ಬಾಲಿವುಡ್ ನಟ ಫಾರುಕ್ ನಿಧನ
ಬಾಲಿವುಡ್ ಹಿರಿಯ ನಟ ಫಾರುಕ್ ಶೇಖ್ ಅವರು ಶನಿವಾರ ದುಬೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಂಗೀತ ಕಾರ್ಯಕ್ರಮವೊಂದರ ಹಿನ್ನೆಲೆಯಲ್ಲಿ ...
ನವದೆಹಲಿ: ಬಾಲಿವುಡ್ ಹಿರಿಯ ನಟ ಫಾರುಕ್ ಶೇಖ್ ಅವರು ಶನಿವಾರ ದುಬೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಂಗೀತ ಕಾರ್ಯಕ್ರಮವೊಂದರ ಹಿನ್ನೆಲೆಯಲ್ಲಿ ಫಾರೂಕ್ ದುಬೈಗೆ ತೆರಳಿದ್ದರು. ಈ ವೇಳೆ ಅವರಿಗೆ ಹೃದಯಾಘಾತವಾಗಿದೆ ಎಂದು ಕುಟುಂಬದ ಮೂಲಗಳು ಹೇಳಿವೆ. ಪಾರ್ಥಿವ ಶರೀರವನ್ನು ಭಾನುವಾರ ಮುಂಬೈಗೆ ತರಲಾಗುವುದು.
ಸತ್ಯಜಿತ್ ರೇ ಅವರ ಶತ್ರಂಜ್ ಕಿ ಕಿಲಾಡಿ ಚಿತ್ರದ ಪಾತ್ರದ ಮೂಲಕವೇ ಫಾರೂಕ್ ಪ್ರಸಿದ್ಧಿಯಾಗಿದ್ದರು. ಸಾಯಿ ಪರಾಂಜಪೆ ಅವರ ಚಶ್ಮೆ ಬದೂರ್ ಮತ್ತು ಸಾಗರ್ ಸರ್ಹಾದಿ ಅವರ ಬಾಜಾರ್ ಚಿತ್ರಗಳು ಖ್ಯಾತಿ ತಂದುಕೊಟ್ಟಿದ್ದವು. 1973ರಲ್ಲಿ ಎಂ.ಎಸ್. ಸತ್ಯು ಅವರ ಗರಂ ಹವಾ ಮೂಲಕ ಬಾಲಿವುಡ್ಗೆ ಪ್ರವೇಶ ಪಡೆದಿದ್ದರು. ಫಾರೂಕ್ ನಿಧನಕ್ಕೆ ಅಮಿತಾಭ್ ಸೇರಿಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.