ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಪತ್ತೆ ಯಂತ್ರ
ಮಂಗಳೂರು: 'ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಪತ್ತೆ ಹಚ್ಚುವ ಯಂತ್ರ ಅಳವಡಿಸಲಾಗುವುದು' ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ. ಜಿಲ್ಲಾಡಳಿತ, ಜಿ.ಪಂ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆರೋಗ್ಯ ಪದ್ಧತಿ ಅಭಿವೃದ್ಧಿ ಮತ್ತು ಸುಧಾರಣಾ ಯೋಜನೆಯಡಿ ನಿರ್ಮಿಸಿದ ಕುಡುಪು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ, ಜನರಿಗೆ ಸರ್ಕಾರ ಮಟ್ಟದ ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಕುರಿತು ನಿರ್ಲಕ್ಷ್ಯವಿದೆ. ಇಲಾಖೆಗೆ ಬರುವ ಜನರನ್ನು ಅಧಿಕಾರಿಗಳು ಪ್ರೀತಿ, ವಿಶ್ವಾಸದಿಂದ ಉಪಚರಿಸಬೇಕಾಗಿದೆ. ರಾಜ್ಯದ ಶೇ.70 ಮಂದಿ ಸರ್ಕಾರಿ ಆಸ್ಪತ್ರೆಗೇ ಬರುತ್ತಾರೆ. ಶೇ.80 ಮಂದಿ ಸಿಬ್ಬಂದಿ ಒಳ್ಳೆಯವರಾಗಿದ್ದು, ಇನ್ನುಳಿದ ಶೇ.20 ಅಪ್ರಾಮಾಣಿಕ ಸಿಬ್ಬಂದಿಯಿಂದ ಇಲಾಖೆಗಳಿಗೆ ಕೆಟ್ಟ ಹೆಸರು ಬರುತ್ತಿದೆ ಎಂದರು. ಆರೋಗ್ಯ ಇಲಾಖೆಗೆ ಆಸ್ಪತ್ರೆ ಕಟ್ಟುವುದು ಮುಖ್ಯ ಅಲ್ಲ. ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸುವುದು ಮುಖ್ಯ. ಇನ್ನು ಮುಂದೆ ಕಟ್ಟಡದಲ್ಲಿ ಸವಲತ್ತುಗಳಿದ್ದಾಗ ಮಾತ್ರ ರೋಗಿಗಳನ್ನು ದಾಖಲಿಸಿಕೊಳ್ಳಬೇಕು. ಸ್ಪಚ್ಛತೆ ಕಾಪಾಡಿ, ರೋಗ ಬರುವ ಮುಂಚೆ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಹೊಟೇಲ್ ಸಿಬ್ಬಂದಿಗೆ ಆರೋಗ್ಯ ಪ್ರಮಾಣ ಪತ್ರ: ವಿವಿಧೆಡೆಯಿಂದ ಹೊಟೇಲ್ಗಳಲ್ಲಿ ಕೆಲಸ ಮಾಡಲು ಸಿಬ್ಬಂದಿ ಬರುತ್ತಾರೆ. ಅವರ ಆರೋಗ್ಯದ ಕುರಿತು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಮಾಣ ಪತ್ರ ಪಡೆದುಕೊಳ್ಳಬೇಕಾಗುತ್ತದೆ. ಹೊಟೇಲ್ ಮಾಲೀಕರು ಆರೋಗ್ಯವಂತರನ್ನೇ ನೇಮಿಸಿಕೊಳ್ಳಬೇಕು. ಇಲ್ಲವಾದಲ್ಲಿ ಮಾಲೀಕರ ವಿರುದ್ಧ ಆಹಾರ ಸುರಕ್ಷತಾ ಕಾಯ್ದೆಯಡಿ ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಸಿದರು.