ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮೂಗಿಗೆ ತುಪ್ಪ, ನಾಲಗೆಗೆ ಖಾರ

ರೇಲ್ವೆ ಸಚಿವ ಪವನ್ ಕುಮಾರ್ ಬನ್ಸಲ್ ಮಂಡಿಸಿದ ಬಜೆಟ್‌ನಲ್ಲಿ ಪ್ರಯಾಣದ ದರದಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ. ಆದರೆ, ಪೂರಕ ಶುಲ್ಕ ಹೆಚ್ಚಿಸಿ...

Parashurama
Updated On : 27 Feb 2013, 1:00 am

ರೇಲ್ವೆ ಸಚಿವ ಪವನ್ ಕುಮಾರ್ ಬನ್ಸಲ್ ಮಂಡಿಸಿದ ಬಜೆಟ್‌ನಲ್ಲಿ ಪ್ರಯಾಣದ ದರದಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ. ಆದರೆ, ಪೂರಕ ಶುಲ್ಕ ಹೆಚ್ಚಿಸಿ ಪರೋಕ್ಷವಾಗಿ ರೈಲು ಪ್ರಯಾಣ ದುಬಾರಿಯಾಗಿಸಿದ್ದಾರೆ.

ಹೊಸ ರೈಲುಗಳು
67 ಎಕ್ಸ್‌ಪ್ರೆಸ್
27 ಪ್ಯಾಸೆಂಜರ್

ವಿಸ್ತರಣೆ
57 ರೈಲುಗಳ ಸಂಚಾರ ವಿಸ್ತರಣೆ
24 ರೈಲುಗಳ ಸಂಚಾರ ಹೆಚ್ಚಳ
08 ಡಿಇಎಂಯು
05 ಎಂಇಎಂಯು ಸೇವೆ ಆರಂಭ

ಹೊಸ ಮಾರ್ಗ ಹೊಸ ಮಾರ್ಗ ಪ್ರಸ್ತಾಪ
500 ಕಿ.ಮೀ

ಮುಂದಿನ ಹಣಕಾಸು ವರ್ಷದಲ್ಲಿ ಜೋಡಿ ಮಾರ್ಗ
750

ಗೇಜ್ ಪರಿವರ್ತನೆಗೆ ಹಾಕಿಕೊಂಡಿರುವ ಗುರಿ
450

ತತ್ಕಾಲ್ ಶುಲ್ಕ ರು. 75 ರಿಂದ ರು. 100ಕ್ಕೆ ಏರಿಕೆ
ಸ್ಲೀಪರ್, ಎಸಿ ಚೇರ್‌ಕಾರ್ ದರ 25ರಷ್ಟು ಏರಿಕೆ
ಟಿಕೆಟ್ ರದ್ದಿಗೆ ಕನಿಷ್ಠ ಶುಲ್ಕ 50ವರೆಗೆ ಹೆಚ್ಚಳಕ್ಕೆ ಪ್ರಸ್ತಾಪ
ಎಕ್ಸಿಕ್ಯೂಟಿವ್ ದರ 100ರಿಂದ ರು. 400ವರೆಗೆ ಹೆಚ್ಚಳ
ದ್ವಿತೀಯ ದರ್ಜೆ ಕಾಯ್ದಿ ರಿಸುವ ಶುಲ್ಕದಲ್ಲಿ ಬದಲಿಲ್ಲ

ರಾಜ್ಯಕ್ಕೆ ದಕ್ಕಿದ್ದು
ಹೊಸ ಹಳಿಗಳು
ಚಿಕ್ಕಬಳ್ಳಾಪುರ................ ಗೌರಿಬಿದನೂರು
ಚಿಕ್ಕಬಳ್ಳಾಪುರ....ಪುಟ್ಟಪರ್ತಿ....ಶ್ರೀ ಸತ್ಯಸಾಯಿ ನಿಲಯ
ಗದಗ...........................................ವಾಡಿ

ಹೊಸ ಎಕ್ಸ್‌ಪ್ರೆಸ್ ರೈಲು
ಬೆಂಗಳೂರು- ಮಂಗಳೂರು ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ)
ಹುಬ್ಬಳ್ಳಿ- ಮೀರಜ್- ಪುಣೆ- ಮುಂಬೈ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ)
ಕಾಮಖ್ಯ(ಗುವಾಹಟಿ)- ಬೆಂಗಳೂರು ಎಸಿ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ)
ಮಡಗಾಂವ್- ಉಡುಪಿ- ಕಾರವಾರ- ಮಂಗಳೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ (ಪ್ರತಿದಿನ)
ಮಂಗಳೂರು- ಧೋನೆ- ರೇಣಿಗುಂಟ- ಕೊಯಮತ್ತೂರು- ಕಾಚಿಗುಡ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ)
ನಾಗರಕೋಯಿಲ್- ಮಧುರೈ- ತಿರುಚಿರಾಪಳ್ಳಿ- ಬೆಂಗಳೂರು ಎಕ್ಸ್‌ಪ್ರೆಸ್ (ಪ್ರತಿದಿನ)
ಪಟ್ನಾ- ಬೆಂಗಳೂರು ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ)
ಯಶವಂತಪುರ- ರಾಯಬರೇಲಿ- ಲಖನೌ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ)
ಜಬಲ್ಪುರ- ನಾಗ್ಪುರ- ಧರ್ಮಾವರಂ- ಯಶವಂತಪುರ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ)

ರೇಲ್ವೆ ಆರ್ಥಿಕ ಸುಧಾರಣೆಗೆ ಕ್ರಮ
ರೇಲ್ವೆಯ ಆರ್ಥಿಕ ಆರೋಗ್ಯ ಸುಧಾರಣೆಗೆ ಕ್ರಮ ಕೈಗೊಂಡಿದ್ದೇನೆ. ಜಿಡಿಪಿ ಬೆಳವಣಿಗೆಯ ಜತೆಗೇ ರೇಲ್ವೆಯ ಪ್ರಗತಿಯೂ ಸಾಗಲಿದೆ. ಕೆಲವೊಂದು ಶುಲ್ಕಗಳನ್ನು ಹೆಚ್ಚಿಸಿರುವುದು ನಿಜ. ಆದರೆ, ರೇಲ್ವೆ ವ್ಯವಸ್ಥೆಯ ಸುಧಾರಣೆಗಾಗಿ ಈ ಕ್ರಮ ಕೈಗೊಂಡಿದ್ದೇನೆ. ಇಲ್ಲಿ ಯಾವುದೇ ಅಂತರ್ಗತ ಶುಲ್ಕವಿಲ್ಲ.
-ಪವನ್ ಕುಮಾರ್ ಬನ್ಸಲ್ ್ಣ ರೇಲ್ವೆ ಸಚಿವ

ದೂರದೃಷ್ಟಿ ಬಜೆಟ್
ಇದೊಂದು ಸುಧಾರಣಾವಾದಿ ಹಾಗೂ ದೂರದೃಷ್ಟಿಯುಳ್ಳ ಬಜೆಟ್. ಇದು ರೇಲ್ವೆ ಹಣಕಾಸಿನ ನೈಜ ಚಿತ್ರಣವನ್ನು ಮುಂದಿಟ್ಟಿದೆ. ಪ್ರಯಾಣಿಕರಿಗೆ ಸೇವೆಗಳನ್ನು ಹೆಚ್ಚಿಸುವ ಮತ್ತು ಸುಧಾರಿಸುವಂತಹ ಸ್ಪರ್ಧಾತ್ಮಕ ಬೇಡಿಕೆಗಳನ್ನು ಪೂರೈಸುವಲ್ಲಿ ಬನ್ಸಲ್ ಅವರು ಯಶಸ್ವಿಯಾಗಿರುವುದು ಶ್ಲಾಘನೀಯ.
-ಡಾ. ಮನಮೋಹನ್‌ಸಿಂಗ್ ಪ್ರಧಾನಿ

ನಮ್ ಸಿಎಂ ಮಾತು...
ರಾಜ್ಯದ ಪಾಲಿಗೆ ನಿರಾಶಾದಾಯಕ. ಸರಕು ಸಾಗಣೆ ದರ ಹೆಚ್ಚಿಸಿದ್ದರಿಂದ ದಿನ ಬಳಕೆ ವಸ್ತುಗಳ ದರ ಹೆಚ್ಚಲಿದೆ. ಸಾಮಾನ್ಯ ಜನತೆಯ ಮೇಲೆ ಮತ್ತಷ್ಟು ಭಾರ ಬೀಳಲಿದೆ. ರಾಜ್ಯದ ಬಹು ವರ್ಷಗಳ ಬೇಡಿಕೆಯನ್ನು ಈಡೇರಿಸಲು ಕೇಂದ್ರವು ಪ್ರಸಕ್ತ ಬಜೆಟ್‌ನಲ್ಲೂ ವಿಫಲವಾಗಿದೆ.
-ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement