ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಠಾಣೆ ಮೇಲೆ ದಾಳಿ ಗಾಳಿಯಲ್ಲಿ ಗುಂಡು

Parashurama
Updated On : 27 Feb 2013, 11:16 am

ಸಿಂದಗಿ: ಪ್ರೇಮ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಾಲೂಕಿನ ನಾಗಾವಿ ತಾಂಡಾದ ನೂರಾರು ಜನ ಸಿಂದಗಿ ಪೊಲೀಸ್ ಠಾಣೆ ಮೇಲೆ ಏಕಾಏಕಿ ದಾಳಿ ನಡೆಸಿ ಸಿಬ್ಬಂದಿ ಹಾಗೂ ಹಿರಿಯ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣ ಬುಧವಾರ ನಡೆದಿದೆ.
ಬಡಿಗೆ, ಕಲ್ಲು, ಇಟ್ಟಿಗೆ ಸೇರಿದಂತೆ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಆಗಮಿಸಿದ ನಾಗಾವಿ ತಾಂಡಾದ ಜನರು ಏಕಾಏಕಿ ದಾಳಿ ನಡೆಸಿ ಕಲ್ಲು ತೂರಾಡಿ ಕಿಟಕಿ ಗಾಜು, ಪೊಲೀಸ್ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ.  ಸಿಬ್ಬಂದಿಯನ್ನು ಥಳಿಸಿದ್ದರಿಂದ ಸಿಪಿಐ, ಪಿಎಸ್‌ಐ, ಮಹಿಳಾ ಸಿಬ್ಬಂದಿ, ಪೇದೆಗಳು ಸೇರಿದಂತೆ ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ. ಕಲ್ಲು ತೂರಾಟದಲ್ಲಿ ಠಾಣೆ ಸಂಪೂರ್ಣವಾಗಿ ಜಖಂಗೊಂಡಿದೆ. ಉತ್ತರ ವಲಯ ಐಜಿಪಿ ಚರಣರೆಡ್ಡಿ, ಎಸ್‌ಪಿ ಅಜಯ ಹಿಲೋರಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ ಸಿಂದಗಿ ಹಾಗೂ ತಾಂಡಾದಲ್ಲಿ ತ್ವೇಷಮಯ ವಾತಾವರಣವಿದೆ. ನಾಗಾವಿ 1ರ ತಾಂಡಾದ ವಿವಾಹಿತ ಮಹಿಳೆ ಚನ್ನಾಬಾಯಿ ಗೋಪಿ ಚವ್ಹಾಣ್ ತನ್ನಿಬ್ಬರು ಮಕ್ಕಳನ್ನು ಬಿಟ್ಟು   ಪ್ರಿಯಕರನೊಂದಿಗೆ ಮಹಾರಾಷ್ಟ್ರಕ್ಕೆ ಓಡಿ ಹೋಗಿದ್ದಳು. ಫೆ.26ರಂದು ಕೊಲ್ಲಾಪುರದಲ್ಲಿ ಬಂಧಿಸಿ ಕರೆ ತರಲಾಗಿತ್ತು. ಅವಳನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ  ತಾಂಡಾ ಜನ ಆಗ್ರಹಿಸಿದ ವೇಳೆ ಈ ಘಟನೆ ಸಂಭವಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement