ದಾಖಲೆ ಬೆಂಕಿಗೆ
ಮುಂಬೈ: ಇದನ್ನು ಬೇಜವಾಬ್ದಾರಿ ಎನ್ನಬೇಕೋ, ನಿರ್ಲಕ್ಷ್ಯಪರಮಾವಧಿ ಎನ್ನಬೇಕೋ ಗೊತ್ತಿಲ್ಲ. ಇಪ್ಪತ್ತೈದು ವರ್ಷಗಳ ಹಿಂದೆ, ತಮ್ಮ ಶಾಲಾ ದಿನಗಳಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ವಿನೋದ್ ಕಾಂಬ್ಳಿ ಇಬ್ಬರೂ ಸೇರಿ, ಶಾಲಾಮಟ್ಟದ ಪಂದ್ಯಾವಳಿಯಲ್ಲಿ 664 ರನ್ಗಳ ಭರ್ಜರಿ ಜೊತೆಯಾಟವನ್ನಾಡಿದ್ದರು. ವಿಶ್ವಮಟ್ಟದಲ್ಲಿ ಈಗಲೂ ದಾಖಲೆಯಾಗೇ ಉಳಿದಿರುವ ಈ ಪಂದ್ಯದ ಸ್ಕೋರ್ ಪಟ್ಟಿಯನ್ನು ಇದರ ಜವಾಬ್ದಾರಿ ಹೊತ್ತಿದ್ದ ಸಂಸ್ಥೆಯೇ ಸುಟ್ಟು ಹಾಕಿದೆ. ಈ ಮೂಲಕ, ಸಚಿನ್-ಕಾಂಬ್ಳಿ ಇಬ್ಬರ ಅಮೋಘ ಜೊತೆಯಾಟದ ಕುರಿತಾದ ಅಧಿಕೃತ ಮೂಲ ದಾಖಲೆಯೊಂದು ನಾಶವಾಗಿದೆ.
ಅಂದು... 1988ರ ಫೆಬ್ರವರಿ 24. ಮುಂಬೈ ಸ್ಕೂಲ್ ಅಸೋಸಿಯೇಷನ್ (ಎಂಎಸ್ಎಸ್ಎ) ವತಿಯಿಂದ ಆಯೋಜಿಸಲಾಗಿದ್ದ “ÔÛÀÂÑé ÌÞÅéu’ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಂದು ಶಾರದಾಶ್ರಮ ವಿದ್ಯಾಮಂದಿರ ಹಾಗೂ ಸೇಂಟ್ ಕ್ಸೇವಿಯರ್ ತಂಡಗಳ ನಡುವೆ ಪಂದ್ಯ ನಡೆದಿತ್ತು. ಶಾರದಾಶ್ರಮ ಶಾಲೆಯ ತಂಡದ ಪರವಾಗಿ ಬ್ಯಾಟಿಂಗ್ಗೆ ಇಳಿದಿದ್ದ 14ರ ಪ್ರಾಯದ ಸಚಿನ್ ತೆಂಡೂಲ್ಕರ್ ಹಾಗೂ ವಿನೋದ್ ಕಾಂಬ್ಳಿ ಇಬ್ಬರೂ 664 ರನ್ಗಳ ಜೊತೆಯಾಟವಾಡಿದ್ದರು. ಶಾಲಾ ಮಟ್ಟದಲ್ಲಷ್ಟೇ ಅಲ್ಲ, ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ಮಟ್ಟದ, ಮಾದರಿಯ ಪಂದ್ಯದಲ್ಲಿ ಇಷ್ಟು ದೊಡ್ಡ ಮೊತ್ತದ ಜೊತೆಯಾಟ ಮೂಡಿಬಂದಿಲ್ಲ. ಇದು ಇಂದಿಗೂ ದಾಖಲೆ.
ಇದೇ ಪಂದ್ಯದ ಸ್ಕೋರ್ ಪಟ್ಟಿಯೇ ಈಗ ಬೆಂಕಿಗೆ ಆಹುತಿಯಾಗಿರುವುದು.
ಹೇಗಾಯ್ತು?: ಸಚಿನ್-ಕಾಂಬ್ಳಿ ಜೊತೆಯಾಟದ ಪಂದ್ಯದ ದಾಖಲೆ (ಸ್ಕೋರ್ ಪಟ್ಟಿ) ಇದ್ದದ್ದು, ಹ್ಯಾರಿಸ್ ಶೀಲ್ಡ್ ಪಂದ್ಯಾವಳಿಯನ್ನು ಆಯೋಜಿಸಿದ್ದ ಎಂಎಸ್ಎಸ್ಎ ಸಂಸ್ಥೆಯ ಬಳಿ. ಇದೇ ದಾಖಲೆಯು ಈಗ ನಾಶವಾಗಿದೆ ಎಂದು ಹೇಳಲಾಗುತ್ತಿದೆ.
ಹಾಗಂತ, ಇದು ಯಾರದೋ ಕಿತಾಪತಿಯಿಂದ ಆಗಿದ್ದಲ್ಲ. ಮೂಲಗಳ ಪ್ರಕಾರ, ಎಂಎಸ್ಎಸ್ಎ ಸಂಸ್ಥೆಯ ಕಚೇರಿಯಲ್ಲಿದ್ದ ಹಳೆಯ ಹಾಗೂ ಅನುಪಯುಕ್ತ ಕಾಗದ ಪತ್ರಗಳನ್ನು ಬೇರ್ಪಡಿಸಿ, ಅದನ್ನು ವಿಲೇವಾರಿ ಮಾಡುವ ಸಂದರ್ಭದಲ್ಲಿ ಈ ಸ್ಕೋರ್ ಪಟ್ಟಿ, ತ್ಯಾಜ್ಯ ಕಾಗದಪತ್ರಗಳನ್ನು ಸೇರಿಕೊಂಡಿದೆ. ಹೀಗೆ, ಅದು ಅನುಪಯುಕ್ತ ಕಾಗದಗಳ ಜೊತೆ ಬೆಂಕಿಗೆ ತುತ್ತಾಗಿದೆ.
ಸಂಸ್ಥೆ ಏನು ಹೇಳುತ್ತೆ ?: ಒಂದು ಅಚಾತುರ್ಯದಿಂದ ಈ ಘಟನೆ ಬಗ್ಗೆ ಹೇಳಿಕೆ ನೀಡಿರುವ ಎಂಎಸ್ಎಸ್ಎ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಎಚ್.ಎಸ್. ಭಾರಾ ಅವರು, “ÑÚ_«é-OÛM¸Ù ಆಡಿದ್ದ ದಾಖಲೆ ಜೊತೆಯಾಟದ ಪಂದ್ಯದ ದಾಖಲೆಯನ್ನು ನಾವು ಇತರೆ ಪಂದ್ಯಗಳ ಜೊತೆಯಲ್ಲಿ ಇಟ್ಟಿದ್ದೆವು. ಹಳೆಯ ಕಾಗದ ಪತ್ರಗಳನ್ನು ವಿಲೇವಾರಿ ಮಾಡುವ ಸಂದರ್ಭದಲ್ಲಿ, ಈ ಪಂದ್ಯದ ಕೆಲವು ದಾಖಲೆಗಳೂ ನಾಶವಾಗಿವೆ. ಅಷ್ಟಾಗಿಯೂ, 25 ವರ್ಷಗಳ ಹಿಂದಿನ ದಾಖಲೆಯನ್ನು ಹೇಗೆ ಸಂರಕ್ಷಿಸಲು ಸಾಧ್ಯ? ಅವೂ ಸಹಜವಾಗಿ ನಾವು ಬಳಸುವ ಕಾಗದ ಪತ್ರಗಳಂತೆಯೇ, ವರ್ಷಗಳು ಉರುಳಿದ ಮೇಲೆ ಮೆತ್ತಗಾಗಿರುತ್ತವೆ' ಎಂದಿದ್ದಾರೆ ಎಂದು ಕೆಲ ವರದಿಗಳಲ್ಲಿ ಉಲ್ಲೇಖಿಸಲಾಗಿದೆ.