ನವದೆಹಲಿ: ಬೋಫೋರ್ಸ್ ಹಗರಣದ ಸೂತ್ರದಾರ, ಇಟಲಿಯ ಉದ್ಯಮಿ ಒಟ್ಟಾವಿಟೋ ಕ್ವಟ್ರೋಕಿ ನಿಧನರಾಗಿದ್ದಾರೆ. ಶುಕ್ರವಾರ ರಾತ್ರಿ ಮಿಲಾನ್ನಲ್ಲಿ ತೀವ್ರ ಹೃದಯಾಘಾತದಿಂದಾಗಿ ಅವರು ಮೃತರಾಗಿದ್ದಾರೆ ಎಂದು ಮೂಲಗಳು ಹೇಳಿವೆ. 72 ವರ್ಷ ವಯಸ್ಸಿನ ಕ್ವಟ್ರೋಕಿ ಭಾರತದ ಪಾಲಿಗೆ ವಿಲನ್. ಬೋಪೋರ್ಸ್ ಹಗರಣದ ಸಂಬಂಧ ಸಿಬಿಐ ಕ್ವಟ್ರೋಕಿಯನ್ನು ಭಾರತಕ್ಕೆ ಗಡೀಪಾರು ಮಾಡಿಕೊಳ್ಳಲು ಎರಡು ಬಾರಿ ಯತ್ನಿಸಿತ್ತು. ಆದರೆ ಒಮ್ಮೆ ಮಲೇಷ್ಯಾ, ಮಗದೊಮ್ಮೆ ಅರ್ಜೆಂಟೀನಾ ದೇಶಗಳು ಈ ಕೋರಿಕೆಯನ್ನು ತಿರಸ್ಕರಿಸಿದ್ದವು. ಹೀಗಾಗಿ ಕ್ವಟ್ರೋಕಿ ಎಗ್ಗಿಲ್ಲದೇ ತಿರುಗಾಡಿಕೊಂಡಿದ್ದರು. 1986ರಲ್ಲಿ ಸ್ವಿಜರ್ಲೆಂಡ್ನ ಶಸ್ತ್ರಾಸ್ತ್ರ ತಯಾರಕ ಕಂಪನಿ ಬೋಪೋರ್ಸ್ ಜೊತೆ ಭಾರತ 1500 ಕೋಟಿ ಮೌಲ್ಯದ ಒಪ್ಪಂದ ಮಾಡಿಕೊಂಡಿತ್ತು. ಈ ಕಂಪನಿ ಭಾರತಕ್ಕೆ ಹೋವಿಟ್ಜರ್ ಗನ್ಗಳನ್ನು ಪೂರೈಸಿತ್ತು. ಈ ಒಪ್ಪಂದದ ಮಧ್ಯವರ್ತಿಯಾಗಿ ಕ್ವಟ್ರೋಕಿ ವರ್ತಿಸಿದ್ದರು. ಕ್ವಟ್ರೋಕಿಯನ್ನು ಗಾಂಧೀ ಕುಟುಂಬದ ಸ್ನೇಹಿತ ಎಂದೇ ಭಾವಿಸಲಾಗಿತ್ತು.