ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ವಿವಿಗಳಿಗೆ ಬಂತು 'ಏಕರೂಪ'

ಮುಂದಿನ ವರ್ಷದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಕೋರ್ಸ್ಗಳನ್ನು ಹುಡುಕಿಕೊಂಡು ಒಂದು ವಿಶ್ವವಿದ್ಯಾಲಯದಿಂದ ಮತ್ತೊಂದು ...

Rashmi Kasaragodu
Updated On : 26 Dec 2013, 12:30 pm

ಕ.ಪ್ರ. ವಾರ್ತೆ, ಬೆಂಗಳೂರು, ಡಿ. 25-
ಮುಂದಿನ ವರ್ಷದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಕೋರ್ಸ್ಗಳನ್ನು ಹುಡುಕಿಕೊಂಡು ಒಂದು ವಿಶ್ವವಿದ್ಯಾಲಯದಿಂದ ಮತ್ತೊಂದು ವಿಶ್ವವಿದ್ಯಾಲಯಕ್ಕೆ ಹೋಗುವುದು ಬಹಳ ಸುಲಭ.
ಇದಕ್ಕಾಗಿಯೇ ರಾಜ್ಯದ ಎಲ್ಲ ಸರ್ಕಾರಿ ವಿಶ್ವವಿದ್ಯಾಲಯಗಳು(ರಾಜೀವ್ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹೊರತುಪಡಿಸಿ) ಒಗ್ಗೂಡಿ 'ಏಕರೂಪ ಶೈಕ್ಷಣಿಕ ದಿನಚರಿ' ಸಿದ್ಧಪಡಿಸಿವೆ. ಇದರಿಂದಾಗಿ ಒಂದು ವಿಶ್ವವಿದ್ಯಾಲಯದಲ್ಲಿ ಓದಿದ ವಿದ್ಯಾರ್ಥಿ ಮತ್ತೊಂದು ವಿವಿಯಲ್ಲಿರುವ ಕೋರ್ಸ್ಗಳನ್ನು ಸುಲಭವಾಗಿ ಆಯ್ಕೆ ಮಾಡಿಕೊಳ್ಳಬಹುದು. ಫಲಿತಾಂಶ ತಡವಾಗುತ್ತದೆ, ಅಷ್ಟರಲ್ಲಿ ಪ್ರವೇಶ ಪ್ರಕ್ರಿಯೆ ಮುಗಿದು ಹೋಗಿರುತ್ತದೆ ಎಂದು ಚಿಂತಿಸಬೇಕಾಗಿಲ್ಲ.
ಈಗಾಗಲೇ ಈ ಏಕರೂಪ ಶೈಕ್ಷಣಿಕ ದಿನಚರಿಯ ಕರಡು ಪ್ರತಿಯನ್ನು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿಗೆ ಸಲ್ಲಿಸಲಾಗಿದ್ದು, ಪರಿಷತ್ತು ಒಪ್ಪಿಗೆ ಸಹ ಸೂಚಿಸಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲ  ಸರ್ಕಾರಿ ವಿಶ್ವವಿದ್ಯಾಲಯಗಳು ಈ ದಿನಚರಿ ಪ್ರಕಾರವೇ ಶೈಕ್ಷಣಿಕ ಕಾರ್ಯಗಳಾದ ಪರೀಕ್ಷೆ, ಫಲಿತಾಂಶ, ತರಗತಿ ಪ್ರಾರಂಭಿಸಬೇಕಾಗುತ್ತದೆ.
ದಿನಚರಿ ಪ್ರಕಾರ ಎಲ್ಲ ಪದವಿ ಕೋರ್ಸ್ಗಳ (1,3,5 ಸೆಮಿಸ್ಟರ್)ತರಗತಿಗಳು ಜೂನ್ 15ರಿಂದ 30ರೊಳಗೆ ಮತ್ತು ಸ್ನಾತಕೋತ್ತರ ಪದವಿಗಳ ಕೋರ್ಸ್ಗಳ ತರಗತಿಗಳು ಆಗಸ್ಟ್ 1ರಿಂದ 15ರೊಳಗೆ ಪ್ರಾರಂಭವಾಗಬೇಕಾಗುತ್ತದೆ.

ಹಳೆಯ ಪದ್ಧತಿ ಏನು?: ಈಗ ವಿಶ್ವವಿದ್ಯಾಲಯಗಳು ತಮ್ಮದೇ ಆದ ಶೈಕ್ಷಣಿಕ ದಿನಚರಿ ಹೊಂದಿದೆ. ಇದರಿಂದ ಒದೊಂದು ವಿಶ್ವವಿದ್ಯಾಲಯ ಒದೊಂದು ದಿನಾಂಕದಲ್ಲಿ ಪ್ರವೇಶ ಪ್ರಕ್ರಿಯೆ ಪ್ರಾರಂಭಿಸುತ್ತಿತ್ತು. ಅಲ್ಲದೆ, ಯಾವಾಗಲೋ ಪರೀಕ್ಷೆ ನಡೆಸಿ ಮತ್ತೆ ಯಾವಾಗಲೋ ಫಲಿತಾಂಶ ಪ್ರಕಟಿಸುತ್ತಿತ್ತು. ಇದರಿಂದ ಬೇರೆ ವಿಶ್ವವಿದ್ಯಾಲಯಗಳಿಗೆ ಕೋರ್ಸ್ಗಳನ್ನು ಅರಸಿ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿತ್ತು.

ಸಮಿತಿ ರಚನೆ: ಏಕರೂಪ ಶೈಕ್ಷಣಿಕ ದಿನಚರಿ ಸಿದ್ಧಪಡಿಸುವ ಬಗ್ಗೆ ಈ ಹಿಂದೆ ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಕುಲಪತಿಗಳು ಸಭೆ ನಡೆಸಿದರು. ಸಭೆ ನಡೆಸಿದ ನಂತರ ಪರಿಷತ್ತು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಟಿ.ಸಿ. ಶಿವಶಂಕರಮೂರ್ತಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿತ್ತು. ಸಮಿತಿಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಎ. ಬಾರಿ ಹಾಗೂ ವಿಟಿಯು ಕುಲಪತಿ ಡಾ.ಎಚ್. ಮಹೇಶಪ್ಪ, ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ಕುಲಪತಿ ಮೀನಾ ಚಂದಾವರ್ಕರ್ ಸದಸ್ಯರಾಗಿದ್ದರು.

ಏಕರೂಪ ಶೈಕ್ಷಣಿಕ ದಿನಚರಿ (ಪದವಿ ಕೋರ್ಸ್ಗಳು)

ಶೈಕ್ಷಣಿಕ ಕಾರ್ಯಕ್ರಮಗಳು    ದಿನಾಂಕ
ತರಗತಿಗಳ ಪ್ರಾರಂಭ(1,3,5 ಸೆಮಿಸ್ಟರ್)    ಜೂ.15ರಿಂದ30
ಮೊದಲ ಸೆಮಿಸ್ಟರ್ ಪ್ರವೇಶ ಮುಕ್ತಾಯ    ಜು.1ರಿಂದ 15
ಪ್ರವೇಶಕ್ಕೆ ದಂಡಶುಲ್ಕ ಪಾವತಿ    ಜು.16ರಿಂದ 30
ತರಗತಿಗಳ ಮುಕ್ತಾಯ(1,3,5 ಸೆಮಿಸ್ಟರ್)    ಅ.16ರಿಂದ 31
ರಜೆ    ಅ.20ರಿಂದ ನ.10
ಪರೀಕ್ಷೆ ಪ್ರಾರಂಭ (1,3,5 ಸೆಮಿಸ್ಟರ್)    ಅ.25ರಿಂದ ನ.10
ತರಗತಿಗಳ ಪ್ರಾರಂಭ (2,4,6 ಸೆಮಿಸ್ಟರ್)    ನ.15ರಿಂದ 30
ತರಗತಿಗಳ ಮುಕ್ತಾಯ (2,4,6 ಸೆಮಿಸ್ಟರ್)    ಮಾ.30ರಿಂದ ಏ.15
ಪರೀಕ್ಷೆ ಪ್ರಾರಂಭ (2,4,6 ಸೆಮಿಸ್ಟರ್)    ಏ.10ರಿಂದ ಏ.30


ಏಕರೂಪ ಶೈಕ್ಷಣಿಕ ದಿನಚರಿ (ಸ್ನಾತಕೋತ್ತರ ಕೋರ್ಸ್ಗಳು)
ಶೈಕ್ಷಣಿಕ ಕಾರ್ಯಕ್ರಮಗಳು    ದಿನಾಂಕ
ತರಗತಿಗಳ ಪ್ರಾರಂಭ     ಜು.15ರಿಂದ 31
ಪ್ರವೇಶಕ್ಕೆ ದಂಡಶುಲ್ಕ ಪಾವತಿ    ಆ.1ರಿಂದ 15
ತರಗತಿಗಳ ಪ್ರಾರಂಭ(1,3,5 ಸೆಮಿಸ್ಟರ್)    ಆ.1ರಿಂದ 15
ತರಗತಿಗಳ ಮುಕ್ತಾಯ(1,3,5 ಸೆಮಿಸ್ಟರ್)    ನ.30ರಿಂದ ಡಿ.15
ರಜೆ    ಡಿ.5ರಿಂದ 20
ಪರೀಕ್ಷೆ ಪ್ರಾರಂಭ (1,3,5 ಸೆಮಿಸ್ಟರ್)    ಡಿ.10 ರಿಂದ 25
ತರಗತಿಗಳ ಪ್ರಾರಂಭ (2,4,6 ಸೆಮಿಸ್ಟರ್)     ಜ.1ರಿಂದ 15
ತರಗತಿಗಳ ಮುಕ್ತಾಯ (2,4,6 ಸೆಮಿಸ್ಟರ್)    ಅ.30ರಿಂದ ಮೇ.15
ರಜೆ    ಮೇ.5ರಿಂದ 20
ಪರೀಕ್ಷೆ ಪ್ರಾರಂಭ (2,4,6 ಸೆಮಿಸ್ಟರ್)    ಮೇ.10 ರಿಂದ 25

ಒಂದು ವಿಶ್ವವಿದ್ಯಾಲಯದಿಂದ ಮತ್ತೊಂದು ವಿವಿಗೆ ಕೋರ್ಸ್ಗಳನ್ನು ಅರಸಿ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆ  ಪ್ರಮುಖ ಕಾರಣ ಏಕರೂಪ ಶೈಕ್ಷಣಿಕ ದಿನಚರಿ ಇಲ್ಲದಿರುವುದು. ಹೀಗಾಗಿ ಸಿದ್ಧಪಡಿಸಿದ್ದೇವೆ.
- ಟಿ.ಸಿ. ಶಿವಶಂಕರಮೂರ್ತಿ, ಕುಲಪತಿ, ಮಂಗಳೂರು ವಿವಿ

-ದೇವರಾಜ್ ಎಲ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement