ಚಿದು ಪರೀಕ್ಷೆ; ನಮ್ಮ ನಿರೀಕ್ಷೆ
ಚಿದಂಬರಂ ಗುರುವಾರ ಎಂಟನೇ ಬಾರಿಗೆ ಆಯವ್ಯಯ ಮಂಡಿಸಲಿದ್ದಾರೆ. ಇದು ನಿಜವಾಗಿಯೂ ಪರೀಕ್ಷೆಯಾಗಿದೆ. ಕರ್ನಾಟಕ ಸೇರಿ...
ಚಿದಂಬರಂ ಗುರುವಾರ ಎಂಟನೇ ಬಾರಿಗೆ ಆಯವ್ಯಯ ಮಂಡಿಸಲಿದ್ದಾರೆ. ಇದು ನಿಜವಾಗಿಯೂ ಪರೀಕ್ಷೆಯಾಗಿದೆ. ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಚುನಾವಣೆ ಮತ್ತು ಡೋಲಾಯಮಾನವಾಗಿರುವ ದೇಶದ ಅರ್ಥವ್ಯವಸ್ಥೆಗೆ ಚೇತರಿಕೆ ಚಿಕಿತ್ಸೆ ನೀಡುವ ಹೊಣೆ ಅವರ ಮೇಲಿದೆ. ಚುನಾವಣೆ ಹಿನ್ನೆಲೆಯಲ್ಲಿ ಜನರನ್ನು ಮರುಳು ಮಾಡುವ ಘೋಷಣೆ ಅನಿವಾರ್ಯ. ಜನಸಾಮಾನ್ಯರು ಅವರ ಮೇಲೆ ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.
ತೆರಿಗೆದಾರರಿಗೆ ರಿಲೀಫ್
ವೈಯಕ್ತಿಕ ತೆರಿಗೆ ಸ್ಲ್ಯಾಬ್ ಮಿತಿ ರು. 2ಲಕ್ಷಕ್ಕಿಂತ ಹೆಚ್ಚಳ ಮಾಡುವ ಸಾಧ್ಯತೆ
ಹಿರಿಯ ನಾಗರಿಕರಿಗೆ (60-80 ವರ್ಷ)ಹಾಲಿ ರು. 2.50 ಲಕ್ಷ, 80 ವರ್ಷಕ್ಕಿಂತ ಹೆಚ್ಚು ರು. 5 ಲಕ್ಷ ಮತ್ತು ಮಹಿಳೆಯರಿಗೆ ನೀಡಿರುವ ರು. 2 ಲಕ್ಷ ಮಿತಿಗಿಂತ ಹೆಚ್ಚಿಸುವ ನಿರೀಕ್ಷೆ
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿ ಬಗ್ಗೆ ಘೋಷಣೆ ಸಾಧ್ಯತೆ
ಕೈ ಸುಡಲಿರುವ ಚಿನ್ನ
ಸದ್ಯ ಷೇರು ಪೇಟೆ ಮೇಲಿನ ವಹಿವಾಟಿಗೆ ತೆರಿಗೆ ಇದೆ. ಅದರಂತೆ ಕಮಾಡಿಟಿ ಮಾರುಕಟ್ಟೆ (ಚಿನ್ನ, ಬೆಳ್ಳಿ ಮತ್ತಿತರ ವಸ್ತುಗಳ ಮೇಲಿನ ಹೂಡಿಕೆ) ಮೇಲೆ ಕಮಾಡಿಟಿ ವ್ಯವಹಾರ ತೆರಿಗೆ ವಿಧಿಸುವ ಸಾಧ್ಯತೆ
ಚಿನ್ನದ ಮೇಲಿನ ಆಮದು ನಿಯಂತ್ರಣಕ್ಕೆ ಸುಂಕ ನಿಗದಿ (ಹಾಲಿ ಮಿತಿ ಶೇ.6) ಮಿತಿ ಹೆಚ್ಚಳ ಸಾಧ್ಯತೆ. ಇದರಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚುವ ಸಾಧ್ಯತೆ
ದೊಡ್ಡ ಕಾರುಗಳಿಗೆ ಕಷ್ಟ
ಸಣ್ಣ ಕಾರುಗಳ ಮೇಲಿನ ಸುಂಕ ಹಾಲಿ 12 ರಿಂದ 10ಕ್ಕೆ ತಗ್ಗುವ ಆಶಯ
ಡೀಸೆಲ್ ಕಾರು ಮತ್ತು ಯುಟಿಲಿಟಿ ವಾಹನಗಳ ಮೇಲೆ ಹೆಚ್ಚುವರಿ ಸೆಸ್
ಬಂಡವಾಳ ಹಿಂತೆಗೆತ
40,000 ಕೋಟಿ ಸಂಗ್ರಹದ ಗುರಿ, ಸರ್ಕಾರಿ ಸ್ವಾಮ್ಯದ ಕಂಪನಿಗಳ ಷೇರು ಮಾರಾಟಕ್ಕೆ ಚಿಂತನೆ
ಖರ್ಚಿನ ಮೇಲೆ ಮಿತಿ
ಖರ್ಚಿನ ಮೇಲೆ ಮಿತಿಗೆ ನೀತಿ ಘೋಷಣೆ.
ರಕ್ಷಣೆ, ರೈಲು ಮತ್ತು ಇತರ ಕಾರ್ಯಕ್ರಮಕ್ಕೆ ಬೀಳುತ್ತಾ ಕತ್ತರಿ
ಗೃಹ ಸುಲಭ
ಗೃಹ ಸಾಲದ ಬಡ್ಡಿಯ ಮೇಲಿನ ತೆರಿಗೆ ವಿನಾಯಿತಿ ಮಿತಿ ಹಾಲಿ ರು. 1.50 ಲಕ್ಷಕ್ಕಿಂತ ಹೆಚ್ಚಳ ಸಾಧ್ಯತೆ
ರಸಗೊಬ್ಬರ ಸಬ್ಸಿಡಿ ಕಟ್
ಕೃಷಿಕರ ಕಿಸೆಗೆ ಬೀಳುತ್ತಾ ಕತ್ತರಿ? ಬಜೆಟ್ನಲ್ಲಿ ರಸಗೊಬ್ಬರಕ್ಕೆ ನೀಡಲಾಗುತ್ತಿರುವ ಸಬ್ಸಿಡಿ ಶೇ.15ರ ವರೆಗೆ ಕಡಿತಗೊಳಿಸುವ ಬಗ್ಗೆ ನಿರ್ಧಾರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.