ನಾಣ್ಯ ಗಣಪ
ವಿಘ್ನ ವಿನಾಶಕನ ಚಿತ್ರವುಳ್ಳ ನಾಣ್ಯವನ್ನು ನೋಡುವ ಸದವಕಾಶ ಶೀಘ್ರದಲ್ಲಿಯೇ ಒದಗಿಬರಲಿದೆ. ಮೊತ್ತಮೊದಲ ಬಾರಿಗೆ ಗಣೇಶನ...
ಪಿಟಿಐ ಕೋಲ್ಕತಾ ಜು.8
ವಿಘ್ನ ವಿನಾಶಕನ ಚಿತ್ರವುಳ್ಳ ನಾಣ್ಯವನ್ನು ನೋಡುವ ಸದವಕಾಶ ಶೀಘ್ರದಲ್ಲಿಯೇ ಒದಗಿಬರಲಿದೆ. ಮೊತ್ತಮೊದಲ ಬಾರಿಗೆ ಗಣೇಶನ ಬಣ್ಣದ ಚಿತ್ರ ಹೊಂದಿರುವ ನಾಣ್ಯವನ್ನು ಜರ್ಮನಿಯಲ್ಲಿ ಮುದ್ರಿಸಲಾಗಿದೆ. ಪಶ್ಚಿಮ ಆಫ್ರಿಕಾದ ಐವರಿ ಕೋಸ್ಟ್ ಸರ್ಕಾರ ಈ ನಾಣ್ಯದ ಬಿಡುಗಡೆ ಮಾಡಲಿದೆ. ಕೋಲ್ಕತಾ ಮೂಲದ ಎಜಿ ಇಂಪೆಕ್ಸ್ ಎಂಬ ಸಂಸ್ಥೆಗೆ ನಾಣ್ಯದ ಮಾರಾಟದ ಹಕ್ಕು ದೊರೆತಿದ್ದು, 8,001 ಪಾವತಿಸಿ ನಾಣ್ಯಕ್ಕೆ ಬುಕ್ ಮಾಡಬಹುದು. ಗಣೇಶ ಚತುರ್ಥಿಯ ದಿನವಾದ ಸೆ.9ರಂದು ಗಣೇಶನ ವಾಹನ ಮೂಷಿಕದ ಆಕಾರದ ಬಾಕ್ಸ್‌ನಲ್ಲಿಟ್ಟಿರುವ ನಾಣ್ಯವು ನಿಮ್ಮ ಕೈಗೆ ಸೇರಲಿದೆ. ಈ ನಾಣ್ಯವು ಚಲಾವಣೆಯಲ್ಲಿರುವುದಿಲ್ಲ, ಕೇವಲ ಸಂಗ್ರಹಕಾರರಿಗೆಂದೇ ಇದನ್ನು ಮುದ್ರಿಸಲಾಗಿದೆ.
ಮುದ್ರಣ ಎಲ್ಲಿ?
ಜರ್ಮನಿ
ಬಿಡುಗಡೆ ಮಾಡುತ್ತಿರುವುದು
ಐವರಿ ಕೋಸ್ಟ್ ಸರ್ಕಾರ
ತೂಕವೆಷ್ಟು?
25 ಗ್ರಾಂ
ವಿತರಣೆ ಯಾವಾಗ?
ಸೆ.9ರ ಗಣೇಶ ಚತುರ್ಥಿ ಹಬ್ಬದಂದು
ಮಾರಾಟದ ಹಕ್ಕು
ಕೋಲ್ಕತಾದ ಎಜಿ ಇಂಪೆಕ್ಸ್ ಸಂಸ್ಥೆಗೆ
ದರ
8,001
ವೈಶಿಷ್ಟ್ಯವೇನು?
- ಮೊತ್ತಮೊದಲ ಬಾರಿಗೆ ಮುದ್ರಿಸಲಾಗುತ್ತಿರುವ ಗಣೇಶನ ಚಿತ್ರವುಳ್ಳ ನಾಣ್ಯ
- ಶುದ್ಧ ಬೆಳ್ಳಿಯಿಂದ ತಯಾರಿಸಲಾಗಿದೆ
- ಸಂಗ್ರಹಕಾರರಿಗೆಂದೇ ನಾಣ್ಯದ ಮುದ್ರಣ
- ನಾಣ್ಯದ ಒಂದು ಬದಿಯಲ್ಲಿ ಗಣೇಶನ ಬಣ್ಣದ ಚಿತ್ರ, ಮತ್ತೊಂದು ಬದಿಯಲ್ಲಿ ಐವರಿ ಕೋಸ್ಟ್‌ನ ರಾಷ್ಟ್ರಚಿಹ್ನೆ
- ಗಣೇಶನ ಚಿತ್ರದ ಕೆಳಗೆ 'ವಕ್ರತುಂಡ ಮಹಾಕಾಯ...' ಸಂಸ್ಕೃತ ಶ್ಲೋಕ