ಮೇಲ್ಮನೆ 1 ಸ್ಥಾನಕ್ಕೆ ಆ.22ಕ್ಕೆ ಬೈ ಎಲೆಕ್ಷನ್
ನವದೆಹಲಿ: ಕರ್ನಾಟಕ ವಿಧಾನಪರಿಷತ್ನ ಒಂದು ಸ್ಥಾನಕ್ಕಾಗಿ ಆ.22ರಂದು ಉಪಚುನಾವಣೆ ನಡೆಯಲಿದೆ. ಮೈಸೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ವಿಧಾನಸಭೆ ಚುನಾವಣೆಗೆ ಮುನ್ನ ಕೆ. ಆರ್. ಮಲ್ಲಿಕಾರ್ಜುನಪ್ಪ ರಾಜಿನಾಮೆ ಸಲ್ಲಿಸಿ, ಬಿಜೆಪಿ ತೊರೆದು ಕೆಜೆಪಿ ಸೇರಿದ್ದರು. ಇದರಿಂದ ತೆರವಾದ ಸ್ಥಾನಕ್ಕೆ ಈಗ ಚುನಾವಣೆ ನಡೆಯಲಿದೆ. ಜು.29ರಂದು ಅಧಿಸೂಚನೆ ಹೊರಬೀಳಲಿದೆ. ಆ.5 ನಾಮಪತ್ರ ಸಲ್ಲಿಕೆಗೆ ಕಡೆಯ ದಿನ. ಆ.6 ರಂದು ನಾಮಪತ್ರ ಪರಿಶೀಲನೆ. ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯಲು ಆ.8 ಕಡೆ ದಿನ. ಆ.26ರಂದು ಮತ ಎಣಿಕೆ ನಡೆಸಲಾಗುವುದು.