ಆಹಾರ ಭದ್ರತೆ ಜಾರಿಗೆ ರಾಜ್ಯ ಮುಂದು
ಲೋಕಸಭೆ ಚುನಾವಣೆ ಮೇಲೆ ಕಣ್ಣಿರುವ ಕಾಂಗ್ರೆಸ್, ಆಹಾರ ಭದ್ರತಾ ಯೋಜನೆಯನ್ನು ಮೊದಲು ಕರ್ನಾಟಕದಲ್ಲಿ ಜಾರಿಗೆ...
ಪಿಟಿಐ, ನವದೆಹಲಿ, ಜು.5-
ಲೋಕಸಭೆ ಚುನಾವಣೆ ಮೇಲೆ ಕಣ್ಣಿರುವ ಕಾಂಗ್ರೆಸ್, ಆಹಾರ ಭದ್ರತಾ ಯೋಜನೆಯನ್ನು ಮೊದಲು ಕರ್ನಾಟಕದಲ್ಲಿ ಜಾರಿಗೊಳಿಸಲು ಮುಂದಾಗಿದೆ. ಈ ಮೂಲಕ ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಳ್ಳುವ ಯೋಜನೆ ಆ ಪಕ್ಷದ್ದು. ಒಂದು ವೇಳೆ ಯೋಜನೆ ಮೊದಲು ಜಾರಿಯಾದರೆ ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳ ಪೈಕಿ ಆಹಾರ ಭದ್ರತಾ ಯೋಜನೆ ಅನುಷ್ಠಾನಕ್ಕೆ ತಂದ ಹೆಗ್ಗಳಿಕೆ ಕರ್ನಾಟಕದ್ದು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗಾಗಲೇ ಒಂದು ರು.ಗೆ ಅಕ್ಕಿ ಎಂಬ ಯೋಜನೆ ಜಾರಿಗೊಳಿಸಲು ಸಿದ್ಧತೆ ನಡೆಸಿದ್ದು, ಕೇಂದ್ರ ಸರ್ಕಾರದಿಂದ ಹೆಚ್ಚುವರಿ ಅಕ್ಕಿ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದೆ. ಬರೋಬ್ಬರಿ 9 ವರ್ಷಗಳ ಬಳಿಕ ಅಧಿಕಾರಕ್ಕೆ ಏರಿರುವ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ 28 ಸ್ಥಾನಗಳ ಪೈಕಿ ಸಿಂಹಪಾಲನ್ನು ಗೆದ್ದುಕೊಳ್ಳಲೇ ಬೇಕೆಂದು ಪಣ ತೊಟ್ಟಿದೆ. ಬಿಜೆಪಿ ಆಡಳಿತ ಇರುವ ಛತ್ತೀಸ್‌ಗಡ, ಉತ್ತರಪ್ರದೇಶ ಮತ್ತು ಬಿಹಾರ ಸರ್ಕಾರ ಕೂಡ ಈ ಯೋಜನೆ ಜಾರಿಗೊಳಿಸಲು ಭಾರಿ ಉತ್ಸಾಹ ತೋರಿವೆ.