ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬಂದೂಕಿನ ಗುಂಡು ನನ್ನನ್ನು ಸುಮ್ಮನಾಗಿಸಲಿಲ್ಲ: ಮಲಾಲ

ವಿಶ್ವಸಂಸ್ಥೆ: ಬಂದೂಕಿನಿಂದ ಹೊರಬಂದ ಗುಂಡು ನಮ್ಮನ್ನು ಸುಮ್ಮನಿರಿಸಬಹುದೆಂದು ತಾಲಿಬಾನಿಗಳು ನಂಬಿದ್ದರು. ಆದರೆ ಅವರ ಯೋಚನೆ ವಿಫಲವಾಯಿತು...

Mainashree
Updated On : 13 Jul 2013, 12:12 pm

ವಿಶ್ವಸಂಸ್ಥೆ: ಬಂದೂಕಿನಿಂದ ಹೊರಬಂದ ಗುಂಡು ನಮ್ಮನ್ನು ಸುಮ್ಮನಿರಿಸಬಹುದೆಂದು ತಾಲಿಬಾನಿಗಳು ನಂಬಿದ್ದರು. ಆದರೆ ಅವರ ಯೋಚನೆ ವಿಫಲವಾಯಿತು...!
ಇದು ತಾಲಿಬಾನಿಗಳ ಗುಂಡೇಟಿಗೆ ತುತ್ತಾಗಿ, ಬದುಕಿಬಂದ ಧೈರ್ಯವಂತ ಬಾಲಕಿ ಮಲಾಲಾ ಯೂಸುಫ್‌ಝಾಯ್ ಅವರ ಮಾತು.
16ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ ಮಲಾಲ, ಹೆಣ್ಣು ಮಕ್ಕಳು ಶಾಲೆಗೆ ಹೋಗಿ ಕಲಿಯಬೇಕು ಎಂಬ ಕರೆ ನೀಡಿದರು. ಇದೇ ಸಂದರ್ಭದಲ್ಲಿ ವಿಶ್ವಸಂಸ್ಥೆ ಜು.12 ಅನ್ನು ಮಲಾಲ ದಿನವೆಂದು ಕರೆದು ಆಕೆಗೆ ಗೌರವ ನೀಡಿತು.
ಭಯೋತ್ಪಾದಕರು ನನ್ನ ಗುರಿ ಮತ್ತು ಆಕಾಂಕ್ಷೆಗಳನ್ನು ಬದಲಾಯಿಸುವ ಪ್ರಯತ್ನ ಮಾಡಿದರು. ಆದರೆ ನನ್ನಲ್ಲಿ ಏನನ್ನೂ ಬದಲಾಯಿಸಲು ಆಗಲಿಲ್ಲ. ಬದಲಾಗಿ, ನನ್ನಲ್ಲಿದ್ದ ದೌರ್ಬಲ್ಯ, ಭಯ ಮತ್ತು ಹತಾಶಮನೋಭಾವ ಹೋಗಿಸುವಲ್ಲಿ ನೆರವಾದರು.  ಒಂದು ಮಗು, ಒಬ್ಬ ಶಿಕ್ಷಕ, ಒಂದು ಪುಸ್ತಕ ಮತ್ತು ಒಂದು ಪೆನ್ ಇಡೀ ಜಗತ್ತನ್ನೇ ಬದಲಾಯಿಸಬಲ್ಲದು. ಭಯೋತ್ಪಾದನೆ ಸೇರಿದಂತೆ ಇಂದಿನ ಎಲ್ಲಾ ಸಮಸ್ಯೆಗಳಿಗೂ ಶಿಕ್ಷಣವೇ ಪರಿಹಾರ ಎಂದು ಹೇಳುವ ಮೂಲಕ ವಿಶ್ವಸಂಸ್ಥೆಯಲ್ಲಿ ಸೇರಿದ್ದ ಹಲವಾರು ರಾಷ್ಟ್ರಗಳ ಪ್ರತಿನಿಧಿಗಳ ಪಾಲಿಗೆ ಕಣ್ಮಣಿಯಾದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement