ಪ್ರಧಾನ ಸುದ್ದಿ

ಜೆಡಿಯು ಮನವೊಲಿಕೆ

ತೃತೀಯರಂಗವೆಂಬ ಪರ್ಯಾಯ ರಾಜಕೀಯ ಶಕ್ತಿಯೊಂದಿಗೆ ಹೆಜ್ಜೆಹಾಕಲು ತಯಾರಿ ನಡೆಸುತ್ತಿರುವ ಗೆಳೆಯ ಜೆಡಿಯು...

ನವದೆಹಲಿ/ಪಟ್ನಾ: ತೃತೀಯರಂಗವೆಂಬ ಪರ್ಯಾಯ ರಾಜಕೀಯ ಶಕ್ತಿಯೊಂದಿಗೆ ಹೆಜ್ಜೆಹಾಕಲು ತಯಾರಿ ನಡೆಸುತ್ತಿರುವ ಗೆಳೆಯ ಜೆಡಿಯು ತುಷ್ಟೀಕರಣಕ್ಕೆ ಸಾಧ್ಯವಾದ ಎಲ್ಲಾ ಪ್ರಯತ್ನವನ್ನು ಬಿಜೆಪಿ ಆರಂಭಿಸಿದೆ. ಹಿರಿಯ ಮುಖಂಡ ಎಲ್.ಕೆ. ಆಡ್ವಾಣಿ, ನಿತಿನ್ ಗಡ್ಕರಿ, ಮುಖ್ತಾರ್ ಅಬ್ಬಾಸ್ ನಖ್ವಿ ಸೇರಿ ಬಿಜೆಪಿಯ ಹಲವು ಮುಖಂಡರು ಬಿಹಾರ ಸಿಎಂ ನಿತೀಶ್ ಕುಮಾರ್, ಜೆಡಿಯು ಅಧ್ಯಕ್ಷ ಶರದ್‌ಯಾದವ್ ಜತೆ ಒಬ್ಬರಾದ ಮೇಲೆ ಒಬ್ಬರು ಮಾತುಕತೆ ನಡೆಸಿದ್ದಾರೆ. ಎರಡೂ ಪಕ್ಷಗಳ ನಡುವಿನ 17 ವರ್ಷಗಳಷ್ಟು ಹಳೆಯ ಮೈತ್ರಿ ಮುರಿಯದಂತೆ ಮನವೊಲಿಕೆ ಕಾರ್ಯ ನಡೆಸುತ್ತಿದ್ದಾರೆ.
ಇಷ್ಟಾದರೂ ಜೆಡಿಯುನಿಂದ ಈವರೆಗೆ ಬಿಜೆಪಿಗೆ ಯಾವುದೇ ಪೂರಕ ಭರವಸೆ ದೊರೆತಿಲ್ಲ. ಎನ್‌ಡಿಎ ಮೈತ್ರಿಕೂಟದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳಿಂದ ಬೇಸರವಾಗಿದೆ ಎಂದಿರುವ ನಿತೀಶ್ ಕುಮಾರ್ ಹಾಗೂ ಶರದ್ ಯಾದವ್ ಎನ್‌ಡಿಎ ಮೈತ್ರಿಕೂಟದಲ್ಲಿ ಮುಂದುವರಿಯುವ ಕುರಿತು ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಸಭೆ ನಡೆಸಿದ ಬಳಿಕವಷ್ಟೇ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಬಿಜೆಪಿಗೆ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಎಸ್ಪಿ, ಟಿಡಿಪಿ ಬೆಂಬಲ: ಈ ಮಧ್ಯೆ, ಮಮತಾ ಬ್ಯಾನರ್ಜಿ ಅವರು ಬಿತ್ತಿದ ಫೆಡರಲ್ ಫ್ರಂಟ್ ಕನಸಿನ ನಾವೆಗೆ ಹುಟ್ಟುಹಾಕಲು ಸಮಾಜವಾದಿ ಪಕ್ಷ, ತೆಲುಗುದೇಶಂ ಪಕ್ಷ ಕೂಡ ಮುಂದೆ ಬಂದಿವೆ. ಕೇಂದ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯೇತರ ಸರ್ಕಾರ ರಚನೆಯಾದರೆ ಅದಕ್ಕೆ ತಮ್ಮ ಬೆಂಬಲ ಇದೆ ಎಂದು ಎಸ್ಪಿ ಮುಖಂಡ, ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಘೋಷಿಸಿದ್ದಾರೆ.
 ಏತನ್ಮಧ್ಯೆ, ಜೆಡಿಎಸ್ ಮುಖಂಡ, ಮಾಜಿ ಪ್ರಧಾನಿ ದೇವೇಗೌಡ ಅವರೂ ಪ್ರಾದೇಶಿಕ ಪಕ್ಷಗಳ ನೇತೃತ್ವದಲ್ಲಿ ರಚನೆಯಾಗುವ ಸರ್ಕಾರಕ್ಕೆ ತಮ್ಮ ಬೆಂಬಲ ಇದೆ ಎಂದಿದ್ದಾರೆ. ಇದರಿಂದ ತೃತೀಯ ರಂಗದ ಕನಸಿಗೆ ಇನ್ನಷ್ಟು ಬಲ ಸಿಕ್ಕಂತಾಗಿದೆ.

ಶರದ್‌ರನ್ನು ಭೇಟಿಯಾದ ಗಡ್ಕರಿ, ನಖ್ವಿ
ಬಿಜೆಪಿ ಮುಖಂಡರಾದ ಗಡ್ಕರಿ ಹಾಗೂ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಜೆಡಿಯು ಅಧ್ಯಕ್ಷ ಶರದ್ ಯಾದವ್‌ರನ್ನು ಗುರುವಾರ ದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಇದಕ್ಕೂ ಮೊದಲು ಆಡ್ವಾಣಿ ಅವರು ನಿತೀಶ್‌ರಿಗೆ ಕರೆ ಮಾಡಿ ಎನ್‌ಡಿಎಯಿಂದ ಹೊರಹೋಗದಂತೆ ಮನವಿ ಮಾಡಿದ್ದಾರೆ.

ತೃತೀಯ ರಂಗ ತಳ್ಳಿಹಾಕದ ನಿತೀಶ್
ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ತೃತೀಯ ರಂಗ ರಚನೆ ಕುರಿತು ಹೊಂದಿರುವ ಒಲವನ್ನು ಒಪ್ಪಿಕೊಂಡಿದ್ದಾರೆ. ಪ್ರಾದೇಶಿಕ ಪಕ್ಷಗಳಾದ ಜೆಡಿಯು, ಬಿಜೆಡಿ ಹಾಗೂ ತೃಣಮೂಲ ಕಾಂಗ್ರೆಸ್ ಸೇರಿಕೊಂಡುಒಂದು ಒಕ್ಕೂಟ ರಚಿಸಿದರೆ ಉತ್ತಮ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಜತೆಗೆ, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಒಡಿಶಾ ಸಿಎಂ ನವೀನ್ ಪಟ್ನಾಯಕ್ ಜತೆ ನಿರಂತರ ಸಂಪರ್ಕದಲ್ಲಿರುವುದಾಗಿಯೂ ಅವರು ತಿಳಿಸಿದ್ದಾರೆ. 'ಪಶ್ಚಿಮ ಬಂಗಾಳ, ಒಡಿಶಾ ಮತ್ತು ಬಿಹಾರ ಒಂದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದೆ. ನಮ್ಮ ಗುರಿಗಳು ಒಂದೇ ಆಗಿವೆ. ಫೆಡರಲ್ ಫ್ರಂಟ್ ಕುರಿತು ಮಾತುಕತೆ ನಡೆಯುತ್ತಿದೆ. ಈ ಪ್ರಕ್ರಿಯೆ ಈಗ ಆರಂಭಿಕ ಹಂತದಲ್ಲಿದೆ. ಹಾಗಾಗಿ ಈ ಕುರಿತು ಈಗಲೇ ಮಾತನಾಡುವುದು ಸರಿಯಲ್ಲ ಎಂದು ನಿತೀಶ್ ಕುಮಾರ್ ತಿಳಿಸಿದ್ದಾರೆ.

ಮೋದಿ ಭಸ್ಮಾಸುರ
ಕೇಂದ್ರ ಸಚಿವ ಜೈರಾಂ ರಮೇಶ್ ಅವರು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಭಸ್ಮಾಸುರನಿಗೆ ಹೋಲಿಸಿದ್ದಾರೆ. ಮೋದಿ ಅವರೊಬ್ಬ ಭಸ್ಮಾಸುರ. ಅವರು ತಮ್ಮನ್ನು ಬೆಳೆಸಿದ ವ್ಯಕ್ತಿಗಳನ್ನೇ ನುಂಗಿಹಾಕುತ್ತಾರೆ. ಈಗಾಗಲೇ ಅವರು ತಮ್ಮ ಗುರು ಎಲ್.ಕೆ. ಆಡ್ವಾಣಿ ಅವರನ್ನು ನುಂಗಿದ್ದಾರೆ. 2002ರ ದಂಗೆಯಲ್ಲಿ ಸಹಕಾರ ನೀಡಿದ ತಗೋಡಿಯಾ ಅವರನ್ನೂ ಮೋದಿ ನುಂಗಿ ಹಾಕಿದ್ದಾರೆ ಎಂದು ರಮೇಶ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!