾಲೂಕುಗಳನ್ನು ಒಳಗೊಂಡ ಜಿಲ್ಲೆಯಲ್ಲಿ ವಿದ್ಯುತ್ ಸಮಸ್ಯೆಯಾಗಿದೆ. ಕಳೆದ 1 ತಿಂಗಳಿಂದ ಯಾವಾಗ ಬೇಕೋ ಆಗ ಪವರ್ ಕಟ್ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳಿಗೆ, ವ್ಯಾಪಾರಸ್ಥರಿಗೆ ದೊಡ್ಡ ತಲೆನೋವಾಗಿದೆ. ರಿಪೇರಿ ನೆಪದಲ್ಲಿ ಮನಸೋ ಇಚ್ಛೆ ಕೇಬಲ್ಗಳನ್ನು ಕಟ್ ಮಾಡುತ್ತಿರುವುದರಿಂದ ವಿದ್ಯುತ್ ಸಮಸ್ಯೆ ಒಂದೆಡೆಯಾದರೆ, ಮತ್ತೊಂದೆಡೆ ಸದಾ ಲೋಡ್ ಶೆಡ್ಡಿಂಗ್ ತಲೆನೋವಾಗಿ ಪರಿಣಮಿಸಿದೆ. ತುಮಕೂರಿನಲ್ಲಿ ಯುಪಿಎಸ್ ಕೂಡ ಬಂದ್ ಆಗುವಷ್ಟರ ಮಟ್ಟಿಗೆ ವಿದ್ಯುತ್ ಕಣ , ಾಮುಚ್ಚಾಲೆ ಶುರುವಾಗಿದೆ. ಬೇಕಾಬಿಟ್ಟಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸುತ್ತಿರುವುದರಿಂದ ಪೆಟ್ರೋಲ್ ಬಂಕ್, ಬ್ಯಾಂಕುಗಳು ಇತರೆ ಸರ್ಕಾರಿ ಕಚೇರಿಗಳ ಗೋಳು ಹೇಳತೀರದು. ತೋಟಕ್ಕೆ, ಗದ್ದೆಗೆ ನೀರು ಹರಿಸಲು ವಿದ್ಯುತ್ ಕೂಡ ಇಲ್ಲ. ಸದಾ ಸಿಂಗಲ್ ಫೇಸ್ ಇಲ್ಲವೇ ಪವರ್ ಕಟ್ ಆಗಿರುತ್ತದೆ.ಇದರಿಂದ ಜಿಲ್ಲೆಯ ರೈತರು ಬೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉದ್ಯಮಿಗಳಿಗೆ ಹೊಡೆತ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮುನ್ಸೂಚನೆ ಇಲ್ಲದೆ ವಿದ್ಯುತ್ ಕಡಿತಗೊಳ್ಳುತ್ತಿದೆ. ಪರಿಣಾಮವಾಗಿ ರೈತರು, ಹೊಟೇಲ್ ಉದ್ಯಮಿಗಳು, ಉದ್ಯೋಗಿಗಳು, ಮನೆಮಂದಿ ಸಮಸ್ಯೆ ಎದುರಿಸುವಂತಾಗಿದೆ. ನಗರ ಪ್ರದೇಶದಲ್ಲಿ 1 ಗಂಟೆಯಂತೆ 4 ಬಾರಿ ವಿದ್ಯುತ್ ಕಡಿತಗೊಂಡರೆ, ಗ್ರಾಮೀಣ ಪ್ರದೇಶದಲ್ಲಿ ಬೆಳಗ್ಗೆ 6 ರಿಂದ 2 ಗಂಟೆಯಂತೆ 5 ಬಾರಿ ವಿದ್ಯುತ್ ಕಡಿತಗೊಳ್ಳುತ್ತಿದೆ. ಒಂದೊಂದು ಏರಿಯಾದ ಫೀಡರಿನಲ್ಲಿ ಹಗಲು ರಾತ್ರಿ 1 ಗಂಟೆ ವಿದ್ಯುತ್ ನಿಲುಗಡೆಗೊಳಿಸುತ್ತಿದ್ದಾರೆ. ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಪ್ರಾರಂಭಗೊಂಡಿದ್ದು, ಮಾಹಿತಿ ಇಲ್ಲದೆ ವಿದ್ಯುತ್ ಕಡಿತಗೊಳಿಸುವುದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ತುಂಬಾ ತೊಂದರೆಗೆ ಒಳಗಾಗಿದ್ದಾರೆ. ಐದು ನಿಮಿಷಕ್ಕೊಂದು ಬಾರಿ ವಿದ್ಯುತ್ ಕಡಿತಗೊಳಿಸುತ್ತಿದ್ದಾರೆ. ಬೇಕಾಬಿಟ್ಟಿ ವಿದ್ಯುತ್ ಕಡಿತಗೊಳಿಸುವುದರ ಬದಲು ಸಮಯ ನಿಗದಿಪಡಿಸಲಿ ಎನ್ನುತ್ತಾರೆ ಬಂಟ್ವಾಳ ತಾಲೂಕು ಸಜಿಪ ಮುನ್ನೂರು ಗ್ರಾಮದ ರೈತ ಸುಬ್ರಹ್ಮಣ್ಯ ಭಟ್. ಜಿಲ್ಲೆಯ ಸುಳ್ಯದಲ್ಲಿ 110 ಕೆ.ವಿ. ಸಬ್ಸ್ಟೇಷನ್ ಮಂಜೂರಾಗಿ ದಶಕ ಸಂದರೂ ಇನ್ನೂ ನೆನೆಗುದಿಯಲ್ಲೇ ಇದೆ. ಇದರಿಂದ ಸುಳ್ಯ ತೀವ್ರ ತರದ ವಿದ್ಯುತ್ ಸಮಸ್ಯೆಯಿಂದ ಬಳಲುವಂತಾಗಿದೆ. 110 ಕೆ.ವಿ. ಸಬ್ಸ್ಟೇಷನ್ ವಿದ್ಯುತ್ ಮಾರ್ಗದಲ್ಲಿ ಖಾಸಗಿಯವರ ಆಕ್ಷೇಪ ಇರುವುದರಿಂದ ಜಾಗ ಸ್ವಾಧೀನವಾಗದೆ ತೊಡಕಾಗಿದೆ ಎನ್ನುವುದು ಇಲಾಖೆಯ ಸಮಜಾಯಿಷಿ. ಆದರೆ ಪರ್ಯಾಯ ಮಾರ್ಗ ಹುಡುಕುವ ಪ್ರಯತ್ನ ನಿಧಾನವಾಗುತ್ತಿದೆ. ಪುತ್ತೂರು ಹಾಗೂ ಬಂಟ್ವಾಳ ವ್ಯಾಪ್ತಿಯಲ್ಲೂ ಅನಿಯಮಿತ ವಿದ್ಯುತ್ ಲೋಡ್ಶೆಡ್ಡಿಂಗ್ ಆರಂಭವಾಗಿದ್ದು, ಆಗಾಗ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ.
2030 ಮೆಗಾವ್ಯಾಟ್
ಉಡುಪಿ ಉಷ , ವಿದ್ಯುತ್ (ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್) ಸ್ಥಾವರದಲ್ಲಿ ಪ್ರತಿದಿನ ಉತ್ಪಾದನೆ ಆಗುತ್ತಿರುವ ವಿದ್ಯುತ್. ಆದರೂ ಈ ಜಿಲ್ಲೆಯಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲಾಗುತ್ತಿಲ್ಲ!
12 ಗದಗ ಜಿಲ್ಲೆಯ 106 ಗ್ರಾಪಂಗಳ ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿ ಪ್ರತಿ ದಿನ ಕೇವಲ 12 ಗಂಟೆ ಮಾತ್ರ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ
ಚಿತ್ರದುರ್ಗ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ಪ್ರತಿದಿನ ಕೇವಲ 2 ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ.
- ಶಶಿಧರ ಮೇಟಿ
- ಸುಭಾಶ್ಚಂದ್ರ ವಾಗ್ಳೆ
- ಆರ್.ತಾರಾನಾಥ್
- ಶ್ರೀಕಾಂತ್ ಭಟ್
- ಕ.ಮ.ರವಿಶಂಕರ
- ಶಿವಕುಮಾರ್ ಕುಷ್ಟಗಿ
- ಎನ್.ವೆಂಕಟೇಶ್
- ದೇವರಾಜ ಕಪ್ಪಸೋಗೆ
- ವಜ್ರಾಕ್ಷಿ ಬಂಟ್ವಾಳ
- ಉಗಮ ಶ್ರೀನಿವಾಸ್
- ಎಂ.ಡಿ.ಉಮೇಶ್ ಮಳವಳ್ಳಿ