ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಆಕ್ರೋಶದ ಗೂಸಾ!

'ಅಧ್ಯಯನ'ದ ಹೆಸರಲ್ಲಿ ಶಾಸಕರ 'ವಿದೇಶದ ಪ್ರವಾಸ'ಕ್ಕೆ ಅವರು ಪ್ರತಿನಿಧಿಸುವ ಕ್ಷೇತ್ರದ ಜನತೆಯಿಂದ ಮಾತ್ರವಲ್ಲದೆ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದೆ. ರಾಜ್ಯದಲ್ಲಿ ಬರಗಾಲ...

Rashmi Kasaragodu
Updated On : 27 Dec 2013, 12:07 pm

ಕನ್ನಡಪ್ರಭ ವಾರ್ತೆ, ಬೆಂಗಳೂರು, ಡಿ.26-
'ಅಧ್ಯಯನ'ದ ಹೆಸರಲ್ಲಿ ಶಾಸಕರ 'ವಿದೇಶದ ಪ್ರವಾಸ'ಕ್ಕೆ ಅವರು ಪ್ರತಿನಿಧಿಸುವ ಕ್ಷೇತ್ರದ ಜನತೆಯಿಂದ ಮಾತ್ರವಲ್ಲದೆ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದೆ.
ರಾಜ್ಯದಲ್ಲಿ ಬರಗಾಲ ಇದೆ. ಕಬ್ಬು ಬೆಳೆಗಾರರ ಸಮಸ್ಯೆ ಇದೆ. ಕ್ಷೇತ್ರಗಳ ಜನರನ್ನೂ ನಾನಾ ಸಮಸ್ಯೆಗಳು ಕಾಡುತ್ತಿವೆ. ಹೀಗಿರುವಾಗ ಶಾಸಕರು ವಿದೇಶಕ್ಕೆ ಏಕೆ ಹೋಗಬೇಕು ಎಂದು ಮತದಾರರು ಪ್ರಶ್ನಿಸಿದ್ದಾರೆ. ಕ್ಷೇತ್ರದ ಸಮಸ್ಯೆಗಳನ್ನೇ ನೋಡದವರು ವಿದೇಶದಲ್ಲಿ ಏನು ಅಧ್ಯಯನ ನಡೆಸುತ್ತಾರೆ ಎಂದು ಕೇಳಿದ್ದಾರೆ. ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತ್ರ ಶಾಸಕರ ಪ್ರವಾಸವನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ಮಾತನಾಡಿದ ಸಿದ್ದರಾಮಯ್ಯ ಅವರು, 'ವಿದೇಶ ಪ್ರವಾಸದ ನಿರ್ಧಾರವನ್ನು ವಿಧಾನ ಮಂಡಲದ ವಿವಿಧ ಸಮಿತಿಗಳು ತೆಗೆದುಕೊಂಡಿವೆ ಎಂದರು.
ಪ್ರತಿ ವರ್ಷವೂ ವಿದೇಶ ಪ್ರವಾಸಕ್ಕೆ ಶಾಸಕರು ಹೋಗುತ್ತಾರೆ. ಅಷ್ಟಕ್ಕೂ ಇದು ನನ್ನ ನಿರ್ಧಾರವಲ್ಲ' ಎಂದು ಜಾರಿಕೊಂಡರು.
ವಿಧಾನ ಮಂಡಲದ ಅಂದಾಜು ಸಮಿತಿಯ 18 ಸದಸ್ಯರು ಬ್ರೆಜಿಲ್, ಅರ್ಜಂಟೈನಾ ಪ್ರವಾಸಕ್ಕೆ ಸಿದ್ಧರಾಗುತ್ತಿದ್ದಂತೆ, ಆ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಬರಗಾಲವಿದೆ. ಕಬ್ಬು ಬೆಳೆಗಾರರ ಸಮಸ್ಯೆ ತಾರಕಕ್ಕೇರಿದೆ. ಸ್ಥಳೀಯ ಸಮಸ್ಯೆಗಳು ತಾಂಡವಾಡುತ್ತಿವೆ. ಇಷ್ಟೆಲ್ಲ ಸಮಸ್ಯೆಗಳಿದ್ದಾಗ್ಯೂ ಕೇವಲ ಮೋಜು - ಮಸ್ತಿಗಾಗಿ 'ಅಧ್ಯಯನ'ದ ಹೆಸರು ಹೇಳಿಕೊಂಡು ವಿದೇಶಗಳಿಗೆ ಹೋಗುವುದು ಸರಿಯಲ್ಲ ಎಂದು ಖಂಡಿಸಿದ್ದಾರೆ. ಅಷ್ಟೇ ಅಲ್ಲದೆ, ಹೋಗುವುದಿದ್ದರೆ ಅವರು ತಮ್ಮ ಸ್ವಂತ ಹಣದಲ್ಲಿ ಹೋಗಲಿ. ಒಂದು ವೇಳೆ, ಅಧ್ಯಯನಕ್ಕಾಗಿ ಹೋಗುವ ಹಾಗಿದ್ದರೆ ಹೋಗಲಿ. ಆದರೆ, ಅಲ್ಲಿ ಮೋಜು ಮಸ್ತಿಮಾಡುವುದು ಬೇಡ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ನಾವು ಪ್ರವಾಸಕ್ಕೆ ಹೋಗಲ್ಲ ಸ್ವಾಮಿ!
ವಿದೇಶ ಪ್ರವಾಸ್ಕಕೆ ಹೋಗೇ ಹೋಗುತ್ತೇವೆ ಎಂದು ಅಫಜಲ್ಪುರ ಶಾಸಕ ಮಾಲಿಕಯ್ಯ ಗುತ್ತೇದಾರ್ ಹೇಳಿದರೆ, ಹಾಸನ ಜಿಲ್ಲು ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ಸಕಲೇಶಪುರ ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರು ಯಾವುದೇ ಕಾರಣಕ್ಕೂ ಹೋಗುವುದಿಲ್ಲ ಎಂದು ತಿಳಿಸಿದ್ದಾರೆ. 'ನಾವು ಪ್ರತಿನಿಧಿಸುವ ಕ್ಷೇತ್ರಗಳನ್ನು ಬರ ಅಪ್ಪಿಕೊಂಡಿದೆ. ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲ.  ಕಾಫಿ ಬೆಳೆ ನಾಶವಾಗಿದೆ. ಹೀಗಿರುವಾಗ ವಿದೇಶಗಳಿಗೆ ಹೋಗುವುದಾದರೂ ಹೇಗೆ? ಕ್ಷೇತ್ರದಲ್ಲಿ ಚೆನ್ನಾಗಿ ಮಳೆಯಾಗಿ, ಕೆರೆ-ಕಟ್ಟೆಗಳು ತುಂಬುವರೆಗೂ ವಿದೇಶಕ್ಕೆ ಹೋಗುವುದಿಲ್ಲ' ಎಂದು ಇಬ್ಬರೂ ಶಾಸಕರು ಹೇಳಿದ್ದಾರೆ. ಅಲ್ಲದೆ, ತಾವು ಪ್ರವಾಸಕ್ಕೆ ಹೋಗುವುದಿಲ್ಲ ಎಂದೂ ಅಂದಾಜು ಸಮಿತಿ ಅಧ್ಯಕ್ಷರಿಗೆ ಬರೆದುಕೊಟ್ಟಿದ್ದಾರೆ.

ಪ್ರವಾಸದ ನಿರ್ಧಾರವನ್ನು ವಿಧಾನ ಮಂಡಲದ ವಿವಿಧ ಸಮಿತಿಗಳು ತೆಗೆದುಕೊಂಡಿವೆ. ಪ್ರತಿ ವರ್ಷವೂ ವಿದೇಶ ಪ್ರವಾಸಕ್ಕೆ ಶಾಸಕರು ಹೋಗುತ್ತಾರೆ. ಇದು ನನ್ನ ನಿರ್ಧಾರವಲ್ಲ. ಈ ಸಂಬಂಧ ನಾನು ಶಾಸಕರ ಜೊತೆ ಮಾತನಾಡುತ್ತೇನೆ.
- ಸಿದ್ದರಾಮಯ್ಯ, ಸಿಎಂ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement