ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮಹಿಳೆಯರಿಗೆ ಅಭಯ

'ಮಹಿಳೆಯರೇ, ಯುವತಿಯರೇ ನೀವಿನ್ನು ಹೆದರಬೇಕಿಲ್ಲ. ನಿಮ್ಮ ರಕ್ಷಣೆಗೆ ನಾವಿದ್ದೇವೆ'. -ಇದು ಬೆಂಗಳೂರು ಪೊಲೀಸರ 'ಅಭಯ'.

Parashurama
Updated On : 31 Jan 2013, 1:17 am

ಬೆಂಗಳೂರು: 'ಮಹಿಳೆಯರೇ, ಯುವತಿಯರೇ ನೀವಿನ್ನು ಹೆದರಬೇಕಿಲ್ಲ. ನಿಮ್ಮ ರಕ್ಷಣೆಗೆ ನಾವಿದ್ದೇವೆ'. -ಇದು ಬೆಂಗಳೂರು ಪೊಲೀಸರ 'ಅಭಯ'.
ಇದರಲ್ಲೇನಿದೆ ಹೊಸತು. ಪೊಲೀಸರು ಇರುವುದೇ ರಕ್ಷಣೆ ನೀಡುವುದಕ್ಕಾಗಿ ಅಲ್ಲವೇ ? ಎಂಬ ಪ್ರಶ್ನೆ ಸಹಜ. ಆದರೆ ಈ 'ಅಭಯ' ಹೊಸದು.
ಅಂದರೆ, ಮಹಿಳೆಯರು ಮತ್ತು ಯುವತಿಯರ ರಕ್ಷಣೆಗಾಗಿಯೇ 'ಅಭಯ' ಹೆಸರಿನ ಪೊಲೀಸ್ ವಾಹನ ರಸ್ತೆಗಿಳಿದಿದೆ. ಅಂದಹಾಗೆ ಈ ವಾಹನದಲ್ಲಿ ಮಹಿಳಾ ಪೊಲೀಸರೇ ಇರುತ್ತಾರೆ ಎಂಬುದು ಮತ್ತೊಂದು ವಿಶೇಷ.
ಬುಧವಾರ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿ ಈ ವಾಹನಕ್ಕೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಪತ್ನಿ ಶಿಲ್ಪಾ ಶೆಟ್ಟರ್ ಹಸಿರು ನಿಶಾನೆ ತೋರಿಸಿದರು.
ಬುಧವಾರದಿಂದಲೇ 'ಅಭಯ' ವಾಹನಗಳು ರಸೆಗಿಳಿದಿದ್ದು, ಇಂತಹ ಯೋಜನೆ ಜಾರಿಗೆ ತರುವ ಮೂಲಕ ಬೆಂಗಳೂರು ಪೊಲೀಸರು ರಾಜ್ಯಕ್ಕೆ ಮಾದರಿಯಾಗಿದ್ದಾರೆ.          
ಮಹಿಳೆಯರ ಸಮಸ್ಯೆಗಳಿಗೆ ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಸ್ಪಂದಿಸಲು ಸೃಷ್ಟಿಸಿರುವ 'ಕ್ಷಿಪ್ರ ಕಾರ್ಯಪಡೆ ಯೋಜನೆ' ಇದು. ಈ ಯೋಜನೆಯಡಿ 'ಅಭಯ' ವಾಹನದಲ್ಲಿನ ಸಿಬ್ಬಂದಿ ಕೆಲಸ ಮಾಡುತ್ತಾರೆ. ಬೆಂಗಳೂರಿನಲ್ಲಿ ಏಳು 'ಅಭಯ' ವಾಹನಗಳಿದ್ದು, ಪೊಲೀಸ್ ಅಧಿಕಾರಿಗಳು ದಿನದ 24 ಗಂಟೆಯೂ ಆ ವಾಹನದಲ್ಲಿ ಗಸ್ತು ತಿರುಗುತ್ತಿರುತ್ತಾರೆ.
ವಾಹನದಲ್ಲಿ ಯಾರಿರುತ್ತಾರೆ: ಒಂದು ವಾಹನದಲ್ಲಿ ಮಹಿಳಾ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಹಾಗೂ ಇಬ್ಬರು ಮಹಿಳಾ ಪೇದೆಗಳು ಇರುತ್ತಾರೆ. ಅವರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಅವರಿಗೆ ವಿಶೇಷ ರೀತಿಯ ತರಬೇತಿ ನೀಡಲಾಗುತ್ತದೆ.
ಘಟನೆ ನಡೆದ ತಕ್ಷಣ ಸ್ಥಳಕ್ಕೆ ಹೋಗಿ ಅಲ್ಲಿನ ಪರಿಸ್ಥಿತಿ ಗಮನಿಸಿ, ದೂರುದಾರರೊಂದಿಗೆ ವರ್ತಿಸುವುದು, ಅವರ ಸಮಸ್ಯೆಗೆ ಸ್ಪಂದಿಸುವುದು, ಸಾಕ್ಷಿ ನಾಶ ಮಾಡದಂತೆ ಎಚ್ಚರವಹಿಸುವುದು, ಅಗತ್ಯಬಿದ್ದಲ್ಲಿ ಕೌನ್ಸೆಲಿಂಗ್  ಮಾಡುವುದು ಸೇರಿದಂತೆ ಇತರೆ ವಿಷಯಗಳ ಬಗ್ಗೆ ಅವರಿಗೆ ಮಾಹಿತಿ ನೀಡಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪುಂಡು-ಪೋಕರಿಗಳ ಮೇಲೂ ಕಣ್ಣು: ಅಭಯ್ ಸಿಬ್ಬಂದಿ ಸದಾ ಕರ್ತವ್ಯದಲ್ಲಿದ್ದು, ಒಂದು ವೇಳೆ ಅವರಿಗೆ ಮಹಿಳೆ, ಯುವತಿಯರು ತೊಂದರೆಗೊಳಗಾಗಿರುವ ಘಟನೆಗೆ ಸಂಬಂಧಿಸಿದ ಕರೆಗಳು ಬರದಿದ್ದರೆ ನಿರ್ಜನ ಪ್ರದೇಶ, ಶಾಲಾ-ಕಾಲೇಜು, ಬಸ್, ರೇಲ್ವೆ ನಿಲ್ದಾಣ ಸೇರಿದಂತೆ ಜನನಿಬಿಡ ಸ್ಥಳಗಳಲ್ಲಿ ಗಸ್ತು ತಿರುಗುತ್ತಿರುತ್ತಾರೆ. ಅಲ್ಲಿ ಪುಂಡು-ಪೋಕರಿಗಳ ಮೇಲೆ ಕಣ್ಣಿಡುತ್ತಾರೆ. ಪ್ರೇಮಿಗಳು ನಿರ್ಜನ ಪ್ರದೇಶಕ್ಕೆ ಹೋಗಿ ಲಲ್ಲೆ ಹೊಡೆಯುವಂತಿಲ್ಲ. ಅಲ್ಲಿಯೂ ನಿಗಾ ವಹಿಸಲಿದ್ದಾರೆ 'ಅಭಯ' ಸಿಬ್ಬಂದಿ.

1091/10928 ಕರೆ ಮಾಡಿ
ನೀವೇನಾದರೂ ಸಮಸ್ಯೆಗೆ ಸಿಲುಕಿದ್ದರೆ ಈ ಮೇಲಿನ ದೂರವಾಣಿ ಸಂಖ್ಯೆಗೆ ಕರೆ ಮಾಡಿ. ಅಥವಾ ಕಂಟ್ರೋಲ್‌ರೂಂಗೆ ಕರೆ ಮಾಡಿ ದರೂ ಪೊಲೀಸರು ನೆರವಾಗುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments