ಹಂಪಿ ಉತ್ಸವದ ತಯಾರಿ ಮಂಟಪ ಕಂಬಗಳಿಗೆ ಹಾನಿ
ವಿಶ್ವವಿಖ್ಯಾತ ಹಂಪಿಯ ಕೃಷ್ಣ ದೇವಸ್ಥಾನದ ಎದುರು ಕೃಷ್ಣ ಬಜಾರ್ನಲ್ಲಿರುವ ಸಾಲು ಮಂಟಪಗಳಲ್ಲಿ ಒಂದು ಮಂಟಪಕ್ಕೆ ಭಾನುವಾರ ಲಾರಿಯಲ್ಲಿ ತಂದಿದ್ದ ..
ಕನ್ನಡಪ್ರಭ ವಾರ್ತೆ ಹೊಸಪೇಟೆ ಡಿ.29
ವಿಶ್ವವಿಖ್ಯಾತ ಹಂಪಿಯ ಕೃಷ್ಣ ದೇವಸ್ಥಾನದ ಎದುರು ಕೃಷ್ಣ ಬಜಾರ್ನಲ್ಲಿರುವ ಸಾಲು ಮಂಟಪಗಳಲ್ಲಿ ಒಂದು ಮಂಟಪಕ್ಕೆ ಭಾನುವಾರ ಲಾರಿಯಲ್ಲಿ ತಂದಿದ್ದ ಕಬ್ಬಿಣದ ಕಂಬಗಳು ತಾಗಿದ್ದರಿಂದ 3-4 ಕಂಬಗಳು ಮುರಿದು ಬಿದ್ದು ಮಂಟಪಕ್ಕೆ ಹಾನಿಯಾಗಿದೆ.
ಜ.10, 11 ಮತ್ತು 12ರಂದು ನಡೆಯುವ ಹಂಪಿ ಉತ್ಸವಕ್ಕಾಗಿ ವೇದಿಕೆಗಳನ್ನು ಸಿದ್ಧಪಡಿಸುವ ವಸ್ತುಗಳನ್ನು ಲಾರಿಯಲ್ಲಿ ತರುವಾಗ ಲಾರಿ ಚಾಲಕನ ಅಜಾಗರೂಕತೆಯಿಂದ ಈ ಘಟನೆ ಸಂಭವಿಸಿದೆ. ಈ ಸ್ಥಳದಲ್ಲಿ ಆಹಾರ ಮೇಳದ ವೇದಿಕೆ ಸಿದ್ಧಪಡಿಸಲಾಗುತ್ತಿದೆ. ಇಕ್ಕಟ್ಟಾದ ಸ್ಥಳದಲ್ಲಿ ಲಾರಿ ಸಾಗಿಹೋಗಬೇಕಾಗಿತ್ತು. ಹೀಗೆ ಲಾರಿ ಹಾದು ಹೋಗುವಾಗ ಲಾರಿಯಲ್ಲಿ ಹೇರಿಕೊಂಡು ಬಂದಿದ್ದ ಕಂಬಗಳು ಸಾಲು ಮಂಟಪದ ಕಂಬಗಳಿಗೆ ತಾಗಿದೆ. ಸಾಲು ಮಂಟಪದ 3-4 ಪಿಲ್ಲರ್ಗಳು ತುಂಡಾಗಿ ಬಿದ್ದಿವೆ. ಸಾಲು ಮಂಟಪದ ಮೇಲ್ಛಾವಣೆಯಲ್ಲಿ ಹಾಸಿರುವ ಬಂಡೆಗಳು ನೆಲಕ್ಕೆ ಉರುಳಿ ಬಿದ್ದು ತುಂಡಾಗಿವೆ.