ನಮ್ಮಲ್ಲಷ್ಟೇ ಭ್ರಷ್ಟರಿಲ್ಲ, ಬೇರೆ ದೇಶದಲ್ಲೂ ಮೀರಿಸುವ ಭ್ರಷ್ಟರು ಇದ್ದಾರೆ ನೋಡಿ!
ಭ್ರಷ್ಟಾಚಾರದ ವಿಷಯದಲ್ಲಿ ಭಾರತದ ರಾಜಕಾರಣಿಗಳನ್ನು ಇನ್ನೂ ಅಂಬೆಗಾಲಿಡುತ್ತಿರುವವರು ಎಂದು ಹೇಳಬಹುದೇನೋ. 2ಜಿ ಹಗರಣ, ರೇಲ್ವೆ ಹಗರಣ... ಹೀಗೆ ಸರಣಿಯೋಪಾದಿಯಲ್ಲಿ ಹಗರಣಗಳು ಬಂದರೂ ಕೂಡ ಭಾರಿ ಮೊತ್ತದ ಭ್ರಷ್ಟಾಚಾರಗಳು ಕಂಡಿಲ್ಲ(ಆದರೆ ಇದು ಹೆಗ್ಗಳಿಕೆ ವಿಚಾರವಲ್ಲ). ಆದರೆ ಬೇರೆ ಬೇರೆ ದೇಶಗಳ ಕೆಲ ನಿರುಂಕುಶಾಧಿಕಾರಿಗಳು ಇದ್ದಾರೆ. ಇವರ ಕೆಲಸ ಹಣ ಕೊಳ್ಳೆ ಹೊಡೆಯುವುದೇ ಆಗಿದೆ. ಇವರಿಗೆ ಹೋಲಿಕೆ ಮಾಡಿದರೆ, ನಮ್ಮವರೇ ಪರವಾಗಿಲ್ಲ ಎನ್ನಬಹುದೇನೋ.
ಮಹಮ್ಮದ್ ಗಡಾಫಿ
ದೇಶ: ಲಿಬಿಯಾ (1969-2011)
ಲೂಟಿಯ ಶೈಲಿ: ಗಡಾಫಿಗೆ ಬಂಗಾರವೆಂದರೆ ಪಂಚಪ್ರಾಣ. ಈತ ಬಂಗಾರದಲ್ಲೇ ಮಾಡಿದ್ದ ಪಿಸ್ತೂಲ್ ಖರೀದಿ ಮಾಡಿದ್ದ ಎಂದರೆ, ಈತನ ವ್ಯಾಮೋಹ ಅರ್ಥವಾದೀತು. ಇದಷ್ಟೇ ಅಲ್ಲ, ಟೀ ತರುವ ಟ್ರೋಲಿ ಕೂಡ ಬಂಗಾರದ ಕೋಟಿಂಗ್ ಹಾಕಲಾಗಿತ್ತು. ಈತನ ಅರಮನೆಯಲ್ಲಿ ಎಷ್ಟೋ ವಸ್ತುಗಳು ಬಂಗಾರದ ಮಾಡಿಸಿದ್ದವಾಗಿದ್ದವು, ಇಲ್ಲವೇ ಬಂಗಾರದ ಕೋಟಿಂಗ್ಗೆ ಒಳಗಾದವಾಗಿದ್ದವು.
ಮೋಬುತು ಸೆಸೆ ಸೆಕೋ
ದೇಶ : ಝೈರೋ (1965-97)
ಲೂಟಿಯ ಶೈಲಿ: ಝೈರೋದ ಈ ಮಾಜಿ ಅಧ್ಯಕ್ಷ ಓಡಾಡುತ್ತಿದ್ದುದೇ ಮರ್ಸಿಡಿಸ್ ಬೆಂಜ್ ಕಾರುಗಳಲ್ಲಿ. ಯುರೋಪಿಯನ್ ವಿಲ್ಲಾಗಳಲ್ಲಿ ಉಳಿದುಕೊಳ್ಳುವುದು, ಫ್ರಾನ್ಸ್ನಿಂದ ಕೇಕ್ ತರಿಸುವುದು ಈತನ ಮೆಚ್ಚಿನ ಸಂಗತಿ. ಈತನಿಗೆ ಪಿಂಕ್ ಶಾಂಪೇನ್ ಎಂದರೆ ಬಲು ಅಚ್ಚುಮೆಚ್ಚಂತೆ.
ಹೋಸ್ನಿ ಮುಬಾರಕ್
ದೇಶ : ಈಜಿಪ್ಟ್ (1981-2011)
ಲೂಟಿಯ ಶೈಲಿ: ಈತನಿಗೆ ಆಸ್ತಿ ಮೇಲೆ ಬಲು ಪ್ರೀತಿ. ಹೀಗಾಗಿಯೇ ರಿಯಲ್ ಎಸ್ಟೇಟ್ ಮೇಲೆ ಕಣ್ಣುಬಿದ್ದಿತ್ತು. ಭ್ರಷ್ಟಾಚಾರದಿಂದ ಬಂದ ಬಹುಪಾಲು ಹಣವನ್ನು ಈತ ರಿಯಲ್ ಎಸ್ಟೇಟ್ನಲ್ಲೇ ಹೂಡಿದ್ದ. ಶರ್ಮ್ ಎಲ್ ಶೇಕ್, ಮಾರ್ಷಾ ಮಟ್ರೋನಲ್ಲಿ ವಿಲ್ಲಾ ಮತ್ತು ಅಪಾರ್ಟ್ಮೆಂಟ್ ಹೊಂದಿದ್ದ. ಮಕ್ಕಳು ಈಜಿಪ್ಟ್ನಾದ್ಯಂತ 34 ಐಶಾರಾಮಿ ಅಪಾರ್ಟ್ಮೆಂಟ್ ಹೊಂದಿದ್ದರು. ಇದರಲ್ಲಿ ಸ್ವಿಸ್ ಬ್ಯಾಂಕಿನ 300 ದಶಲಕ್ಷ ಡಾಲರ್ ಸೇರಿಸಿಲ್ಲ.
ಸುಹಾರ್ತೋ
ದೇಶ : ಇಂಡೋನೇಶಿಯಾ (1967-98)
ಲೂಟಿಯ ಶೈಲಿ: ಎಕ್ಸ್ಪ್ರೆಸ್ ವೇಗಳು, ಕಾರುಗಳ ಕಾರ್ಖಾನೆಗಳು, ಸಿನಿಮಾ ಮಂದಿರಗಳ ಮಾಲೀಕತ್ವದಲ್ಲಿ ಈತನ ಮಕ್ಕಳು ಮತ್ತು ಸಂಬಂಧಿಕರೇ ತುಂಬಿಕೊಂಡಿದ್ದರು. ಇಡೀ ಇಂಡೋನೇಶಿಯಾದಲ್ಲಿ ಸುಹಾರ್ತೋನೇ ಅತ್ಯಂತ ಹೆಚ್ಚು ಭೂಮಿ ಇಟ್ಟುಕೊಂಡಿರುವ ವ್ಯಕ್ತಿಯಂತೆ.
ಫೇರ್ಡಿನಾಂಡ್ ಮತ್ತು ಇಮೆಲ್ಡಾ ಮಾರ್ಕೋಸ್
ಲೂಟಿ: 5-10 ಶತಕೋಟಿ ಡಾಲರ್
ದೇಶ - ಫಿಲಿಪ್ಪಿನ್ಸ್ (1981-2011)
ಲೂಟಿಯ ಶೈಲಿ: ಫಿಲಿಪಿನೋದ ಈ ಶಕ್ತಿಶಾಲಿ ಮನುಷ್ಯ ಮತ್ತು ಈತನ ಹೆಂಡತಿ ಭ್ರಷ್ಟರಲ್ಲಿ ಭ್ರಷ್ಟರು ಎಂದರೆ ತಪ್ಪಾಗದು. ರಾಷ್ಟ್ರೀಯ ಕೈಗಾರಿಕೆಗಳನ್ನು ತನ್ನ ಹತ್ತಿದವರ ಸುಪರ್ದಿಗೆ ನೀಡಿಬಿಟ್ಟಿದ್ದ. ಫೆರ್ಡಿನಾಂಡ್ನ ಪತ್ನಿಯಂತೂ ಐಶಾರಾಮಿ ಜೀವನವನ್ನೇ ಒತ್ತೆ ಇಟ್ಟುಕೊಂಡಿದ್ದಳು! ಭಾರಿ ಶಾಪಿಂಗ್ ಟೂರ್, 2500 ಶೂಗಳು, ಅಮೆರಿಕದಲ್ಲಿ ಮಲ್ಟಿ ಮಿಲಿಯಲ್ ಡಾಲರ್ ಮೌಲ್ಯದ ಐಶಾರಾಮಿ ಅಪಾರ್ಟ್ಮೆಂಟ್ಗಳು ಈಕೆಯ ಹೆಸರಲ್ಲಿದ್ದವು.
ಕೃಪೆ: ಹೆಡ್ಲೈನ್ಸ್ ಟುಡೇ