ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮರಾಠಿ ಸಾಹಿತಿ ಮಾಧವಿ ದೇಸಾಯಿ ನಿಧನ

Mainashree
Updated On : 16 Jul 2013, 12:21 pm

ಬೆಳಗಾವಿ: ಖ್ಯಾತ ಮರಾಠಿ ಸಾಹಿತಿ ಮಾಧವಿ ದೇಸಾಯಿ (80) ಸೋಮವಾರ ನಗರದಲ್ಲಿ ನಿಧನರಾದರು. ದಾದಾಸಾಹೇಬ ಪಾಲ್ಕೆ ಪ್ರಶಸ್ತಿ ಪುರಸ್ಕೃತ ಮರಾಠಿ ಚಲನಚಿತ್ರ ನಿರ್ದೇಶಕ ಭಾಲ್ಜಿ ಪೆಡಣೇಕರ ಮತ್ತು ಚಿತ್ರತಾರೆ ಲೀಲಾಬಾಯಿ ದಂಪತಿ ಪುತ್ರಿಯಾಗಿರುವ ಮಾಧವಿ ಸಣ್ಣ ಕಥೆ, ಕವನ ಸಂಕಲನ, ಪ್ರವಾಸ ಕಥನ, ಕಾದಂಬರಿ ಸೇರಿದಂತೆ 35ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಮುಂದಿನವಾರವೇ ಅವರ ಎರಡು ಕೃತಿಗಳ ಬಿಡುಗಡೆ ಸಮಾರಂಭವನ್ನು  ಬೆಳಗಾವಿಯಲ್ಲಿ ಆಯೋಜಿಸಲಾಗಿತ್ತು.  ಅವರ ಆತ್ಮಚರಿತ್ರೆ 'ನಾಛಗಾ ಗ ಘುಮಾ' ಕೃತಿ ಸಾಹಿತ್ಯಿಕ ವಲಯದಲ್ಲಿ ತೀವ್ರ ವಿವಾದಕ್ಕೆ ಒಳಗಾಗಿತ್ತು. 'ನಾಛಗಾ ಗ ಘುಮಾ' ಮತ್ತು 'ಏಕ ರಾಜಾಚಿ ಗೋಸ್ಟ್‌' ಕೃತಿಗಳನ್ನು ಚಂದ್ರಕಾಂತ ಪೋಕಳೆ ಹಾಗೂ ಡಾ.ಸರಜೂ ಕಾಟ್ಕರ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇತ್ತೀಚೆಗಷ್ಟೇ ಗೋವಾಕ್ಕೆ ತೆರಳಿದ್ದ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಳಗಾವಿಗೆ ಮರಳಿದ್ದರು. ಮಾಧವಿ ಅವರು ಕಡೋಲಿ ಗ್ರಾಮೀಣ ಮರಾಠಿ ಸಾಹಿತ್ಯ ಸಮ್ಮೇಳನವನ್ನು ಸಂಘಟಿಸಿದ್ದರು. ಅಲ್ಲದೇ, ಪ್ರತಿ ವರ್ಷ ಮರಾಠಿ ಬಹುಭಾಷಿಕ ಪ್ರದೇಶಗಳಲ್ಲಿ ಮರಾಠಿ ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸುತ್ತ ಬಂದಿದ್ದ ಮಾಧವಿ ಅವರಿಗೆ ಪ್ರತಿಷ್ಠಿತ ಕುಸುಮರಾಜ ಸಾಹಿತ್ಯ ಪ್ರಶಸ್ತಿ ಹಾಗೂ ದಾಮನಿ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ದೊರೆತಿವೆ. ಮೃತರಿಗೆ ಮರಾಠಿ ಕವಿಯತ್ರಿ ಮೀರಾ ಸೇರಿದಂತೆ ಮೂವರು ಪುತ್ರಿಯರಿದ್ದಾರೆ. ಶಹಾಪುರದ ಸ್ಮಶಾನಭೂಮಿಯಲ್ಲಿ ಮಂಗಳವಾರ ಬೆಳಗ್ಗೆ 11 ಗಂಟೆಗೆ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement