ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಭೂಗತ ಪಾತಕಿ ನಿಖಿಲ್ ಶೆಟ್ಟಿ ಸೆರೆ

Mainashree
Updated On : 14 Jun 2013, 10:29 am

ಮಂಗಳೂರು: ಬೆಂಗಳೂರು ಚೆಮ್ಮನ್ನೂರ್ ಜುವೆಲ್ಲರಿ ದರೋಡೆ ಪ್ರಕರಣ ಆರೋಪಿ ಮತ್ತು ಮಂಗಳೂರಿನ ರೌಡಿ ವಾಮಂಜೂರು ರೋಹಿ ಕೊಲೆ ಸಂಚು ರೂವಾರಿ ನಿಖಿಲ್ ಶೆಟ್ಟಿಯನ್ನು ಇಂಟರ್‌ಪೋಲ್ ಸಹಾಯದಿಂದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಭೂಗತ ಪಾತಕಿ ರವಿ ಪೂಜಾರಿ ಸಹಚರನಾಗಿರುವ ನಿಖಿಲ್ ಶೆಟ್ಟಿ ಕುರಿತು ದುಬೈ ಇಂಟರ್‌ಪೋಲ್‌ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಫೆ.28ರಂದು ಅಲ್ಲಿ ಬಂಧಿಸಿದ್ದರು. ನಿಖಿಲ್ ಶೆಟ್ಟಿ ವಿರುದ್ಧ ಭಾರತ ರೆಡ್‌ಕಾರ್ನರ್ ನೋಟಿಸ್ ಹೊರಡಿಸಿತ್ತು. ಸಿಸಿಬಿ ಇನ್ಸ್‌ಪೆಕ್ಟರ್ ಡಾ.ಎಚ್. ಎನ್.ವೆಂಕಟೇಶ್ ಪ್ರಸನ್ನ ನೇತೃತ್ವದ ತಂಡ ದಿಲ್ಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಗುರುವಾರ ರಾತ್ರಿ ವಶಕ್ಕೆ ತೆಗೆದುಕೊಂಡಿದೆ ಎಂದು ಪೊಲೀಸ್ ಕಮಿಷನರ್ ಮನೀಷ್ ಕರ್ಬಿಕರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬೆಂಗಳೂರಲ್ಲಿ ಚೆಮ್ಮನ್ನೂರು ಜುವೆಲ್ಲರಿ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ನಿಖಿಲ್ ಪ್ರಕಾಶ್ ಶೆಟ್ಟಿ ಮುಖ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿತ್ತು.  ಬಳಿಕ ಮಂಗಳೂರಿನ ವಾಮಂಜೂರು ರೋಹಿ ಯಾನೆ ರೋಹಿದಾಸ ಶೆಟ್ಟಿ ಕೊಲೆಯಲ್ಲಿ ಹಂತಕರಿಗೆ ಆಯುಧ ನೀಡಿದ್ದು, ಕೊಲೆ ಸಂಚು ರೂಪಿಸಿದ ಆರೋಪವೂ ಈತನ ಮೇಲಿದೆ ಎಂದು ಅವರು ಹೇಳಿದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement