28ಕ್ಕೆ ಕೇಜ್ರಿವಾಲ್ ಪ್ರಮಾಣ ಸ್ವೀಕಾರ
ಕಾಂಗ್ರೆಸ್ನ 15 ವರ್ಷಗಳ ಅಧಿಕಾರದ ಗದ್ದುಗೆಯನ್ನು ಉರುಳಿಸಿ ಫೀನಿಕ್ಸ್ನಂತೆ ಮೇಲೆದ್ದು ಬಂದ ಅರವಿಂದ ಕೇಜ್ರಿವಾಲ್ ದೆಹಲಿ...
ನವದೆಹಲಿ: ಕಾಂಗ್ರೆಸ್ನ 15 ವರ್ಷಗಳ ಅಧಿಕಾರದ ಗದ್ದುಗೆಯನ್ನು ಉರುಳಿಸಿ ಫೀನಿಕ್ಸ್ನಂತೆ ಮೇಲೆದ್ದು ಬಂದ ಅರವಿಂದ ಕೇಜ್ರಿವಾಲ್ ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಶನಿವಾರ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಗಾಂಧಿವಾದಿ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ನಡೆಸಿದ ರಾಮ್ಲೀಲಾ ಮೈದಾನದಲ್ಲೇ ಕೇಜ್ರಿವಾಲ್ ದೆಹಲಿಯ 7ನೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇವರ ಜತೆಗೆ, 6 ಮಂದಿ ಆಪ್ ಶಾಸಕರೂ ಸಚಿವರಾಗಿ ಪ್ರತಿಜ್ಞಾ ಸ್ವೀಕಾರ ಮಾಡಲಿದ್ದಾರೆ.
ಅಣ್ಣಾಗೂ ಆಹ್ವಾನ: ಶನಿವಾರ ಮಧ್ಯಾಹ್ನ 12 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಅಣ್ಣಾ ಹಜಾರೆ, ಕಿರಣ್ ಬೇಡಿ, ನ್ಯಾ.ಸಂತೋಷ್ ಹೆಗ್ಡೆಗೆ ಆಹ್ವಾನ ನೀಡಲಾಗಿದೆ. ಆಮ್ ಆದ್ಮಿ ಪಕ್ಷ ಸರ್ಕಾರ ರಚಿಸುವ ಬಗ್ಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಪ್ರಸ್ತಾಪವನ್ನು ರಾಷ್ಟ್ರಪತಿ ಅಂಗೀಕರಿಸಿದ ಬೆನ್ನಲ್ಲೇ ಪ್ರಮಾಣವಚನ ದಿನಾಂಕ ಘೋಷಿಸಲಾಯಿತು. ಜ.3ರೊಳಗೆ ಬಹುಮತ ಸಾಬೀತುಪಡಿಸುವಂತೆ ಲೆಫ್ಟಿನೆಂಟ್ ಗವರ್ನರ್ ಜಂಗ್ ಕೇಜ್ರಿವಾಲ್ಗೆ ಆದೇಶಿಸಿದ್ದಾರೆ.
ಸಚಿವರ್ಯಾರು?: ಮನೀಷ್ ಸಿಸೋಡಿಯಾ, ರಾಖಿ ಬಿರ್ಲಾ, ಸೋಮನಾಥ್ ಭಾರ್ತಿ, ಸೌರಭ್ ಭಾರದ್ವಾಜ್, ಗಿರೀಶ್ ಸೋನಿ, ಸತ್ಯೇಂದ್ರ ಜೈನ್ ಕೇಜ್ರಿವಾಲ್ ಸಚಿವರಾಗಲಿದ್ದಾರೆ. ಇದೇ ವೇಳೆ, ಅಧಿಕಾರ ವಹಿಸಿಕೊಂಡ 15 ದಿನಗಳಲ್ಲಿ ಲೋಕಪಾಲ ಮಸೂದೆ ಅಂಗೀಕರಿಸುವುದಾಗಿ ಕೇಜ್ರಿವಾಲ್ ಘೋಷಿಸಿದ್ದಾರೆ.