ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಜೈ ಅಹಿಂದ ಬಜೆಟ್

ಸಹಕಾರ ಸಂಸ್ಥೆಗಳ ಮೂಲಕ ರೈತರು ಪಡೆಯುವ ಬಡ್ಡಿ ರಹಿತ ಬೆಳೆ ಸಾಲದ ಮಿತಿ 2 ಲಕ್ಷಕ್ಕೆ ಏರಿಕೆ. 2ರಿಂದ 3 ಲಕ್ಷದವರೆಗಿನ ಬೆಳೆ ಸಾಲಕ್ಕೆ ಶೇ.1ರ ಬಡ್ಡಿ....

Mainashree
Updated On : 13 Jul 2013, 12:21 pm

ಬಜೆಟ್ ಮೊತ್ತ    1,21,611
ರಾಜಸ್ವ ವೆಚ್ಚ        ರಾಜಸ್ವ ವೆಚ್ಚ
ಸಾಲ ವಾಪಸ್    24,220
ಆದಾಯ         1,20,717
ರಾಜಸ್ವ ಜಮೆ        97,986
ಸಾಲ, ಬಂಡವಾಳ    22,731
 ಬಜೆಟ್ ಕೊರತೆ     894
ರಾಜಸ್ವ ಹೆಚ್ಚುವರಿ    596
ವಿತ್ತೀಯ ಕೊರತೆ    17,449  ಕೋಟಿ ರು.ಗಳಲ್ಲಿ

ಹೊಸ ಕಾರ್ಯಕ್ರಮ...
-ಸಹಕಾರ ಸಂಸ್ಥೆಗಳ ಮೂಲಕ ರೈತರು ಪಡೆಯುವ ಬಡ್ಡಿ ರಹಿತ ಬೆಳೆ ಸಾಲದ ಮಿತಿ 2 ಲಕ್ಷಕ್ಕೆ ಏರಿಕೆ. 2ರಿಂದ 3 ಲಕ್ಷದವರೆಗಿನ ಬೆಳೆ ಸಾಲಕ್ಕೆ ಶೇ.1ರ ಬಡ್ಡಿ
- ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಗೆ ಹೆಣ್ಣು ಮಕ್ಕಳ ದಾಖಲಾತಿ ಮತ್ತು ಹಾಜರಾತಿ ಉತ್ತೇಜಿಸಲು ಹೆಣ್ಣು ಮಕ್ಕಳಿಗೆ ಪ್ರತಿ ದಿನದ ಹಾಜರಾತಿಗೆ 2 ಪ್ರೋತ್ಸಾಹಧನ
- ಸಹಕಾರ ಸಂಘಗಳಲ್ಲಿ ನೇಕಾರರು ಮಾಡಿರುವ 25 ಸಾವಿರದವರೆಗಿನ ಸಾಲ ಮನ್ನಾ
- ಕುರಿ ಸಾಕಣೆ ಮತ್ತು ಕಂಬಳಿ ನೇಕಾರರಿಗೆ ಶೇ.4ರ ಬಡ್ಡಿ ದರದಲ್ಲಿ 1 ಲಕ್ಷದವರೆಗೆ ಸಾಲ
- ಕೃಷಿ ಬೆಲೆ ಆಯೋಗ, ವಿಕೋಪ ಉಪಶಮನ ನಿಧಿ ಸ್ಥಾಪನೆ
- 1 ಸಾವಿರ ಕೋಟಿ ಮೊತ್ತದ ಕೃಷಿ ಬೆಂಬಲ ಬೆಲೆ ಆವರ್ತನಿಧಿ
- ಪ್ರತಿ ಕೆ.ಜಿ. ರೇಷ್ಮೆ ಬಿತ್ತನೆ ಗೂಡಿಗೆ 20 ಪ್ರೋತ್ಸಾಹಧನ
- 2 ಸಾವಿರ ಮೀನುಗಾರರಿಗೆ 'ಫೈಬರ್‌ಗ್ಲಾಸ್‌' ಹರಿಗೋಲು ನೀಡುವ ಯೋಜನೆ
- ವಾಣಿಜ್ಯ ಮತ್ತು ಗ್ರಾಮೀಣ ಪ್ರಾದೇಶಿಕ ಬ್ಯಾಂಕ್‌ಗಳಲ್ಲಿ ಮೀನುಗಾರರಿಗೆ ಶೇ.2ರ ಬಡ್ಡಿ ದರದಲ್ಲಿ 50 ಸಾವಿರದವರೆಗೆ ಸಾಲ
- 40 ವರ್ಷ ದಾಟಿದ ಅವಿವಾಹಿತ ಮತ್ತು ವಿಚ್ಛೇದಿತ ಮಹಿಳೆಯರಿಗೆ 500 ಮಾಸಾಶನ ಒದಗಿಸುವ 'ಮನಸ್ವಿನಿ' ಯೋಜನೆ
- ಲೈಂಗಿಕ ಅಲ್ಪಸಂಖ್ಯಾತರಿಗೆ 500 ಮಾಸಾಶನ ಒದಗಿಸುವ 'ಮೈತ್ರಿ' ಯೋಜನೆ
- ಪ್ರತ್ಯೇಕ ಅಂತರ್ಜಲ ನಿರ್ದೇಶನಾಲಯ, ಕೆರೆ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ

ಏರಿಕೆ -ಇಳಿಕೆ

ಯಾರ್ಯಾರಿಗೆ ಏನೇನು?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement