ಇಂದಿನಿಂದ ಗಣಿ ವಿಚಾರಣೆ ಶುರು
ಬಳ್ಳಾರಿ: ಸುಪ್ರೀಂ ಕೋರ್ಟ್ನ ಹಸಿರು ಪೀಠ ಫೆ.18ರಿಂದ ಮೂರು ದಿನಗಳ ಕಾಲ ಗಣಿಗಾರಿಕೆಗೆ ಸಂಬಂಧಪಟ್ಟಂತೆ ವಿಚಾರಣೆಗೆ ಸಮಯ ನಿಗದಿಪಡಿಸಿದೆ. ಈ ಹಿನ್ನೆಲೆಯಲ್ಲಿ ಗಣಿ ಮಾಲೀಕರು ತಮ್ಮ ವಕೀಲರು ಮತ್ತು ತಜ್ಞರೊಂದಿಗೆ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಗಣಿ ಮಾಲೀಕರು ಅಹವಾಲು ಸಲ್ಲಿಸಿ, ತಮ್ಮ ವಾದ ಮಂಡಿಸಲು ಸುಪ್ರೀಂ ಹೆಚ್ಚಿನ ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಮಹತ್ವದ ವಿಚಾರಣೆ ನಡೆದು, ಗಣಿಗಾರಿಕೆ ಕುರಿತು ಮಹತ್ವದ ಆದೇಶ ಹೊರಹೊಮ್ಮುವ ಸಾಧ್ಯತೆ ಇದೆ. ಈ ಮೊದಲು ಹಸಿರು ಪೀಠ ಪ್ರತಿ ಶುಕ್ರವಾರ ಮಾತ್ರ ಗಣಿಗಾರಿಕೆ ವಿಚಾರಣೆಯನ್ನು ಕೈಗೆತ್ತಿಕೊಳ್ಳುತ್ತಿತ್ತು.