ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅತ್ಯಾಚಾರಿಗಳಿಗೆ ಗಲ್ಲೇ ಸರಿ

ಅತ್ಯಾಚಾರಿಗಳನ್ನು ಕಾನೂನು ಮೂಲಕ ಹತ್ತಿಕ್ಕಬೇಕೆಂದರೆ ಅವರಿಗೆ ಗಲ್ಲುಶಿಕ್ಷೆ ವಿಧಿಸುವುದೊಂದೇ...

Mainashree
Updated On : 11 Feb 2013, 1:31 am

ಸಂವಾದದಲ್ಲಿ ಕೋ.ಚ. ಅಭಿಮತ

ಡಾ.ಫ.ಗು.ಹಳಕಟ್ಟಿ ವೇದಿಕೆ, ಬಿಜಾಪುರ: ಅತ್ಯಾಚಾರಿಗಳನ್ನು ಕಾನೂನು ಮೂಲಕ ಹತ್ತಿಕ್ಕಬೇಕೆಂದರೆ ಅವರಿಗೆ ಗಲ್ಲುಶಿಕ್ಷೆ ವಿಧಿಸುವುದೊಂದೇ ದಾರಿ ಎಂದು 79ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕೋ.ಚನ್ನಬಸಪ್ಪ ಹೇಳಿದರು.
ದೇಶಾದ್ಯಂತ ಗಲ್ಲುಶಿಕ್ಷೆ ವಿಧಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಯಾವ ಅಪರಾಧಕ್ಕೂ ಗಲ್ಲು ಶಿಕ್ಷೆ ವಿಧಿಸಬಾರದೆಂಬ ಒತ್ತಾಯವೂ ಇದೆ. ಈ ನಡುವೆ ಕೇಂದ್ರ ಸರ್ಕಾರ ಅತ್ಯಾಚಾರಿಗಳಿಗೆ ಕಠಿಣ ಕಾನೂನು ಜಾರಿ ಮಾಡಿದೆಯಾದರೂ, ಗಲ್ಲುಶಿಕ್ಷೆಗೆ ಅವಕಾಶ ಕಲ್ಪಿಸಿಲ್ಲ. ಇಂಥ ಬೆಳವಣಿಗೆಗಳ ನಡುವೆ ನಿವೃತ್ತ ನ್ಯಾಯಮೂರ್ತಿಗಳೂ ಆಗಿರುವ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕೋ.ಚ ಅತ್ಯಾಚಾರಗಳನ್ನು ತಡೆಯಬೇಕೆಂದರೇ ಗಲ್ಲುಶಿಕ್ಷೆ ವಿಧಿಸುವುದೊಂದೇ ದಾರಿ ಎಂದಿದ್ದಾರೆ.
ಸಾಹಿತ್ಯ ಸಮ್ಮೇಳನದ 2ನೇ ದಿನವಾದ ಭಾನುವಾರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೂರು ಕೊಡುವುದರಿಂದ ಮಹಿಳೆಯ ಪರಿಚಯವಾಗುತ್ತದೆ. ಆಕೆಯ ಮೇಲೆ ಅತ್ಯಾಚಾರವಾಗಿದೆ ಎಂಬುದು ಜಗಜ್ಜಾಹೀರಾಗುತ್ತದೆ. ಇದರಿಂದ ಆಕೆಯ ಮುಂದಿನ ಜೀವನ ಕಷ್ಟವಾಗುತ್ತದೆ. ಇದರ ಬಗ್ಗೆಯೂ ನಾವು ವಿಚಾರ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಯುವಕರಿಗೆ ಉತ್ತಮ ಆದರ್ಶ ನೀಡಿಲ್ಲ: ಕೆಲವರು ಯುವಕರ ವರ್ತನೆ ಮತ್ತು ಜೀವನ ಶೈಲಿಯ ಕುರಿತು ದೂರುತ್ತಾರೆ. ಆದರೆ ನಾವು ಯುವಕರಿಗೆ ಉತ್ತಮ ಆದರ್ಶಗಳನ್ನು ನೀಡಿಲ್ಲ. ಅವರಿಗೆ ಹಣ ಮತ್ತು ಅಧಿಕಾರವೇ ಆದರ್ಶ ಎಂಬ ಭಾವನೆ ಮೂಡಿಸಿದ್ದೇವೆ. ಆದ್ದರಿಂದಲೇ ಅವರು ಅದನ್ನೇ ಅನುಸರಿಸುತ್ತಿದ್ದಾರೆ. ಹೇಗಾದರೂ ಮಾಡಿ ಹಣ ಗಳಿಸಬೇಕು ಮತ್ತು ಅಧಿಕಾರ ಪಡೆಯಬೇಕು ಎಂಬ ಭಾವನೆ ಬೆಳೆಸಿಕೊಂಡಿದ್ದಾರೆ. ನನ್ನ ದೃಷ್ಟಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ಸಂಪಾದಿಸಿಟ್ಟುಕೊಂಡವ ಕಳ್ಳ. ಅದನ್ನೇ ನಾವು ಯುವಕರಿಗೆ ಹೇಳಿಕೊಟ್ಟಿದ್ದರೆ ಹೀಗಾಗುತ್ತಿರಲಿಲ್ಲ ಎಂದರು.

- ವಿನಾಯಕ ಭಟ್ಟ ಮೂರೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments