ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಧ್ವನಿ ತಂತ್ರಜ್ಞ ಬೋಸ್ ನಿಧನ

ವಿಶ್ವಪ್ರಸಿದ್ಧ ಧ್ವನಿವರ್ಧಕ ಸಂಸ್ಥೆ...

Mainashree
Updated On : 14 Jul 2013, 1:04 am

ಬೋಸ್ಟನ್: ವಿಶ್ವಪ್ರಸಿದ್ಧ ಧ್ವನಿವರ್ಧಕ ಸಂಸ್ಥೆ ಬೋಸ್ ಕಾರ್ಪೊರೇಷನ್‌ನ ಸಂಸ್ಥಾಪಕ, ಧ್ವನಿ ವಿಜ್ಞಾನದ ಪ್ರವರ್ತಕ ಭಾರತೀಯ- ಅಮೆರಿಕನ್ ಉದ್ಯಮಿ ಅಮರ್ ಜಿ. ಬೋಸ್(83) ಮಸ್ಸಾಚುಸೆಟ್ಸ್‌ನ ತಮ್ಮ ನಿವಾಸದಲ್ಲಿ ಶುಕ್ರವಾರ ನಿಧನರಾಗಿದ್ದಾರೆ. ಬೋಸ್ ಸಾವನ್ನು ಬೋಸ್ ಕಾರ್ಪೊರೇಷನ್ಸ್‌ನ ಅಧ್ಯಕ್ಷ ಬಾಬ್ ಮರೆಸ್ಕಾ ಖಚಿತಪಡಿಸಿದ್ದಾರೆ.
ಎಂಐಟಿ ವಿದ್ಯಾರ್ಥಿ: ನ.2, 1929ರಲ್ಲಿ ಫಿಲಿಡೆಲ್ಫಿಯಾದಲ್ಲಿ ಜನಿಸಿದ ಬೋಸ್ ಅವರ ತಂದೆ ನೊನಿ ಗೋಪಾಲ್ ಬೋಸ್ ಬಂಗಾಳ ಮೂಲದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದವರು. ಬ್ರಿಟಿಷ್ ಆಡಳಿತಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ನೊನಿ ಅವರಿಗೆ ಜೈಲು ಶಿಕ್ಷೆಗೆ ಗುರಿಯಾಗಿದ್ದರು.ಹೇಗೋ ತಪ್ಪಿಸಿಕೊಂಡ ನೊನಿ 1920ರಲ್ಲಿ ಅಮೆರಿಕಕ್ಕೆ ಪಲಾಯನ ಮಾಡಿದ್ದರು.
ತಂದೆಯಂತೆ ಅಮರ್ ಬೋಸ್ ಕೂಡ ಎಂಜಿನಿಯರಿಂಗ್ ಕ್ಷೇತ್ರದತ್ತ ಆಸಕ್ತಿ ಹೊಂದಿದ್ದರು. ಅದರಂತೆ ಅಮೆರಿಕದ ಮಸ್ಸಾಚುಸೆಟ್ಸ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಶಿಕ್ಷಣ ಪಡೆದಿದ್ದ ಬೋಸ್ ನಂತರ ಬೋಸ್ ಸಂಸ್ಥೆ ಹುಟ್ಟುಹಾಕಿದರು. ಇದರ ಮೂಲಕ ಧ್ವನಿ ವಿಜ್ಞಾನ ಕ್ಷೇತ್ರದಲ್ಲಿ ಆವಿಷ್ಕಾರಿ ಸಂಶೋಧನೆಗಳಿಗೆ ಕೈ ಹಾಕಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement