ಆಗಸ್ಟಾ ದಾಖಲೆ ಕೊಡಿ
ಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ದಾಖಲೆ ಪತ್ರಗಳನ್ನು...
ನವದೆಹಲಿ: ಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ದಾಖಲೆ ಪತ್ರಗಳನ್ನು ಕೊಡುವಂತೆ ಸಿಬಿಐ ರಕ್ಷಣಾ ಸಚಿವಾಲಯಕ್ಕೆ ಮನವಿ ಮಾಡಿದೆ. ಕಾಪ್ಟರ್ನ ಹಾರಾಟದ ಮಿತಿ ತಗ್ಗಿಸಿದ್ದು, ವಿನ್ಯಾಸದಲ್ಲಿ ಮಾಡಿದ ಬದಲಾವಣೆ ಮತ್ತು ಮತ್ತು ಇತರ ತಾಂತ್ರಿಕ ಅಂಶಗಳನ್ನೊಳಗೊಂಡ ವಿವರ ನೀಡುವಂತೆ ಕೋರಿದೆ. ರಕ್ಷಣಾ ಸಚಿವಾಲಯ ಒಪ್ಪಂದವನ್ನು ಏಕೆ ರದ್ದುಮಾಡಬಾದು ಎಂದು ಆಗಸ್ಟಾವೆಸ್ಟ್ಲ್ಯಾಂಡ್ಗೆ ನೀಡಿದ್ದ ನೋಟಿಸ್ಗೆ ಕಂಪನಿ ನೀಡಿರುವ ಉತ್ತರವನ್ನೂ ನೀಡುವಂತೆ ಸಿಬಿಐ ಕೋರಿದೆ ಎಂದು ಹೇಳಲಾಗಿದೆ. ಇದರ ಜತೆಗೆ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಿಂದ ಆ್ಯರೋಮ್ಯಾಟ್ರಿಕ್ಸ್ ಮತ್ತು ಐಡಿಎಸ್ ಇನ್ಫೋಟೆಕ್ ಕಂಪನಿಗಳ ಭಾರತೀಯ ಘಟಕಗಳ ವ್ಯವಹಾರದ ವಿವರಗಳನ್ನು ನೀಡುವಂತೆ ಸಿಬಿಐ ಮನವಿ ಮಾಡಿಕೊಂಡಿದೆ. ಇತ್ತೀಚೆಗಷ್ಟೇ ಸಿಬಿಐ ತನ್ನ ಪ್ರಾಥಮಿಕ ವರದಿಯಲ್ಲಿ ಭಾರತೀಯ ವಾಯುಪಡೆ ನಿವೃತ್ತ ಮುಖ್ಯಸ್ಥ ಎಸ್.ಪಿ.ತ್ಯಾಗಿ ಸೇರಿದಂತೆ 11 ಮಂದಿಯ ಹೆಸರನ್ನು ಸೇರಿಸಿಕೊಂಡಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.