ಮೋದಿ ಪರ ಸಿನ್ಹಾ ಬ್ಯಾಟಿಂಗ್
ಪಿಎಂ ಅಭ್ಯರ್ಥಿ ಬಗ್ಗೆ ಸಂಸದೀಯ ಸಭೆಯಲ್ಲಿ ನಿರ್ಧಾರ: ರಾಜನಾಥ್. ಎನ್ಡಿಎ ಸಭೆ ಕೂಡಲೇ ಕರೆಯಿರಿ: ಜೆಡಿಯು ಒತ್ತಾಯ
ನವದೆಹಲಿ: ಭಾನುವಾರವಷ್ಟೇ ಬಿಜೆಪಿ ಅಧ್ಯಕ್ಷ ರಾಜ್ನಾಥ್ ಸಿಂಗ್ ಮತ್ತು ಗುಜರಾತ್ ಸಿಎಂ ಮೋದಿ ನಡುವೆ ಮಹತ್ವದ ಭೇಟಿ ನಡೆದಿತ್ತು. ಸೋಮವಾರ ಬಿಜೆಪಿ ನಾಯಕ ಯಶವಂತ ಸಿನ್ಹಾ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಬೇಕು. ಇದರಿಂದ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ವಾದಿಸಿದ್ದಾರೆ.
ಜೆಡಿಯು ಮಾತ್ರ ಸಿನ್ಹಾ ಹೇಳಿಕೆಗೆ ಸದ್ಯ ಯಾವುದೇ ಮಹತ್ವ ನೀಡದಿರಲು ನಿರ್ಧರಿಸಿದೆ. ಇದು ಸಿನ್ಹಾ ಅವರ ವೈಯಕ್ತಿಕ ಅಭಿಪ್ರಾಯವೇ ಹೊರತು ಬಿಜೆಪಿ ಅಧಿಕೃತ ಹೇಳಿಕೆಯಲ್ಲ ಎಂದು ತಿಳಿಸಿದೆ.
ಕಾರ್ಯಕರ್ತರ ಬಯಕೆ: ಒಂದು ವೇಳೆ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಿದ್ದೇ ಆದಲ್ಲಿ ಮತ್ತೊಂದು ಬಾರಿ ಅಧಿಕಾರಕ್ಕೇರುವ ಪಕ್ಷದ ಕನಸು ನನಸಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಂಸದೀಯ ಸಮಿತಿ ನಿರ್ಧಾರ: ಸಿನ್ಹಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಅಧ್ಯಕ್ಷ ರಾಜ್ನಾಥ್ ಸಿಂಗ್ ಪ್ರಧಾನಿ ಅಭ್ಯರ್ಥಿ ಬಗೆಗಿನ ನಿರ್ಧಾರವನ್ನು ಪಕ್ಷದ ಸಂಸದೀಯ ಮಂಡಳಿ ತೆಗೆದುಕೊಳ್ಳಲಿದೆ ಎಂದಿದ್ದಾರೆ. ಇದೇ ವೇಳೆ ಖಾಸಗಿ ಸುದ್ದಿವಾಹಿನಿಯೊಂದರ ಜತೆ ಮಾತನಾಡಿದ ಜೆಡಿಯು ಮುಖಂಡ ಶಿವಾನಂದ ತಿವಾರಿ ಸಿನ್ಹಾ ಹೇಳಿಕೆ ಹಿನ್ನೆಲೆಯಲ್ಲಿ ಎನ್ಡಿಎ ಸಭೆ ಕರೆಯಬೇಕೆಂದು ಒತ್ತಾಯಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.