ಬಾಲಿವುಡ್ ನಟಿ ಜಿಯಾ ಆತ್ಮಹತ್ಯೆ
ಬಾಲಿವುಡ್ ನಟಿ ಜಿಯಾ ಖಾನ್(25) ಅವರು ಮುಂಬೈನ...
ಮುಂಬೈ: ಬಾಲಿವುಡ್ ನಟಿ ಜಿಯಾ ಖಾನ್(25) ಅವರು ಮುಂಬೈನ ಜುಹುನಲ್ಲಿರುವ ತಮ್ಮ ನಿವಾಸದಲ್ಲಿ ಸೋಮವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಸೋಮವಾರ ರಾತ್ರಿ ಜಿಯಾರ ತಾಯಿ ಮತ್ತು ಸಹೋದರಿ ಹೊರಹೋಗಿದ್ದ ವೇಳೆ ಜಿಯಾ ಮನೆಯಲ್ಲಿ ಒಬ್ಬರೇ ಇದ್ದರು. ಈ ವೇಳೆ ಅವರು ತಮ್ಮ ದುಪಟ್ಟಾದಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸುಮಾರು 11 ಗಂಟೆ ವೇಳೆಗೆ ತಾಯಿ, ಸಹೋದರಿ ವಾಪಸಾದಾಗ ಜಿಯಾ ಸಾವಿಗೀಡಾಗಿರುವುದು ಗೊತ್ತಾಗಿದೆ. ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.