ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ವಿಶ್ವಕರ್ಮರಿಗೆ ಆದ್ಯತೆ ನೀಡಿ: ಕೆ.ಪಿ. ನಂಜುಂಡಿ

Mainashree
Updated On : 13 Jun 2013, 12:43 pm

ನವದೆಹಲಿ: ವಿಶ್ವಕರ್ಮರಿಗೆ ಪಕ್ಷದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಆದ್ಯತೆ ನೀಡಿ ಎಂದು ವಿಶ್ವಕರ್ಮ ಸಮುದಾಯದ ನಾಯಕ ಕೆ.ಪಿ. ನಂಜುಂಡಿ ನೇತೃತ್ವದ ನಿಯೋಗ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಮನವಿ ಸಲ್ಲಿಸಿದೆ.
ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷರೂ ಆದ ಕೆಪಿಸಿಸಿ ಕಾರ್ಯದರ್ಶಿ ಕೆ.ಪಿ. ನಂಜುಂಡಿ ನೇತೃತ್ವದ ನಿಯೋಗದಲ್ಲಿ ವಿಶ್ವಕರ್ಮ ಸಮಾಜದ ಸ್ವಾಮೀಜಿಗಳಾದ ಸೂರ್ಯನಾರಾಯಣ ಸ್ವಾಮೀಜಿ, ನೀಲಕಂಠ ಅಚಾರ್ಯ, ರಾಮಚಂದ್ರ ಸ್ವಾಮೀಜಿ, ಮಹೇಂದ್ರ ಸ್ವಾಮೀಜಿ, ಮೌನೇಶ್ವರ ಸ್ವಾಮೀಜಿ ಸೇರಿದಂತೆ ವಿಶ್ವಕರ್ಮ ಸಮಾಜದ ಮುಖಂಡರು ಇದ್ದರು. ಬುಧವಾರ ಸೋನಿಯಾ ಗಾಂಧಿಯವರನ್ನು ಅವರ ನಿವಾಸದಲ್ಲಿ ಭೇಟಿಯಾದ ಕೆ.ಪಿ. ನಂಜುಂಡಿ ನೇತೃತ್ವದ ನಿಯೋಗ, ವಿಶ್ವಕರ್ಮ ಸಮಾಜದ ಪ್ರಗತಿಗಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿರುವ ಆಶ್ವಾಸನೆಗಳಿಗಾಗಿ ಸೋನಿಯಾರನ್ನು ಅಭಿನಂದಿಸಿದರು. ಆಶ್ವಾಸನೆಗಳನ್ನು ಆದಷ್ಚು ಬೇಗ ಜಾರಿ ಮಾಡಬೇಕು ಎಂದೂ ಮನವಿ ಮಾಡಿದರು. ವಿಶ್ವಕರ್ಮ ನಿಗಮ ಸ್ಥಾಪಿಸುವುದರ ಮೂಲಕ ವಿಶ್ವಕರ್ಮರ ಕುಲ ಕಸುಬುಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಈ ಬಗ್ಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು ಎಂದು ನಂಜುಂಡಿಯವರು ಸೋನಿಯಾ ಗಾಂಧಿಯವರ ಗಮನಕ್ಕೆ ತಂದಿರು. ಸೋನಿಯಾ ಗಾಂಧಿ ಅವರೊಂದಿಗಿನ ಭೇಟಿ ಯಶಸ್ವಿಯಾಗಿದೆ. ಸೋನಿಯಾ ಗಾಂಧಿ ನಮ್ಮ ಬೇಡಿಕೆಗಳನ್ನು ಆಲಿಸಿ, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಭೇಟಿಯ ಬಳಿಕ ನಂಜುಂಡಿಯವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ನಿಯೋಗವು ಎಐಸಿಸಿ ಅಧ್ಯಕ್ಷ ಆಸ್ಕರ್ ಫರ್ನಾಂಡಿಸ್ ಅವರನ್ನೂ ಭೇಟಿ ಮಾಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement