ಅತ್ಯಾಚಾರ: ಜಾಮೀನು ನಕಾರ
ಬೆಂಗಳೂರು: ತೋಟಕ್ಕೆ ನುಗ್ಗಿದ ಎಮ್ಮೆ ತೋರಿಸುವ ನೆಪದಲ್ಲಿ 60 ವರ್ಷದ ವೃದ್ಧೆಯನ್ನು ಕರೆದೊಯ್ದು ಅತ್ಯಾಚಾರ ಎಸಗಿದ 45 ವರ್ಷದ ವ್ಯಕ್ತಿಗೆ ಹೈಕೋರ್ಟ್ ಜಾಮೀನು ನಿರಾಕರಿಸಿದೆ. ಜಾಮೀನು ಕೋರಿ ರಾಮಚಂದ್ರಪ್ಪ ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ನಾಗಮೋಹನದಾಸ್ ಅವರಿದ್ದ ಏಕಸದಸ್ಯ ಪೀಠ ಜಾಮೀನು ನೀಡಲು ನಿರಾಕರಿಸಿದೆ. ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಜೋಡಿಗುಬ್ಬಿಹಳ್ಳಿ ನಿವಾಸಿ ರಾಮಚಂದ್ರಪ್ಪ ಎಂಬಾತ ನೆರೆಯ ಬೊಂಡಿಗನಹಳ್ಳಿಯಲ್ಲಿನ ಹೊಲದಲ್ಲಿ ದನ ಮೇಯಿಸುತ್ತಿದ್ದ ವೃದ್ಧೆಯ ಬಳಿ, ನಿಮ್ಮ ಎಮ್ಮೆ ನಮ್ಮ ಹೊಲಕ್ಕೆ ನುಗ್ಗಿ ಬೆಳೆ ನಾಶ ಮಾಡುತ್ತಿದೆ ಎಂದು ಆರೋಪಿಸಿದ್ದನು. ಇದನ್ನು ಒಪ್ಪಲು ವೃದ್ಧೆ ನಿರಾಕರಿಸಿದಾಗ ಪ್ರತ್ಯಕ್ಷ ತೋರಿಸುವುದಾಗಿ ಕರೆದೊಯ್ದು ಕೆರೆಯ ಬಳಿ ಆಕೆ ಮೇಲೆ ಅತ್ಯಾಚಾರ ಎಸಗಿದ್ದ. ಇದನ್ನು ವೃದ್ಧೆಯ 9 ವರ್ಷದ ಮೊಮ್ಮಗ ಗಮನಿಸಿದ್ದ. ನಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.