ಪೆರೋಲ್ ಮೇಲೆ ಪೆರೋಲ್ಗೆ ಶುಭಾಮಸ್ತು
ಬೆಂಗಳೂರು: ಆತ ಕೋಪದ ಕೈಗೆ ಬುದ್ದಿ ಕೊಟ್ಟ ಕೊಲೆಗಾರ, ಆಕೆ ಪ್ರೀತಿಯನೇ ಕೊಂದ ಕೊಲೆಗಾರ್ತಿ...!
ಪಾರ್ಶ್ವವಾಯು, ಮಾನಸಿಕ ಅಸ್ವಸ್ಥತೆಯಿಂದ ನರಳುತ್ತಾ ಹಾಸಿಗೆ ಹಿಡಿದ ತಾಯಿಗಾಗಿ ಮಿಡಿಯುತ್ತಿದೆ ಆತನ ಹೃದಯ. ಆದರೆ ಆಕೆಯದು ಬಾಳ ಸಂಗಾತಿಯಾಗಬೇಕಿದ್ದವನನೇ ಕೊಲ್ಲಿಸಿದ ಕಠಿಣ ಮನ. -ಆತ ಹಾಸನದ ಚಂದ್ರು, ಈಕೆ ಶುಭಾ.
ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಜೈಲಿನ ಬಂಧಿಗಳಾದ ಇವರಿಬ್ಬರಲ್ಲಿ ಯಾರು ತಕ್ಷಣ ತುರ್ತು ರಜೆ (ಪೆರೋಲ್) ಪಡೆಯಲು ಅರ್ಹರು ಎಂದು ಪ್ರಶಿಸಿದರೆ ಅಲ್ಲಿರುವ ಸಾವಿರಾರು ಬಂಧಿಗಳು ಚಂದ್ರು ಪರ ನಿಲ್ಲುತ್ತಾರೆ. ಆದರೆ ಕಲ್ಲು ಹೃದಯದ ಜೈಲು ಅಧಿಕಾರಿಗಳು ಚಂದ್ರುವಿನ ಬದಲು ಶುಭಾಗೆ ಪೆರೋಲ್ ಮಂಜೂರು ಮಾಡುವ ಮೂಲಕ 'ಸರಳಿನ ಮನೆಯ' ಹಿಂದಿನ ನಿಜರೂಪ ಬಯಲು ಮಾಡಿದ್ದಾರೆ.
ಹೌದು. ಕಾರಾಗೃಹ ಇಲಾಖೆಯಲ್ಲಿ ಪೆರೋಲ್ ಮಾರಾಟ ನಡೆಯುತ್ತದೆ ಎನುವುದಕ್ಕೆ ಸಿಕ್ಕಿದೆ ಇನೊಂದು ಪುರಾವೆ. ಪರಪ್ಪನ ಅಗ್ರಹಾರ ಕಾರಾಗೃಹದ ಅತ್ಯಂತ ಪ್ರಭಾವಿ ಕೈದಿಗಳ ಪೈಕಿ ಒಬ್ಬರಾಗಿರುವ ಶುಭಾಗೆ ಒಂದು ತಿಂಗಳು ಪೆರೋಲ್ ವಿಸ್ತರಿಸಿರುವ ಬಂದಿಖಾನೆ ಅಧಿಕಾರಿಗಳು ಮೂವರು ಅಮಾಯಕ ಕೈದಿಗಳ ಕಣ್ಣೀರಿಗೆ ಕಿಂಚಿತ್ತೂ ಬೆಲೆ ನೀಡಿಲ್ಲ.
ಏನಿದು ಪ್ರಕರಣ?: ತನ ಜತೆ ಮದುವೆ ನಿಶ್ಚಯವಾಗಿದ್ದ ಸಾಫ್ಟ್ವೇರ್ ಎಂಜಿನಿಯರ್ ಗಿರೀಶ್ನನು, ಪ್ರಿಯತಮನ ಜತೆ ಸೇರಿ ವಿಮಾನ ನಿಲ್ದಾಣ ರಸ್ತೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಿಸಿದ್ದ ಶುಭಾ ಪ್ರಕರಣ ನಿಮಗೆಲ್ಲ ಗೊತ್ತು. ಈ ಪ್ರಕರಣ ಸಂಬಂಧ ಸಹ ಆರೋಪಿಗಳ ಜತೆ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಆಕೆ ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ.
2010ರಲ್ಲಿ ಶುಭಾ ಪೆರೋಲ್ಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಆರ್.ಟಿ.ನಗರ ಠಾಣೆ ಪೊಲೀಸರು ವಿರೋಧ ವ್ಯಕ್ತಪಡಿಸಿದ್ದರು. ಮಾತ್ರವಲ್ಲ, ಆಕೆಯ ಪೋಷಕರು ಬೆಂಗಳೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಲ್ಲಿಯೇ ನೆಲೆಸಿದರೂ ಪೊಲೀಸರು ಪೆರೋಲ್ಗೆ ಆಕ್ಷೇಪ ವ್ಯಕ್ತಪಡಿಸುವ ಸಾಧ್ಯತೆ ಇತ್ತು.
ಈ ಹಿನೆಲೆಯಲ್ಲಿ ಮೈಸೂರಿಗೆ ವಾಸ್ತವ್ಯ ಬದಲಿಸಿದ ಆಕೆಯ ಪಾಲಕರು 2011ರಲ್ಲಿ ಮತ್ತೆ ಪೆರೋಲ್ ಅರ್ಜಿ ದಾಖಲಿಸಿದ್ದರು.
ಇದಕ್ಕೆ ಒಪ್ಪಿಗೆಯೂ ದೊರೆತಿತ್ತು. ಖುದ್ದಾಗಿ ಶುಭಾ ತಂದೆಯೇ ಬಂದು ಮಗಳನು ಕರೆದೊಯ್ದಿದ್ದರು. ಈಗ ಒಂದು ತಿಂಗಳ ಪೆರೋಲ್ ಅವಧಿ ಮುಕ್ತಾಯಗೊಂಡಿದ್ದು, ಅವಧಿ ವಿಸ್ತರಣೆಗೆ ಶುಭಾ ಸಲ್ಲಿಸಿದ್ದ ಮನವಿಗೆ ಜೈಲು ಅಧಿಕಾರಿಗಳು ಯಾವುದೇ ಆಕ್ಷೇಪವಿಲ್ಲದೆ ಅನುಮತಿ ನೀಡಿದ್ದಾರೆ. ಇದಕ್ಕೆ ಕಾರಣ ಆಕೆ ಪ್ರಭಾವಿ ವಕೀಲರ ಪುತ್ರಿ. ಆದರೆ ರಜಾ ವಿಸ್ತರಣೆಗಾಗಿ ಅಂಗಲಾಚುತ್ತಿರುವ ಉಳಿದ ಕೈದಿಗಳ ಬಗ್ಗೆ ಮಾತ್ರ ಅಧಿಕಾರಿಗಳು ಇದೇ ಸೂತ್ರ ಅನ್ವಯ ಮಾಡುತ್ತಿಲ್ಲ.
ಗೋಳಿನ ಕಥೆ: ಅದರಲ್ಲಿಯೂ ಹಾಸನದ ಚಂದ್ರುವಿನದು ಗೋಳಿನ ಕಥೆ. ಕೋಪದ ಕೈಗೆ ಬುದ್ದಿ ಕೊಟ್ಟು ಕೊಲೆಗಾರನಾದ ಚಂದ್ರುವಿಗೆ ಸದ್ಯ ತಾಯಿಯೊಬ್ಬರೇ ದಿಕ್ಕು. ಆದರೆ ಮಗ ಜೈಲು ಸೇರಿದ ನೋವಿನಲ್ಲಿ ಮಾನಸಿಕ ಅಸ್ವಸ್ಥರಾದ ಅವರು ಈಗ ಪಾರ್ಶ್ವವಾಯು ಪೀಡಿತರಾಗಿದ್ದಾರೆ. ಆಕೆಯ ಪ್ರತಿ ಕ್ಷಣದ ಬದುಕಿಗೂ ಇನೊಬ್ಬರ ಸಹಕಾರ ಬೇಕು. ಹೀಗಾಗಿ ಪೆರೋಲ್ ವಿಸ್ತರಣೆಗಾಗಿ ಚಂದ್ರು ಮಾಡಿದ ಮನವಿಗೆ ಅಧಿಕಾರಿಗಳು ಇನೂ ಅಂಗೀಕಾರ ನೀಡಿಲ್ಲ. ಜೈಲಿಂದ ಜೈಲಿಗೆ ರಂಗಯಾತ್ರೆ ಅಭಿಯಾನ ನಡೆಸಿ ಇದೇ ಅಧಿಕಾರಿಗಳಿಂದ ಸೈ ಎನಿಸಿಕೊಂಡಿರುವ ಚಂದ್ರುವಿಗೆ ಪೆರೋಲ್ ಮಂಜೂರು ವಿಚಾರದಲ್ಲಿ ಉದಾರತನ ತೋರುತ್ತಿಲ್ಲ. ಆತ ಶುಭಾಳ ರೀತಿ ಪ್ರಭಾವಿ ಕುಟುಂಬದ ಹಿನೆಲೆಯಿಂದ ಬಂದಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.
ಗಾಂಧಿ ನಮನವಿಲ್ಲ: ಗಾಂಧಿ ಹುತಾತ್ಮರಾದ ದಿನ ಮೌನ ನಮನ ಸಲ್ಲಿಸುವ ಪರಂಪರೆಯನು ಮುರಿಯುವ ಮೂಲಕ ಪರಪ್ಪನ ಅಗ್ರಹಾರದಲ್ಲಿ ಅಧಿಕಾರಿಗಳು ಬುಧವಾರ ಅವಾಂತರ ಸೃಷ್ಟಿಸಿದ್ದಾರೆ. ಪ್ರತಿ ವರ್ಷ ಜ.30ರಂದು ಕಾರಾಗೃಹದಲ್ಲಿ 11 ಗಂಟೆಗೆ ಬೆಲ್ ಹೊಡೆದ ನಂತರ ಬಂಧಿಗಳು, ಅಧಿಕಾರಿಗಳು ಮೌನ ನಮನ ಸಲ್ಲಿಸುವುದು ಸಂಪ್ರದಾಯ.
-ರಾಘವೇಂದ್ರ ಭಟ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.