ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ರಾಜ್ಯದ ಅಲ್ಲಲ್ಲಿ ಚುರುಕಾಯಿತು ಮಳೆ

Mainashree
Updated On : 13 Jul 2013, 10:26 am

ಬೆಂಗಳೂರು: ರಾಜ್ಯದ ಹಲವೆಡೆ ಮಳೆಯ ಆರ್ಭಟ ಮುಂದುವರಿದಿದ್ದು, ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಂುತ್ತಿರುವುದರಿಂದ ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ರಾಜಾಪುರ ಬ್ಯಾರೇಜಿನಿಂದ 62 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಕೊಂಕಣ ಪ್ರದೇಶದಲ್ಲಿ ಸುರಿಂುತ್ತಿರುವ ಮಳೆಯಿಂದ ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಸಾಮಾನ್ಯಕ್ಕಿಂತ 1 ಅಡಿ ನೀರು ಏರಿಕೆಯಾಗಿದ್ದರಿಂದ ಚಿಕ್ಕೋಡಿ ತಾಲೂಕಿನ ಆರು ಗ್ರಾಮಗಳ ಸೇತುವೆಗಳು ಮುಳುಗಿ ಸಂಪರ್ಕ ಕಡಿತಗೊಂಡಿವೆ ಎಂದು ಚಿಕ್ಕೋಡಿ ತಹಸೀಲ್ದಾರ್ ರಾಜಶೇಖರ ಡಂಬಳ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಸಂಪರ್ಕ ಕಡೆದುಕೊಂಡ ಗ್ರಾಮಗಳು: ಸದಲಗಾ-ಬೋರಗಾಂವ, ಜತ್ರಾಟ-ಭೀವಶಿ, ಕಲ್ಲೋಳ-ಂುಡೂರ, ಅಕ್ಕೋಳ-ಸಿದ್ನಾಳ, ಕಾರದಗಾ-ಭೋಜ ಮತ್ತು ಭೋಜವಾಡಿ-ಹುನ್ನರಗಿ ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿವೆ. ಈ ಗ್ರಾಮಗಳ ಜನತೆಗೆ ಪಂರ್ಾಂು ರಸ್ತೆಗಳ ಅನುಕೂಲ ಇರುವುದರಿಂದ ಸಂಚಾರಕ್ಕೆ ಂಾವುದೇ ತೊಂದರೆಯಾಗಿಲ್ಲ.  ಹಿಪ್ಪರಗಿ ಬ್ಯಾರೇಜ್ನಿಂದ 12 ಗೇಟ್ಗಳನ್ನೂ ತೆರೆಯಲಾಗಿದೆ. ಆಲಮಟ್ಟಿ ಜಲಾಶಂುದಿಂದ 53 ಸಾವಿರ ಕ್ಯುಸೆಕ್ ನೀರನ್ನು ಹೊರ ಬಿಡುತ್ತಿರುವುದರಿಂದ ಂಾವುದೇ ತರಹದ ಪ್ರವಾಹ ಪರಿಸ್ಥಿತಿ ಇಲ್ಲ.
ಮಲೆನಾಡಲ್ಲೂ ಮಳೆ: ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಮತ್ತೆ ಚುರುಕಾಗಿದ್ದು, ಆಗುಂಬೆಯಲ್ಲಿ ಅತ್ಯಧಿಕ 109 ಮಿ.ಮೀ.ಮಳೆಯಾಗಿದೆ. ಹೊಸನಗರ ವ್ಯಾಪ್ತಿಯ ಮಾಣಿ ಡ್ಯಾಂ ವ್ಯಾಪ್ತಿಯಲ್ಲಿ 95 ಮಿ.ಮೀ, ಹುಲಿಕಲ್ನಲ್ಲಿ 81 ಮಿ.ಮೀ, ಮಾಸ್ತಿಕಟ್ಟೆಯಲ್ಲಿ 70 ಮಿ.ಮೀ ಮಳೆಯಾಗಿದೆ.  ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರಿದಿರುವುದರಿಂದ ಜಿಲ್ಲೆಯ ಪ್ರಮುಖ ನದಿಗಳಾದ ತುಂಗಾ, ಭದ್ರಾ, ಶರಾವತಿ, ಮಾಲತಿ, ವರದಾ, ಕುಮದ್ವತಿ ನದಿಗಳ ಹರಿವು ಕೊಂಚ ಏರಿದೆ. ಹಾಸನದ ಹೇಮಾವತಿ ಜಲಾಶಯಕ್ಕೆ 11 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ ಈಗ 3,200 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ. ಕೊಡಗಿನಲ್ಲಿ ಮಳೆಯ ಆರ್ಭಟ ಮುಂದುವರಿಸಿದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿಯೂ ಉತ್ತಮ ಮಳೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement