ಬಜೆಟ್ ಬಿಕ್ಕಟ್ಟು ನೀವೇ ಬಗೆಹರಿಸಿಕೊಳ್ಳಿ
ಕೆಜೆಪಿ ಬೆಂಬಲಿತ 13 ಮಂದಿ ಶಾಸಕರು ರಾಜಿನಾಮೆ ಸಲ್ಲಿಸಿರುವುದರಿಂದ ಕರ್ನಾಟಕದಲ್ಲಿ ಉದ್ಭವಿಸಿರುವ ಬಿಕ್ಕಟ್ಟನ್ನು ...
ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಕೆಜೆಪಿ ಬೆಂಬಲಿತ 13 ಮಂದಿ ಶಾಸಕರು ರಾಜಿನಾಮೆ ಸಲ್ಲಿಸಿರುವುದರಿಂದ ಕರ್ನಾಟಕದಲ್ಲಿ ಉದ್ಭವಿಸಿರುವ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಲು ಮುಕ್ತ ಅಧಿಕಾರವನ್ನು ಪಕ್ಷದ ಹೈಕಮಾಂಡ್‌ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ನೀಡಿದೆ. 'ನಿಮ್ಮ ಮಿತಿಯಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗದಂತೆ ಬಿಕ್ಕಟ್ಟು ಪರಿಹರಿಸಿಕೊಂಡು ಬಜೆಟ್ ಮಂಡಿಸಿ' ಎಂದು ನೂತನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಮುಖ್ಯಮಂತ್ರಿ ಶೆಟ್ಟರ್‌ಗೆ ಸೂಚಿಸಿದ್ದಾರೆ. ನಿಮ್ಮೊಂದಿಗೆ ಪಕ್ಷ ಇದೆ. ನಿರಾತಂಕವಾಗಿ ಬಜೆಟ್ ಮಂಡಿಸಿ. ಇರುವಷ್ಟು ದಿನಗಳಲ್ಲಿ ಪಕ್ಷ ಕಳೆದುಕೊಂಡಿರುವ ವರ್ಚಸ್ಸು ಮರುಗಳಿಸುವ ಪ್ರಯತ್ನ ನಿಮ್ಮಿಂದಾಗಲಿ ಎಂದು ಶುಭಹಾರೈಸಿದ್ದಾರೆಂದು ತಿಳಿದು ಬಂದಿದೆ. ಸುಮಾರು 20 ನಿಮಿಷ ರಾಜನಾಥ್ ಸಿಂಗ್ ಹಾಗೂ ಶೆಟ್ಟರ್ ಮಾತುಕತೆ ನಡೆಸಿದರು. ಈ ವೇಳೆ, ಕರ್ನಾಟಕದಲ್ಲಿ ಪಕ್ಷದ ಪರಿಸ್ಥಿತಿ ಸರ್ಕಾರದ ಪ್ರಗತಿ ಕುರಿತಂತೆ ವಿವರಿಸಿದರು.
ಸಿದ್ದು, ಗವರ್ನರ್ ಭೇಟಿ
ದಿಢೀರ್ ಬೆಳವಣಿಗೆಯಲ್ಲಿ ಸೋಮವಾರ ಸಂಜೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರನ್ನು ಭೇಟಿ ಮಾಡಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿದ್ದಾರೆ. ಮಂಗಳವಾರದಿಂದ ಫೆ.1ರವರೆಗೆ ಮಂಗಳೂರಿನ ಉಳ್ಳಾಲದಿಂದ ಉಡುಪಿಯ ಮಲ್ಪೆವರೆಗೆ ಕಾಂಗ್ರೆಸ್ ಪಾದಯಾತ್ರೆ ನಡೆಯಲಿದ್ದು, ಶಾಸಕರ ರಾಜಿನಾಮೆ ಸೇರಿದಂತೆ ಮಹತ್ವದ ಬೆಳವಣಿಗೆಗಳು ನಡೆಯುವ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾರೂ ಬೆಂಗಳೂರಿನಲ್ಲಿ ಇರುವುದಿಲ್ಲ. ಹೀಗಾಗಿ ಈ ವಿದ್ಯಮಾನಗಳಲ್ಲಿ ಪ್ರಮುಖ ಪ್ರತಿಪಕ್ಷವಾಗಿರುವ ಕಾಂಗ್ರೆಸ್‌ನ ನಿರ್ಧಾರವೇನು ಎಂಬ ಬಗ್ಗೆ ಸಿದ್ದರಾಮಯ್ಯ ಅವರು ರಾಜ್ಯಪಾಲರಿಗೆ ವಿವರ ನೀಡಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.