ದಿಲ್ಲಿ ಸಿಎಂ ಆಗಿ ಕೇಜ್ರಿ ಪ್ರಮಾಣ
ಭ್ರಷ್ಟಾಚಾರ ಮುಕ್ತ ಸರ್ಕಾರ, ಹೊಸ ಶೈಲಿಯ ಆಡಳಿತ ನೀಡುವ ಭರವಸೆಯೊಂದಿಗೆ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ದೆಹಲಿಯ 7ನೇ ...
ನವದೆಹಲಿ: ಭ್ರಷ್ಟಾಚಾರ ಮುಕ್ತ ಸರ್ಕಾರ, ಹೊಸ ಶೈಲಿಯ ಆಡಳಿತ ನೀಡುವ ಭರವಸೆಯೊಂದಿಗೆ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ದೆಹಲಿಯ 7ನೇ ಮುಖ್ಯಮಂತ್ರಿಯಾಗಿ ಶನಿವಾರ ಅಧಿಕಾರ ವಹಿಸಿಕೊಂಡರು.
ರಾಮ್ಲೀಲಾ ಮೈದಾನದಲ್ಲಿ ಕೇಜ್ರಿವಾಲ್ ಅವರಿಗೆ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಪ್ರಮಾಣವಚನ ಬೋಧಿಸಿದರು. ಅವರ ಜತೆಗೆ 6 ಮಂದಿ ಸಚಿವರೂ ಪ್ರಮಾಣ ವಚನ ಸ್ವೀಕರಿಸಿದರು. ಗಾಂಧಿವಾದಿ ಅಣ್ಣಾ ಹಜಾರೆ, ಕಿರಣ್ ಬೇಡಿ, ಮಾಜಿ ಸಿಎಂ ಶೀಲಾ ದೀಕ್ಷಿತ್ ಗೈರಾಗಿದ್ದರು. ಹಾಜರಾಗಿದ್ದ ಪ್ರಮುಖ ರಾಜಕೀಯ ವ್ಯಕ್ತಿಯೆಂದರೆ ಹೊಸ ಅಸೆಂಬ್ಲಿಯ ಪ್ರತಿಪಕ್ಷ ನಾಯಕ ಹರ್ಷವರ್ಧನ್. ಕೇಜ್ರಿವಾಲ್ ಗೃಹ, ಹಣಕಾಸು, ವಿದ್ಯುತ್ ಸೇರಿ ಪ್ರಮುಖ ಖಾತೆ ತಮ್ಮಲ್ಲಿಯೇ ಇರಿಸಿಕೊಂಡಿದ್ದಾರೆ.